ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

ವಣ್ಣೂರು ಗ್ರಾಮದ ಸರ್ಕಾರಿ ಮಾದರಿ  ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಸವರಾಜ ಅಂಗಡಿ, ರವಿ ಪಾಟೀಲ, ಆರ್​.ಎ್​.ಜುಂಜುಣ್ಣವರ ಇತರರಿದ್ದರು.
ವಣ್ಣೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಸವರಾಜ ಅಂಗಡಿ, ರವಿ ಪಾಟೀಲ, ಆರ್​.ಎ್​.ಜುಂಜುಣ್ಣವರ ಇತರರಿದ್ದರು.
Published on
ನೇಸರಗಿ: ವಿದ್ಯಾರ್ಥಿ ಜೀವನ ಅತ್ಯಮೂಲ್ಯ ವಾದುದು. ಹೀಗಾಗಿ, ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿರಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ಬಸವರಾಜ ಅಂಗಡಿ ಹೇಳಿದರು.
ಸಮೀಪದ ವಣ್ಣೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್​ಡಿಎಂಸಿ ಅಧ್ಯ ರವಿ ಪಾಟೀಲ ಮಾತನಾಡಿದರು. ಮುಖ್ಯಶಿಕ್ಷಕ ಆರ್​.ಎ್​.ಜುಂಜುಣ್ಣವರ, ಡಿಎಸ್​ಎಸ್​ ಸಂಚಾಲಕ ಮನೋಜ ಕೆಳಗೇರಿ, ಗ್ರಾಪಂ ಮಾಜಿ ಸದಸ್ಯರಾದ ಅಪ್ಪಾಸಾಹೇಬ ದೇಸಾಯಿ, ಮಲ್ಲಿಕಾರ್ಜುನ ಕುಲಕರ್ಣಿ, ನಿಂಗಪ್ಪ ಪೋಕಲಿ,
ಎಸ್​.ಎ್​.ನಾಯಕ, ಭೀಮಶಿ ಸೋಮನಟ್ಟಿ, ಎಸ್​ಡಿಎಂಸಿ ಉಪಾಧ್ಯೆ ಸುಧಾ ಕುಲಕರ್ಣಿ, ಸದಸ್ಯರಾದ ರಮೇಶ ಕಸಳಿ, ಭೀಮಶಿ ಪೂಜೇರಿ, ಕುಭೇಂದ್ರ ದೇಸಾಯಿ, ಸುರೇಶ ಪೋಕಳಿ, ಈರಣ್ಣ ದೇಸಾಯಿ, ಮಹಾಂತೇಶ ರಾಜಗೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net