ಕನಕಪುರದಲ್ಲಿ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಡಾ.ಬಾನಂದೂರು ಕೆಂಪಯ್ಯಚಾಲನೆ ನೀಡಿದರು. ಮಲ್ಲಿಕಾರ್ಜುನ್, ಗೀತಾ, ಬಸವರಾಜು, ಕೆ.ಕಾಳಯ್ಯ, ಜವಾಹರ್ ನವೋದಯ ವಿದ್ಯಾಲಯ ಪ್ರಾಂಶುಪಾಲ ಎಸ್.ಬಸವರಾಜು, ವಕೀಲ ಸಿ.ಸುರೇಶ್, ಇದ್ದರು.
ಜಾನಪದ ಕಲೆಯನ್ನು ಉಳಿಸಲು ಮತ್ತು ಪಸರಿಸಲು ಎಲ್ಲರೂ ಶ್ರಮಿಸಬೇಕಾಗಿದೆ. ಜಾನಪದ ಉಳಿಯಬೇಕಾದರೆ ವಿದ್ಯಾರ್ಥಿಗಳು ಹಾಗೂ ಯುವ ಜನತೆಯಿಂದ ವಾತ್ರ ಸಾಧ್ಯ ಎಂದು ಅಂತಾರಾಷ್ಟ್ರೀಯ ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ತಿಳಿಸಿದರು.
ತಾಲೂಕಿನ ಬರಡನಹಳ್ಳಿ ಜವಾಹರ್ ನವೋದಯ ವಿದ್ಯಾಲಯ ಆವರಣದಲ್ಲಿ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮ ನಡೆಯಿತು.
ಪೂರ್ವಜರು ನಮಗೆ ಬಿಟ್ಟುಕೊಟ್ಟಿರುವ ಜಾನಪದ ಬಳುವಳಿಯು ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳು ಜಾನಪದದಲ್ಲಿ ಅಡಗಿದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಬಾಯಿಂದ ಬಾಯಿಗೆ ಹರಿದು ಬಂದು ಅಮೂಲ್ಯ ಸಾಂಸ್ಕೃತಿಕ ಸಂಪತ್ತಾಗಿದೆ. ಚರ್ಮ ವಾದ್ಯ ಹಾಗೂ ಜಾನಪದ ಪ್ರಕಾರದ ವಾದ್ಯಗಳು ಇಂದು ಅವನತಿಯಲ್ಲಿವೆ, ಅವುಗಳನ್ನು ಉಳಿಸುವ ಪ್ರಯತ್ನ ಆಗಬೇಕಿದೆ ಎಂದು ತಿಳಿಸಿದರು.
ಸಾಹಿತಿ ಕೂ.ಗಿ ಗಿರಿಯಪ್ಪ ವಾತನಾಡಿ, ಜಾನಪದವು ವಿಶಿಷ್ಟವಾದ ಕಲೆ, ಶತವಾನಗಳಿಂದ ಕೊಡುಗೆಯಾಗಿ ಬಂದಿರುವ ಜಾನಪದವನ್ನು ಹಾಡುವ, ಕೇಳುವ, ನೋಡುವ ಮೂಲಕ ಉಳಿಸಿ ಬೆಳೆಸಬೇಕು, ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹಿಸಿ ಕಲೆಗಳನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿರುವ ಶಾಲಾ - ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ಜರುಗುತ್ತಿರುವುದು ಔಚಿತ್ಯವಾಗಿದೆ ಎಂದರು.
ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಜಾನಪದ ಸವಾಜದ ಅಮೂಲ್ಯ ಆಸ್ತಿ, ಮುಂದಿನ ಪೀಳಿಗೆಗೆ ಇದನ್ನು ಕೊಂಡೊಯ್ಯುವ ಕೆಲಸ ಆಗಬೇಕಿದೆ. ಸವಾಜದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಗಳನ್ನು ಗೌರವಿಸಿ, ಅದಕ್ಕೆ ಒತ್ತು ನೀಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಅಂಗನವಾಡಿ ನಿವತ್ತ ಸಹಾಯಕಿ ಹೊಂಬಾಳಮ್ಮ, ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಶಿವರಾಮು, ಮುತ್ತುರಾಜು, ಮುನೇಶ್ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಏರಂಗೆರೆ ಶಿವರಾಮು ತಂಡದವರಿಂದ ಜಾನಪದ ಗೀತೆಗಳು, ದುಂಡುವಾದಯ್ಯ ತಂಡದಿಂದ ನೀಲಗಾರ ಪದ, ಕೋಡಿಹಳ್ಳಿ ಮಂಗಳಗೌರಿ ತಂಡದಿಂದ ಸೋಬಾನ ಗೀತೆ ಹಾಡಲಾಯಿತು.
ಜಾನಪದ ಅಕಾಡಮಿ ವಾಜಿ ಸದಸ್ಯ ಕೆ.ಕಾಳಯ್ಯ, ಜಿಲ್ಲಾ ಜಾಗತಿ ಸದಸ್ಯ ಹರೀಶ್‌ಬಾಲು, ಹರಿಹರ ನಿಂಗರಾಜು, ಅರುಳ್, ಕಾಕೇಶ್ ನಾಡಕರ್ಣಿ ಮತ್ತಿರರು ಇದ್ದರು.