ಜಿಬಿಎ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿಗೆ ಸಜ್ಜು

ಬಿಜೆಪಿ
ಬಿಜೆಪಿ
Published on
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವ್ಯಾಪ್ತಿಯ 5 ಪಾಲಿಕೆ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ.
ಈಗಾಗಲೇ ಬಿಜೆಪಿಯ ಜಿಬಿಎ ಚುನಾವಣೆ ಉಸ್ತುವಾರಿ ರಾಮ್ ಮಾಧವ್ ನೇತೃತ್ವದಲ್ಲಿ ನೇಮಕ ಮಾಡಿರುವ ಉಸ್ತುವಾರಿಗಳು ಕೂಡಲೇ ವಾರ್ಡ್‌ಮಟ್ಟದಲ್ಲಿ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿ, ಗೆಲ್ಲವ ಅಭ್ಯರ್ಥಿ ಯಾರೆಂಬುದರ ಬಗ್ಗೆ ವರದಿ ಸಿದ್ಧಪಡಿಸುವಂತೆ ಬಿಜೆಪಿ ಸೂಚನೆ ಸೂಚನೆ ನೀಡಿದೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜಿಬಿಎ ಚುನಾವಣಾ ಉಸ್ತುವಾರಿಗಳ ಸಭೆ ನಡೆಸಲಾಯಿತು. ಈಗಾಗಲೇ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಉಸ್ತುವಾರಿಗಳು ಕೂಡಲೇ ವಾರ್ಡ್‌ಮಟ್ಟದಲ್ಲಿ ಸಭೆಗಳನ್ನು ಕರೆಯಬೇಕು. ವಾರ್ಡ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಜಿಬಿಎ ಚುನಾವಣೆಗೆ ಸಿದ್ದತೆ ನಡೆಸಲು ಸೂಚನೆಗಳನ್ನು ನೀಡಬೇಕು. ಕಾಂಗ್ರೆಸ್ ರಾಜ್ಯ ಸರ್ಕಾರದ ವೈಲ್ಯಗಳನ್ನು ಗುರುತು ಮಾಡಿ ಪ್ರತಿಯೊಂದು ಮನೆ ಮನೆಗೆ ತಲುಪಿಸುವ ಕೆಲಸವನ್ನು ಸಹ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೆಲಸದಲ್ಲಿ ಬಿಜೆಪಿ ಶಾಸಕರು, ಸಂಸದರು ಮತ್ತು ಮುಖಂಡರ ಮುಂದಾಗಬೇಕೆಂದು ನಿರ್ಧಾರಗಳನ್ನು ಮಾಡಲಾಗಿದೆ.
ಇದಲ್ಲದೆ, ವಾರ್ಡ್‌ಮಟ್ಟದ ಸಭೆಯಲ್ಲಿ ಚುನಾವಣಾ ಆಕಾಂಕ್ಷಿಗಳ 4 ರಿಂದ 5 ಜನರ ಪಟ್ಟಿಯನ್ನು ಸಿದ್ದಪಡಿಸಬೇಕು. ಅದರಲ್ಲಿ ಯಾರಿಗೆ ಮತದಾರರ ಒಲವು ಹೆಚ್ಚಾಗಿದೆ, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಯಾವ ರೀತಿ ನಡೆಸುತ್ತಿದ್ದಾರೆ. ಗೆಲ್ಲುವ ಸಾಮರ್ಥ್ಯ ಎಷ್ಟಿದೆ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಎಂಬುದರ ಬಗ್ಗೆ ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಬೇಕು. ಈ ಪಟ್ಟಿಯನ್ನು ಮುಂದಿನ ಸಭೆಯ ಮುಂದಿಟ್ಟ ಚರ್ಚೆ ನಡೆಸಲು ಸಲಹೆಗಳು ಕೇಳಿಬಂದಿವೆ.
ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕವಾದ ಮೇಲೆ ಚುನಾವಣೆ ಮುಂದೂಡಲಾಗುತ್ತದೆ ಎಂಬ ಕಾರಣಕ್ಕೆವಾರ್ಡ್‌ಮಟ್ಟದಲ್ಲಿ ಚುನಾವಣಾ ತಯಾರಿ ನಡೆದಿರಲಿಲ್ಲ. ಆದರೆ, ಸುಪ್ರೀಂಕೋರ್ಟ್ ಆದೇಶ ಇರುವ ಕಾರಣ ಯಾವುದೇ ಕ್ಷಣದಲ್ಲಿ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆಗಳು ಇವೆ. ಈ ಸಲುವಾಗಿ ಗೊಂದಲಕ್ಕೆ ಒಳಗಾಗದೆ ತಕ್ಷಣದಿಂದಲೇ ವಾರ್ಡ್‌ಮಟ್ಟದಲ್ಲಿ ತಯಾರಿ ಆಗಬೇಕು ಎಂದು ಸಭೆಯಲ್ಲಿ ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿಯ ಮೂಲಗಳು ಮಾಹಿತಿ ನೀಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net