ರಂಗಭೂಮಿ ಸಾಮಾಜಿಕ ಸಮಸ್ಯೆ ಮೇಲೆ ಬೆಳಕು ಚೆಲ್ಲಲಿ

ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಹಾನಗಲ್​ ಶ್ರೀಗುರು ಕುಮಾರೇಶ್ವರ ನಾಟ್ಯ ಸಂದ 44ನೇ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಕುಮಾರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಡಾ.ಚನ್ನವಿರ ಶಿವಾಚಾರ್ಯ, ಡಾ.ಉಮಾಶ್ರೀ, ಅಲ್ಲಮಪ್ರಭು ಪಾಟೀಲ್​, ಎಲ್​.ಬಿ. ಶೇಖ್​ ಮಾಸ್ತರ್​ ಇತರರಿದ್ದರು.
ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಹಾನಗಲ್​ ಶ್ರೀಗುರು ಕುಮಾರೇಶ್ವರ ನಾಟ್ಯ ಸಂದ 44ನೇ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಕುಮಾರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಡಾ.ಚನ್ನವಿರ ಶಿವಾಚಾರ್ಯ, ಡಾ.ಉಮಾಶ್ರೀ, ಅಲ್ಲಮಪ್ರಭು ಪಾಟೀಲ್​, ಎಲ್​.ಬಿ. ಶೇಖ್​ ಮಾಸ್ತರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್​ ಸದಸ್ಯೆ ಡಾ.ಉಮಾಶ್ರೀ ಅನಿಸಿಕೆ
  • ಕುಮಾರೇಶ್ವರ ನಾಟ್ಯ ಸಂಘದ 44ನೇ ವಾರ್ಷಿಕೋತ್ಸವ
ಕಲಬುರಗಿ: ಇಂದಿನ ವ್ಯಾಪಾರಿ ಜಗತ್ತಿನಲ್ಲೂ ತನ್ನ ಅಸ್ಮಿತೆ ಉಳಿಸಿಕೊಂಡು ಬಂದಿರುವ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದ ಕೊಡುಗೆ ಅಪಾರ. ರಂಗಭೂಮಿ ಕೇವಲ ಮನರಂಜನೆ ಆಗದೆ ಸಮಕಾಲೀನ ಚಿಂತನೆ, ಸಾಮಾಜಿಕ ಸಮಸ್ಯೆ ಮೇಲೆ ಬೆಳಕು ಚೆಲ್ಲಬೇಕು ಎಂದು ಹಿರಿಯ ನಟಿ, ವಿಧಾನ ಪರಿಷತ್​ ಸದಸ್ಯೆ ಡಾ.ಉಮಾಶ್ರೀ ಅಭಿಪ್ರಾಯಪಟ್ಟರು.
ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾನಗಲ್​ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದ 44ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕುಮಾರಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಇಂದು ಕಲಾಪ್ರೇಮಿಗಳ ಅಭಿರುಚಿ ಬದಲಾಗುತ್ತಿದೆ. ರಂಗಭೂಮಿಯನ್ನೂ ಸಿನಿಮಾ ಛಾಪಿನಲ್ಲಿ ನೋಡಬಯಸುತ್ತಾರೆ. ಗುಣಮಟ್ಟದ ನಾಟಕಗಳಿಂದ ಸಮಾಜದಲ್ಲಿ ಬದಲಾವಣೆ ತರಬಹುದು ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕಾರಣದಲ್ಲಿದ್ದು, ಕಲಾ ಪ್ರದರ್ಶನ ಮುಂದುವರಿಸಿರುವ ಉಮಾಶ್ರೀ ಅವರು ಶರ್ಮಿಷ್ಠೆ ನಾಟಕವನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿದ್ದಾರೆ. ಅವರ ನಟನೆ ಎಲ್ಲರನ್ನು ನಾಚುವಂತಿದೆ. ಎಲ್​.ಬಿ.ಶೇಖ್​ ಮಾಸ್ತರ್​ ಹಾಗೂ ಸುಧೀರ್​ ಹೆಗಡೆ ಅವರು ಕಂಪನಿ ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.
ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್​ ಅಧ್ಯತೆ ವಹಿಸಿದ್ದರು.
