ಬಸವಕಲ್ಯಾಣದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಜಯದೇವಿ ತಾಯಿ ಲಿಗಾಡೆ ಜಯಂತಿ ಕಾರ್ಯಕ್ರಮದಲ್ಲಿ ಡಾ.ಗುರಮ್ಮ ಸಿದ್ದಾರಡ್ಡಿ ಅವರಿಗೆ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ, ಬೀದರ್ ವಿವಿ ಕುಲಪತಿ ಪೊ.ಬಿ.ಎಸ್.ಬಿರಾದಾರ, ಡಾ.ಎಸ್.ಬಿ.ದುರ್ಗೆ, ಡಾ.ಪಲ್ಲವಿ ಪಾಟೀಲ್, ಚೇತನಾ ಪಾಟೀಲ್, ಸವಿತಾ ದೇಶಮುಖ ಇತರರಿದ್ದರು.
ಬಸವಕಲ್ಯಾಣ: ಕನ್ನಡ ನಾಡು-ನುಡಿಗೆ ಡಾ.ಜಯದೇವಿ ತಾಯಿ ಲಿಗಾಡೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅನುಭವ ಮಂಟಪದ ಭಕ್ತಿಭವನ ಪರಿಸರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಡಾ.ಜಯದೇವಿ ತಾಯಿ ಲಿಗಾಡೆ ಅವರ 115ನೇ ಜಯಂತಿ ಹಾಗೂ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಲಿಗಾಡೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ್ದರೂ ತಮ್ಮ ಇಡೀ ಜೀವನವನ್ನು ಕನ್ನಡ ಮತ್ತು ಕರ್ನಾಟಕಕ್ಕಾಗಿ ಸಮರ್ಪಿಸಿದ್ದರು ಎಂದು ಬಣ್ಣಿಸಿದರು.
ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಅವರು ಕನ್ನಡ ಕೋಟೆ ಭದ್ರಗೊಳಿಸುವ ಕಾರ್ಯ ಮಾಡಿದ್ದರು. ಬಸವಾದಿ ಶರಣರ ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಕನ್ನಡತ್ವ ಮತ್ತು ಬಸವತತ್ವವೇ ಉಸಿರಾಗಿಸಿಕೊಂಡಿದ್ದರು. ಕನ್ನಡ ಶರಣರ ಪರಿಚಯ ಮರಾಠಿ ಭಾಷಿಕರಿಗೆ ಮಾಡಿಕೊಡುವ ಶ್ರೇಯಸ್ಸು ತಾಯಿಯವರಿಗೆ ಸಲ್ಲುತ್ತದೆ. ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಜತೆ ಆತ್ಮೀಯ ಭಕ್ತಿಸಂಬಂಧ ಹೊಂದಿದ್ದರು ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಆಯುಕ್ತೆ ಡಾ.ಗುರಮ್ಮ ಸಿದ್ದಾರಡ್ಡಿ ಅವರಿಗೆ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿದ ಬೀದರ್ ವಿಶ್ವವಿದ್ಯಾಲಯ ಕುಲಪತಿ ಪೊ.ಬಿ.ಎಸ್. ಬಿರಾದಾರ ಮಾತನಾಡಿ, ತಾಯಿ ಲಿಗಾಡೆ ಅವರ ಕನ್ನಡ ಸೇವೆ ಅವಿಸ್ಮರಣೀಯ. ಅವರ ಸಮಾಜಪರ ಕಾಳಜಿ, ಕನ್ನಡ ಮತ್ತು ಶರಣ ಸಾಹಿತ್ಯಕ್ಕೆ ನೀಡಿದ ಕೊಡುಗೆ ದೊಡ್ಡದು. ಅವರ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರ ಪ್ರತಿವರ್ಷ ನೀಡುತ್ತಿರುವುದು ಶ್ಲಾನೀಯ. ಗುರಮ್ಮ ಸಿದ್ದಾರಡ್ಡಿ ಸಮಾಜಮುಖಿ ಕಾರ್ಯಗಳ ಮೂಲಕ ಅನುಪಮ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಘಾಟನೆ ನೆರವೇರಿಸಿದ ಬಸವಕಲ್ಯಾಣ ಕ್ಷೇತ್ರ ಸಮಿತಿ ಮುಖ್ಯಸ್ಥರಾದ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಜಯದೇವಿ ತಾಯಿ ಲಿಗಾಡೆ ಕನ್ನಡ ಮತ್ತು ಮರಾಠಿಯಲ್ಲಿ ತಮ್ಮ ಬರವಣಿಗೆ ಮೂಲಕ ಬಸವಾದಿ ಶರಣರ ತತ್ವ ಸಂದೇಶಗಳನ್ನು ಜನಮಾನಸಕ್ಕೆ ಮುಟ್ಟಿಸಿದ್ದಾರೆ. ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರ ಆದರ್ಶ ಜೀವನ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ಆಶಿಸಿದರು.
