ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಅವರನ್ನು ಶಹಾಪುರದಲ್ಲಿ ಭಾನುವಾರ ಸಮಾನ ಮನಸ್ಕರ ಬಳಗದಿಂದ ಸನ್ಮಾನಿಸಲಾಯಿತು. ಸುರಯ್ಯಾ ಬೇಗಂ, ಗಿರಿಪ್ಪಗೌಡ ಬಾಣತಿಹಾಳ, ಸೈಯದ್ ಖಾದ್ರಿ, ಶರಣಬಸವ ಬಿರಾದಾರ, ತಿಪ್ಪಣ್ಣ ಕ್ಯಾತನಾಳ, ಸಾಯಬಣ್ಣ ಪುರ್ಲೆ, ಶೇಖರ ದೊರೆ, ದೇವೇಂದ್ರಪ್ಪ ಮಡಿವಾಳಕರ, ಚನ್ನಪ್ಪ ಆನೆಗುಂದಿ, ಪ್ರಕಾಶ ದೊರೆ ಇದ್ದರು.
ಪಿಯು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಹೊಸಮನಿಗೆ ಸನ್ಮಾನ
ಶಹಾಪುರ: ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ನ್ಯಾಯಯುತ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲೆ ಸುರಯ್ಯಾ ಬೇಗಂ ಹಾದಿಮನಿ ಸಲಹೆ ನೀಡಿದರು.
ನಗರದಲ್ಲಿ ಸಮಾನ ಮನಸ್ಕರ ಬಳಗ ಭಾನುವಾರ ಏರ್ಪಡಿಸಿದ್ದ ಸಂಘದ ಜಿಲ್ಲಾಧ್ಯಕ್ಷ ರಾಗಿ ಅವಿರೋಧ ಆಯ್ಕೆಯಾದ ಡಾ.ರವೀಂದ್ರನಾಥ ಹೊಸಮನಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಕಳಕಳಿ ಹೊಂದಿರುವ ಹೊಸಮನಿ ಅವರು ಎಲ್ಲರನ್ನು ಜತೆಗೆ ಕೊಂಡೊಯ್ಯುವಂಥ ಸಂಘಟನಾ ಚಾತುರ್ಯ, ತಾಳ್ಮೆ ಮತ್ತು ಪರಿಶ್ರಮಜೀವಿ ಆಗಿದ್ದಾರೆ ಎಂದು ಶ್ಲಾಘಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಹಿಂದ ಮುಖಂಡ ಗಿರಿಪ್ಪಗೌಡ ಬಾಣತಿಹಾಳ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ನಾಯಕತ್ವದ ಕಾರಣಕ್ಕೆ ಹೊಸಮನಿ ಅವರಿಗೆ ಈ ಜವಾಬ್ದಾರಿ ಹೆಗಲಿಗೇರಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಆರ್. ಚನ್ನಬಸ್ಸು ವನದುರ್ಗ ಮಾತನಾಡಿ, ಡಾ.ಹೊಸಮನಿ ಜಿಲ್ಲಾಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಜವಾಬ್ದಾರಿ ಅಥವಾ ಉನ್ನತ ಸ್ಥಾನಮಾನ ದೊರಕಲಿ ಎಂದು ಆಶಿಸಿದರು.
ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿದರು. ರಂಗನಾಥ ದೊರೆ ಪ್ರಾಸ್ತಾವಿಕ ಮಾತನಾಡಿದರು. ಭೀಮಣ್ಣ ಅಂಚೆಸೂಗುರು ವಿಶೇಷ ಉಪನ್ಯಾಸ ನೀಡಿದರು. ಸೈಯದ್ ಖಾದ್ರಿ, ಶರಣಬಸವ ಬಿರಾದಾರ, ತಿಪ್ಪಣ್ಣ ಕ್ಯಾತನಾಳ, ಸಾಯಬಣ್ಣ ಪುರ್ಲೆ, ಶೇಖರ ದೊರೆ, ದೇವೇಂದ್ರಪ್ಪ ಮಡಿವಾಳಕರ, ಚನ್ನಪ್ಪ ಆನೆಗುಂದಿ, ಪತ್ರಕರ್ತ ಪ್ರಕಾಶ ದೊರೆ ಇತರರಿದ್ದರು. ಹೊನ್ನಪ್ಪ ಗಂಗನಾಳ ಸ್ವಾಗತಿಸಿದರು. ಮಡಿವಾಳಪ್ಪ ಪಾಟೀಲ ನಿರೂಪಣೆ ಮಾಡಿದರು. ಶ್ರೀಶೈಲ್ ಬಿರಾದಾರ ವಂದಿಸಿದರು.