ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ ಯಾದಗಿರಿಯಲ್ಲಿ ಸೋಮವಾರ ವಿವಿಧ ಹಿಂದೂ ಸಂಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಪರಶುರಾಮ ಶೇಗುರಕರ್, ತ್ಯಾಗರಾಜ್ ತಾಂಡೂರಕರ್, ವೀರೇಶ ಸಾಹುಕಾರ, ಮಂಜುನಾಥ ಚಿಂತನಹಳ್ಳಿ, ಪವನ ಲಿಂಗೇರಿ, ಸುರೇಶ ನಾಯಕ್, ಕಾಶಿ ಬೆಳಗೆರಿ ಇತರರಿದ್ದರು.
ಯಾದಗಿರಿ: ಹಿಂದೂ ಸಂಟನೆಗಳ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ, ಹೈದರಾಬಾದ್ ನಗರದ ಶಾಸಕ ರಾಜಾಸಿಂಗ್ ಅವರನ್ನು ಜಿಲ್ಲೆಗೆ ಒಂದು ತಿಂಗಳ ಕಾಲ ರ್ನಿಬಂಧ ಹೇರಿದ್ದನ್ನು ಖಂಡಿಸಿ ಮತ್ತು ಕಾನೂನು ಉಲ್ಲಂಸಿ ಮಸಿದಿಗಳಲ್ಲಿ ಹೆಚ್ಚಿನ ಶಬ್ದ ಹರಿಬಿಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ವೀರ ಸಾವರ್ಕರ್ ಸೇನೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸೇನಾ ಸಂಟನಗಳ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.
ಛತ್ರಪತಿ ಶಿವಾಜಿ ಮಹಾರಾಜ ಸೇನಾ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಶೇಗುರಕರ್ ಮತ್ತು ವೀರ ಸಾವರ್ಕರ್ ಸೇನೆ ಜಿಲ್ಲಾಧ್ಯಕ್ಷ ತ್ಯಾಗರಾಜ್ ತಾಂಡೂರಕರ್ ನೇತೃತ್ವದಲ್ಲಿ ಸುಭಾಷ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಅಲ್ಲಿಂದ ಡಿಸಿ ಕಚೇರಿ ಆಗಮಿಸಿ ಅಲ್ಲೂ ಬೇಡಿಕೆಗಳಿಗೆ ಒತ್ತಾಯಿಸಿದರು.
ಬಹಳ ಸತಾಯಿಸಿ ಶಿವಾಜಿ ಜಯಂತಿಗೆ ಪರವಾನಿಗೆ ನೀಡಿದ ಜಿಲ್ಲಾಡಳಿತ ಹೈದರಾಬಾದ್ ನಗರದ ಶಾಸಕ ರಾಜಾಸಿಂಗ್ ಅವರನ್ನು ಕೊನೇ ಳಿಗೆಯಲ್ಲಿ ಜಿಲ್ಲೆಗೆ ಒಂದು ತಿಂಗಳು ರ್ನಿಬಂಧ ಹೇರಿದ್ದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದು ಶೇಗುರಕರ್ ಮತ್ತು ತಾಂಡೂರಕರ್ ಆರೋಪಿಸಿದರು.
ಶಾಸಕ ರಾಜಾಸಿಂಗ್ ಅವರ ಮೇಲೆ ಹಾಕಲಾಗಿರುವ ರ್ನಿಬಂಧ ಕೂಡಲೇ ಹಿಂಪಡೆಯಬೇಕು. ಕಾರ್ಯಕ್ರಮ ಮಾಡಲು ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿದರು. ಸಂಟನೆಗಳ ಪದಾಧಿಕಾರಿಗಳಾದ ವೀರೇಶ ಸಾಹುಕಾರ, ಮಂಜುನಾಥ ಚಿಂತನಹಳ್ಳಿ, ಪವನ ಲಿಂಗೇರಿ, ಸುರೇಶ ನಾಯಕ್, ಕಾಶಿ ಬೆಳಗೆರಿ ಇತರರಿದ್ದರು.