ಚಿಟಗುಪ್ಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಪ್ರಾಚಾರ್ಯ ಡಾ.ಜಯಕುಮಾರ ಸಿಂಧೆ ಉದ್ಘಾಟಿಸಿದರು. ಆರ್.ಎಸ್. ಪಾಟೀಲ್,ಅನೀಲಕುಮಾರ, ಡಾ.ಚಿತ್ರಶೇಖರ ಚಿರಳ್ಳಿ, ಡಾ.ಶಾಂತಕುಮಾರ, ಡಾ.ಶಿವಕುಮಾರ, ಡಾ.ಮೀನಾ ಪಾಟೀಲ್ ಇತರರಿದ್ದರು.
ಚಿಟಗುಪ್ಪ: ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆತ್ಮಗೌರವದ ಪ್ರತಿಕ ಎಂದು ಸ್ಥಳಿಯ ಹಿರೇಮಠ ಸಂಸ್ಥಾನದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ನುಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಕನ್ನಡ ನಾಡು-ನುಡಿಯ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯ ಡಾ. ಜಯಕುಮಾರ ಸಿಂಧೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಹಾಗೂ ಸಂಸತಿಯ ಉಳಿವಿಗಾಗಿ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಆರ್.ಎಸ್. ಪಾಟೀಲ್ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಅನೀಲಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಡಾ.ಚಿತ್ರಶೇಖರ ಚಿರಳ್ಳಿ, ಡಾ.ಶಾಂತಕುಮಾರ, ಡಾ.ಶಿವಕುಮಾರ, ಡಾ.ಮೀನಾ ಪಾಟೀಲ್ ಕನ್ನಡ ಭಾಷೆಯ ಉಳಿವಿನ ಅಗತ್ಯತೆಯನ್ನು ವಿವರಿಸಿದರು. ಶಿಕರು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.