

ಚಿತ್ತಾಪುರ: ಮನುಷ್ಯನ ಮನಸ್ಸು ಶುದ್ಧತೆಯಿಂದ ಕೂಡಿರಲು ಹಾಗೂ ಸಹೋದರತ್ವ ಮನೋಭಾವನೆ ಬೆಳೆಸುವುದೇ ರಾಬಂಧನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ರಾಬಂಧನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಹಿಳೆಯರಿಗೆ ಸುರಕ್ಷಿತ ಮತ್ತು ಗೌರವಯುತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಾ ಬಂಧನವು ಪ್ರೀತಿ, ವಿಶ್ವಾಸ, ಕಾಳಜಿ, ಗೌರವ ಮತ್ತು ಪರಸ್ಪರ ಸಹಕಾರದ ಸಂಕೇತವಾಗಿದೆ ಎಂದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಮಾತನಾಡಿದರು. ಕಲಬುರಗಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಯದ ಮುಖ್ಯಸ್ಥೆ ಬಿಕೆ ಗಿರಿಜಾ, ಶಹಾಬಾದ್ ವಿಭಾಗೀಯ ನಿರ್ದೇಶಕಿ ಬಿಕೆ ಜಗದೇವಿ ಸಾನ್ನಿಧ್ಯವಹಿಸಿದ್ದರು. ಬಿಕೆ ವಿದ್ಯಾ, ಬಿಕೆ ಸಮರ್ಥಿ, ಮಲ್ಲರೆಡ್ಡಿ ಗೋಪಸೇನ, ಶಿವುಕುಮಾರ ಗೊಬ್ಬೂರ, ಸಾಬಣ್ಣ ಮೊಗಲಾ, ರಾಜಶೇಖರ ಮುಡಬೂಳ, ಶರಣು ಬೊಮ್ಮನಳ್ಳಿ, ಲಕ್ಷ್ಮಣ ಕಡಬೂರ, ವೀರುಪಾ ರುದ್ರಬೆಣ್ಣಿ, ಲಿಂಗಪ್ಪ ಮಲ್ಕನ್, ಹಣಮಂತರಾಯ ಇಟಗಿ, ವಾಸುದೇವ ಗಂಜಿ, ದೇವಿಂದ್ರ ಸಜ್ಜನಶೆಟ್ಟಿ, ಜಗನ್ನಾಥರೆಡ್ಡಿ ಯರಗಲ, ವೆಂಕಟರೆಡ್ಡಿ, ಬಸರೆಡ್ಡಗೌಡ ಯರಗಲ, ಸಿದ್ದಣ್ಣಗೌಡ, ಕರಣಕುಮಾರ ಅಲ್ಲೂರ, ಚಂದ್ರಶೇಖರ ಅವಂಟಿ ಇತರರಿದ್ದರು. ಪ್ರತಿಕ್ಷಾ ಗಾರಂಪಳ್ಳಿ, ಪ್ರಿಯಾದರ್ಶನಿ ಭರತನಾಟ್ಯ ಪ್ರದರ್ಶನ ಮಾಡಿದರು. ಉಮಾ ಕಾಶಿ ನಿರೂಪಣೆ ಮಾಡಿದರು.