ಬಸವಕಲ್ಯಾಣ: ಜ್ಞಾನಾರ್ಜನೆಗೆ ಗ್ರಂಥಾಲಯ ಸಹಕಾರಿಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಖಾಧಿಕಾರಿ ನಿಂಗಪ್ಪ ಹೇಳಿದರು. ಬಿಕೆಡಿಬಿ ಸಭಾಭವನದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ವಿಜ್ಞಾನ ಪಿತಾಮಹದ ಡಾ. ಎನ್.ಆರ್.ರಂಗನಾಥನ್ ಜನ್ಮದಿನದ ನಿಮಿತ್ತ ಬುಧವಾರ ಆಯೋಜಿಸಿದ್ದ ಗ್ರಂಥ ಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಂಥಾಲಯಕ್ಕೆ ರಂಗನಾಥನ್ ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದು ಬಣ್ಣಿಸಿದರು. ಗ್ರಂಥಾಲಯ ಸಿಬ್ಬಂದಿ ದೀಪಾಲಿ ಮಾನೆ, ಪ್ರಮುಖರಾದ ಲೋಕೇಶ್ ಕನಕ, ಬಲಭೀಮ ವಾನಕೆಡೆ, ಬಸವರಾಜ ಮುಚಳಂಬ, ಓದುಗ ವಿದ್ಯಾರ್ಥಿಗಳು ಇದ್ದರು.