ಮಹಿಳಾ ಸಾಹಿತ್ಯ ಜನಮುಖಿಯಾಗಿರಲಿ

ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ನಿಯೋಜಿತ ಸಮ್ಮೇಳನಾಧ್ಯಕ್ಷೆ ಶಕುಂತಲಾ ಪಾಟೀಲ್​ ಜಾವಳಿ ದಂಪತಿಯನ್ನು ಕನ್ನಡ ಭವನದಲ್ಲಿ ಮಂಗಳಾರ ಸತ್ಕರಿಸಿ ಆಹ್ವಾನ ನೀಡಲಾಯಿತು. ವಿಜಯಕುಮಾರ ತೇಗಲತಿಪ್ಪಿ, ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ, ನಂದಿನಿ ಸನಬಾಳ, ರೇಣುಕಾ ಎನ್​., ಶಿವಲೀಲಾ ಕಲಗುರ್ಕಿ ಇತರರಿದ್ದರು.
ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ನಿಯೋಜಿತ ಸಮ್ಮೇಳನಾಧ್ಯಕ್ಷೆ ಶಕುಂತಲಾ ಪಾಟೀಲ್​ ಜಾವಳಿ ದಂಪತಿಯನ್ನು ಕನ್ನಡ ಭವನದಲ್ಲಿ ಮಂಗಳಾರ ಸತ್ಕರಿಸಿ ಆಹ್ವಾನ ನೀಡಲಾಯಿತು. ವಿಜಯಕುಮಾರ ತೇಗಲತಿಪ್ಪಿ, ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ, ನಂದಿನಿ ಸನಬಾಳ, ರೇಣುಕಾ ಎನ್​., ಶಿವಲೀಲಾ ಕಲಗುರ್ಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ವಾಧ್ಯಕ್ಷೆ ಶಕುಂತಲಾ ಜಾವಳಿ ಆಶಯ
  • ಕಲಬುರಗಿಯಲ್ಲಿ ಕಾವ್ಯ ಮಹಿಳಾ ಸಮ್ಮೇಳನ 16ಕ್ಕೆ
ಕಲಬುರಗಿ: ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಯುವ ಮಹಿಳಾ ಬರಹಗಾರರು ಜನಮುಖಿ ಸಾಹಿತ್ಯ ರಚಿಸಬೇಕು ಎಂದು ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ನಿಯೋಜಿತ ಸರ್ವಾಧ್ಯೆ ಶಕುಂತಲಾ ಪಾಟೀಲ್​ ಜಾವಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್​, ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘ, ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಸಹಯೋಗದಡಿ ಆ.16ರಂದು ಕನ್ನಡ ಭವನದಲ್ಲಿ ಆಯೋಜಿಸಿರುವ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ಆಧುನಿಕ ಸಾಹಿತ್ಯ ಸೃಷ್ಟಿಯಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ಅಂತಹ ಸಿಯಲ್ಲಿನ ಆಂತರಿಕ ಧ್ವನಿ ಗುರುತಿಸಿ ಸಮ್ಮೇಳನಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಪರಿಷತ್​ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಪ್ರಮುಖರಾದ ನಂದಿನಿ ಸನಬಾಳ, ರೇಣುಕಾ ಎನ್​., ಶಿವಲೀಲಾ ಕಲಗುರ್ಕಿ, ಧರ್ಮರಾಜ ಜವಳಿ, ಸೋಮಶೇಖರ ನಂದಿಧ್ವಜ, ಕುಪೇಂದ್ರ ಬರಗಾಲಿ, ಶರಣು ಹಾಗರಗುಂಡಗಿ, ರಾಜೇಂದ್ರ ಮಾಡಬೂಳ, ಹಣಮಂತರಾವ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ್​, ಪ್ರಭುಶೆಟ್ಟಿ ಮುದ್ದಾ, ಸಿದ್ಧರಾಮ ಹಂಚನಾಳ, ಅಮೃತಪ್ಪ ಅಣೂರ, ರಮೇಶ ಬಡಿಗೇರ, ದಿನೇಶ ಮದಕರಿ, ಪರಮಾನಂದ ಸರಸಂಬಿ, ಎಚ್​.ಎಸ್​. ಬರಗಾಲಿ, ಸಂಗಪ್ಪ ಭೀಮಳ್ಳಿ ಇತರರಿದ್ದರು.
"

ಸಮಾಜಮುಖಿ ಸಾಹಿತ್ಯದಿಂದ ಪರಿವರ್ತನೆ ಸಾಧ್ಯ. ಲೇಖಕರಾದವರು ಸಂವೇದನಾಶೀಲತೆ ರೂಢಿಸಿಕೊಳ್ಳಬೇಕು. ಬರಹಗಳಲ್ಲಿ ಗಟ್ಟಿತನ ಇರುವುದು ಅತ್ಯಂತ ಜರೂರಿ.

— > ಶಕುಂತಲಾ ಪಾಟೀಲ್​ ಜಾವಳಿ ನಿಯೋಜಿತ ಸಮ್ಮೇಳನಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net