ಏತ ನೀರಾವರಿ ವಿಳಂಬ ಖಂಡಿಸಿ ಪ್ರತಿಭಟನೆ

ರಾಮದುರ್ಗದ ಪ್ರೆಸ್​ಕ್ಲಬ್​ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೆತ ಮುಖಂಡ ಜಗದೀಶ ದೇವರಡ್ಡಿ ಮಾತನಾಡಿದರು. ಸುರೇಶಗೌಡ ಪಾಟೀಲ, ವಿ.ಎಸ್​.ಪಾಟೀಲ, ಮಾರುತಿ ಕುಂಬಾರ ಇತರರಿದ್ದರು.
ರಾಮದುರ್ಗದ ಪ್ರೆಸ್​ಕ್ಲಬ್​ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೆತ ಮುಖಂಡ ಜಗದೀಶ ದೇವರಡ್ಡಿ ಮಾತನಾಡಿದರು. ಸುರೇಶಗೌಡ ಪಾಟೀಲ, ವಿ.ಎಸ್​.ಪಾಟೀಲ, ಮಾರುತಿ ಕುಂಬಾರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿಗೆ ಸಂಬಂಧಿಸಿದಂತೆ ರೆತರಿಂದ ಸ್ವಾಧಿನಪಡಿಸಿಕೊಂಡ ಭೂಮಿಗೆ ಸರ್ಕಾರ ಶೇ.5ರಷ್ಟು ರೆತರಿಗೆ ಮಾತ್ರ ಪರಿಹಾರ ದೊರೆತಿದೆ. ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಪ್ಪು ಮಾಹಿತಿ ನೀಡಿ, ರೆತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರಾಜ್ಯ ರೆತಸಂ ಹಾಗೂ ಹಸಿರುಸೇನೆ ಅಧ್ಯ ಜಗದೀಶ ದೇವರಡ್ಡಿ ಆರೋಪಿಸಿದರು.
ನಗರದ ಪ್ರೆಸ್​ಕ್ಲಬ್​ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಪ್ರಾರಂಭವಾಗಿ 9 ವರ್ಷ ಕಳೆದಿವೆ. ಪ್ರಾರಂಭದಲ್ಲಿ ಇದ್ದ ವೇಗ ಸಂಪೂರ್ಣ ಸ್ಥಗಿತಗೊಂಡಿದ್ದು, ಗುತ್ತಿಗೆದಾರರಿಗೆ ಸಮರ್ಪಕ ಬಿಲ್​ ಸಂದಾಯವಾಗಿಲ್ಲ. ಬಸವೇಶ್ವರ ಏತ ನೀರಾವರಿ ಕಾಮಗಾರಿ ಶೇ.80ರಷ್ಟು ಮುಗಿದಿದೆ. ಶೇ.20ರಷ್ಟು ಕಾಮಗಾರಿ ಬಾಕಿ ಇದೆ ಎಂದು ಹೇಳಿದರು.
ಪ್ರತಿಭಟನೆ: ಎರಡು ಏತ ನೀರಾವರಿ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ, ಮೇ 25ರಂದು ಬೆಳಗ್ಗೆ 9 ಗಂಟೆಯಿಂದ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಿಂದ ಕಾಲ್ನಡಿಗೆ ಮುಖಾಂತರ ಸಾಲಹಳ್ಳಿಗೆ ಆಗಮಿಸಿ, ಬೆಳಗಾವಿ&ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಗುರ್ಲಾಪುರ ಮಾದರಿಯಲ್ಲಿ ಹೋರಾಟ ಮಾಡಲಾಗುವುದು. ರೆತ ಸಂದ ಗೌರವಾಧ್ಯ ಶಶಿಕಾಂತ ಗೂರೂಜಿ, ರಾಜ್ಯಾಧ್ಯ ಚೂನಪ್ಪ ಪೂಜಾರಿ ಪಾಲ್ಗೊಳ್ಳಲಿದ್ದು, ತಾಲೂಕಿನ ಸಮಸ್ತ ರೆತರು ಪಾಲ್ಗೊಳ್ಳಬೇಕು ಎಂದರು.
ಕಬ್ಬು ಬೆಳೆಗಾರರ ಸಂದ ಜಿಲ್ಲಾಧ್ಯ ಸುರೇಶಗೌಡ ಪಾಟೀಲ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರೆತ ಮುಖಂಡರಾದ ವಿ.ಎಸ್​.ಪಾಟೀಲ, ಮಾರುತಿ ಕುಂಬಾರ, ಈರನಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net