ವಿದ್ಯಾರ್ಥಿಗಳನ್ನು ಸಾಧಕರಾಗಿ ರೂಪಿಸಲಿ

ಗೋಕಾಕ ವಲಯದಿಂದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ರಮೇಶ ಜಾರಕಿಹೊಳಿ, ಡಾ.ಮೋಹನ ಭಸ್ಮೆ, ಜಿ.ಬಿ.ಬಳಗಾರ ಇತರರಿದ್ದರು.
ಗೋಕಾಕ ವಲಯದಿಂದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ರಮೇಶ ಜಾರಕಿಹೊಳಿ, ಡಾ.ಮೋಹನ ಭಸ್ಮೆ, ಜಿ.ಬಿ.ಬಳಗಾರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗೋಕಾಕ
ವಿದ್ಯಾರ್ಥಿಗಳ ಶೆಣಿಕ ಪ್ರಗತಿಗಾಗಿ ೇತ್ರದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗಿದ್ದು ಇದರ ಸದುಪಯೋಗದಿಂದ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಸಾಧನೆ ಮಾಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ತಮ್ಮ ಕಾರ್ಯಾಲಯದಲ್ಲಿ ೇತ್ರಶಿಣಾಧಿಕಾರಿಗಳ ಕಾರ್ಯಾಲಯದಿಂದ ಭಾನುವಾರ ಹಮ್ಮಿಕೊಂಡಿದ್ದ ಗೋಕಾಕ ವಲಯದಿಂದ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್​ ಪಡೆದ ವಿದ್ಯಾರ್ಥಿಗಳು ಹಾಗೂ ವಲಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಶೇ.100ರಷ್ಟು ಲಿತಾಂಶ ಪಡೆದ ಶಾಲೆ ಮುಖ್ಯಶಿಕ್ಷಕರನ್ನು ಸತ್ಕರಿಸಿ ಮಾತನಾಡಿದರು. ಶಿಕರು ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಣ ನೀಡಿ ಅವರನ್ನು ಸಾಧಕರನ್ನಾಗಿ ಮಾಡಬೇಕು. ಪಾಲಕರು ತಮ್ಮ ಮಕ್ಕಳ ಶಿಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ೇತ್ರ ಶಿಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ, ಎಸ್​ಎಸ್​ಎಲ್​ಸಿ ಪರೀೆಯನ್ನು ವಲಯದಲ್ಲಿ 4,069 ವಿದ್ಯಾರ್ಥಿಗಳು ಬರೆದಿದ್ದು ಅದರಲ್ಲಿ 3,750ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.92.18 ಲಿತಾಂಶ ಬಂದಿದೆ ಎಂದು ತಿಳಿಸಿದರು.
ತಹಸೀಲ್ದಾರ್​ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸ್ತೆ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೊಲಿಸಗೌಡರ, ಕಾಂತು ಎತ್ತಿನಮನಿ, ಸುರೇಶ ಸನದಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net