ದೇಶದ ಅಭಿವೃದ್ಧಿಗೆ ಕೈಜೋಡಿಸೋಣ

ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ ದಿನ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ನೀಲಪ್ರಭಾ ಬಬಲಾದ್​ ಮಾತನಾಡಿದರು. ಮಲ್ಲಿನಾಥ ರಾವೂರ, ಡಾ.ಎಂ.ಎ.ರಶೀದ್​, ಪರಶುರಾಮ ವನಂಜಕರ್​, ಆಕಾಶ ರಾಠೋಡ್​, ಗುರುರಾಜ ಸಂಗಾವಿ ಇದ್ದರು.
ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ ದಿನ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ನೀಲಪ್ರಭಾ ಬಬಲಾದ್​ ಮಾತನಾಡಿದರು. ಮಲ್ಲಿನಾಥ ರಾವೂರ, ಡಾ.ಎಂ.ಎ.ರಶೀದ್​, ಪರಶುರಾಮ ವನಂಜಕರ್​, ಆಕಾಶ ರಾಠೋಡ್​, ಗುರುರಾಜ ಸಂಗಾವಿ ಇದ್ದರು.
Published on

ಶಹಾಬಾದ್​: ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಬಲೀಕರಣಕ್ಕೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಹಸೀಲ್ದಾರ್​ ನೀಲಪ್ರಭ ಬಬಲಾದ ಹೇಳಿದರು. ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ಹಾಗೂ ಯೋಧರಿಗೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸಬೇಕು. ನಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿ ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದರು. ತಾಪಂ ಇಒ ಮಲ್ಲಿನಾಥ ರಾವೂರ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​ ಮಾತನಾಡಿದರು. ಪಿಐ ಪರಶುರಾಮ ವನಂಜಕರ್​, ಎಇಇ ಆಕಾಶ ರಾಠೋಡ್​, ಗ್ರೇಡ್​&2 ತಹಸೀಲ್ದಾರ್​ ಗುರುರಾಜ ಸಂಗಾವಿ, ಪ್ರಮುಖರಾದ ಮೃತ್ಯುಂಜಯ ಸ್ವಾಮಿ ಹಿರೇಮಠ, ಶಿವಪುತ್ರ ಕರಣಿಕ, ಶಿವಶರಣಪ್ಪ ಭೋಶೆಟ್ಟಿ, ಡಾ.ನೀಲಪ್ಪ ಪಾಟೀಲ್​, ಹಾಶಮ್​ ಖಾನ್​, ಕೃಷ್ಣಪ್ಪ ಕರಣಿಕ, ಶರಣು ಪಗಲಾಪುರ, ಸುಭಾಷ ಸಾಕ್ರೆ ಇತರರಿದ್ದರು. ಗಿರಿಮಲ್ಲಪ್ಪ ವಳಸಂಗ ನಿರೂಪಣೆ ಮಾಡಿದರು. ಅಣವೀರಪ್ಪ ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net