ಭಾಲ್ಕಿ ಶ್ರೀ ಗುರುಬಸವ ಪಟ್ಟದ್ದೇವರು ಆಶಯ ನುಡಿಗಳನ್ನು ಆಡಿದರು. ಶ್ರೀ ಶಿವಾನಂದ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು. ಡಾ.ಜಯದೇವಿ ತಾಯಿ ಲಿಗಾಡೆ ಬದುಕು&ಬರಹ ಮತ್ತು ಅದರ್ಶ ಕುರಿತು ಡಾ.ಪಲ್ಲವಿ ಪಾಟೀಲ್ ಅನುಭಾವ ನೀಡಿದರು. ಸವಿತಾ ನಿರಂಜನ ದೇಶಮುಖ ಪ್ರಾಸ್ತಾವಿಕ ಮಾತನಾಡಿದರು. ಅನುಭವ ಮಂಟಪ ಟ್ರಸ್ಟ್ ಕಾರ್ಯದರ್ಶಿ ಡಾ.ಎಸ್.ಬಿ. ದುರ್ಗೆ, ಎಸ್.ಎಸ್.ಹಿರೇಮಠ, ಹಿರಿಯ ನೇತ್ರ ತಜ್ಞೆ ಡಾ.ರಾಜಶ್ರೀ ರಡ್ಡಿ ಇದ್ದರು. ಚೇತನಾ ವೀರಶೆಟ್ಟಿ ಪಾಟೀಲ್ ಸ್ವಾಗತಿಸಿದರು. ಡಾ.ಸಂಗೀತಾ ಮಂಠಾಳೆ ನಿರೂಪಣೆ ಮಾಡಿದರು. ರಾಜಕುಮಾರ ಹೂಗಾರ ವಚನ ಗಾಯನ ಮಾಡಿದರು. ಮೂಗಿ ಪರಿವಾರದವರಿಂದ ಪ್ರಸಾದ ದಾಸೋಹ ನಡೆಯಿತು.
"
ಡಾ.ಜಯದೇವಿ ತಾಯಿ ಲಿಗಾಡೆ ಸ್ಮರಣಾರ್ಥ ಪ್ರತಿವರ್ಷ ನೀಡುತ್ತಿರುವ ಈ ಪ್ರಶಸ್ತಿಯನ್ನು ಈ ಸಲ ಡಾ.ಗುರಮ್ಮ ಸಿದ್ದಾರಡ್ಡಿ ಅವರಿಗೆ ಪ್ರದಾನ ಮಾಡಲು ನಮಗೆ ಅತೀವ ಸಂತೋಷವಾಗುತ್ತಿದೆ. ಗುರಮ್ಮ ತಾಯಿ ಅವರದು ಸೇವೆಯ ಬದುಕಾಗಿದೆ.
— > ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು
"
12ನೇ ಶತಮಾನದಲ್ಲಿ ಬಸವಾದಿ ಶರಣರು ಸಿಯರಿಗೆ ಸ್ವಾತಂತ್ರ, ಸಮಾನತೆ ಹಾಗೂ ಅತ್ಯಂತ ಗೌರವ ಕೊಟ್ಟಿದ್ದರು. ಪೂಜ್ಯ ಚನ್ನಬಸವ ಪಟ್ಟದ್ದೇವರು ಹಿಂದೆ ಅನುಭವ ಮಂಟಪದ ಉದ್ಘಾಟನೆಯನ್ನು ಡಾ.ಜಯದೇವಿ ತಾಯಿ ಲಿಗಾಡೆ ಹಸ್ತದಿಂದಲೇ ನೆರವೇರಿಸಿದ್ದರು.
— > ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ
"
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ್ದರೂ ಕಲ್ಯಾಣವನ್ನೇ ಕಾರ್ಯೇತ್ರ ಮಾಡಿಕೊಂಡಿದ್ದ ಡಾ.ಜಯದೇವಿ ತಾಯಿ ಲಿಗಾಡೆ ಕನ್ನಡ ಮತ್ತು ವಚನ ಸಾಹಿತ್ಯದ ಬಗ್ಗೆ ಆಳವಾದ ಆಧ್ಯಯನ ಮಾಡಿದ್ದರು. ಸಾಹಿತ್ಯ ೇತ್ರಕ್ಕೆ ಮಹತ್ವದ ಕೊಡುಗೆ ನೀಡುವ ಜತೆಗೆ ಕಲ್ಯಾಣ ಕರ್ನಾಟಕದಲ್ಲಿ ಶರಣ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ. ನಿಜಾಮರ ಆಡಳಿತ ಅವಧಿಯಲ್ಲಿ ಈ ಭಾಗದ ಶಾಲೆಗಳಿಗೆ ಕನ್ನಡ ಭಾಷೆ ಕಲಿಸಲು ಅಂದು ವಿಜಯಪುರದಿಂದ 400 ವಿದ್ಯಾವಂತರನ್ನು ಕರೆಸಿದ್ದರು. ಸರ್ಕಾರ ನೇಮಕ ಮಾಡಿ ಅವರಿಗೆ ಸಂಬಳ ಕೊಡುವವರೆಗೆ ತಾವೇ ಸಂಬಳ ನೀಡಿದ್ದರು.