ಸಂದ ಅಧ್ಯ ಎಲ್​.ಬಿ.ಶೇಖ್​ ಮಾಸ್ತರ್​, ಸಂಚಾಲಕ ಶ್ರೀಧರ ಹೆಗಡೆ, ಪ್ರಮುಖರಾದ ಮಹಿಪಾಲರಡ್ಡಿ ಮುನ್ನೂರ್​, ರಮೇಶ ತಿಪನೂರ, ಮಲ್ಲಿಕಾರ್ಜುನ ಮೇಳಕುಂದಿ, ಮಲ್ಲಿಕಾರ್ಜುನ ಕಣ್ಣಿ, ರಮೇಶ ಜೇವರ್ಗಿ, ಚನ್ನಬಸಪ್ಪ ಸಮ್ಮಾಣಿ, ಪ್ರದಿಪ್​ ಗಣೇಶ ಸಂಗಾ ಇತರರಿದ್ದರು.
30ಕ್ಕೂ ಹೆಚ್ಚು ಕಲಾವಿದರಿಗೆ ಕುಮಾರಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಿ.ಎಚ್​.ನಿರಗುಡಿ ನಿರೂಪಣೆ ಮಾಡಿ ವಂದಿಸಿದರು. ಸಮೀರ್​ ಶೇಖ್​-ತನ್ವೀರ್​ ಶೇಖ್​ ಸಂಗೀತ ಗಾಯನ ನಡೆಸಿಕೊಟ್ಟರು.
ಪರಿಪಕ್ವ ನಟನೆಯಿಂದ ಪ್ರೇಕ್ಷಕರ ಮನಗೆದ್ದ ನಟಿ
ನಿಶ್ಯಬ್ಧವಾಗಿದ್ದ ಸಭಾಂಗಣದೊಳಗೆ ಕೆಲವೊಮ್ಮೆ ತಾಯಿ, ನೋವಿನ ಹೆಣ್ಣು, ಮತ್ತೊಮ್ಮೆ ಅನ್ಯಾಯದ ವಿರುದ್ಧ ಸಿಡಿದೇಳುವ ಶರ್ಮಿಷ್ಠೆಯಾಗಿ ರೂಪಾಂತರಗೊಳ್ಳುತ್ತಿದ್ದ ಹಿರಿಯ ನಟಿ ಡಾ.ಉಮಾಶ್ರೀ ಅವರು ಅಕ್ಷರಶ@ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ರಂಗಸಂಪದಿಂದ ನಡೆದ ಶರ್ಮಿಷ್ಠೆ ನಾಟಕದ ಪ್ರದರ್ಶನದಲ್ಲಿ ಉಮಾಶ್ರೀ ಅವರ ಭಾವಭಂಗಿ ಮತ್ತು ಕಣ್ಣಲ್ಲಿನ ನೋವು ಪ್ರೇಕರ ಮನಸ್ಸನ್ನು ತಟ್ಟಿತು. ನಾಟಕಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಆರಂಭದಿಂದ ಅಂತ್ಯದವರೆಗೆ ಪ್ರೇಕರು ತಲ್ಲೀನರಾಗಿ ವೀಸಿದರು. ಬೇಲೂರು ರುನಂದನ್​ ರಚಿಸಿ, ಚಿದಂಬರರಾವ್​ ಜಂಬೆ ನಿರ್ದೇಶಿಸಿರುವ ಈ ನಾಟಕ ಯಯಾತಿ ಪುರಾಣದ ಕಥೆಯನ್ನು ಶರ್ಮಿಷ್ಠೆಯ ದೃಷ್ಟಿಕೋನದಿಂದ ಕಟ್ಟಿಕೊಡುತ್ತದೆ. ಸುಮಾರು ಎರಡು ಗಂಟೆ ಏಕಾಂಗಿಯಾಗಿ ವೇದಿಕೆಯನ್ನು ಆವರಿಸಿಕೊಂಡ ಉಮಾಶ್ರೀ, ತಮ್ಮ ಅನುಭವ ಮತ್ತು ನಟನಾ ಕೌಶಲ್ಯದ ಮೂಲಕ ಪಾತ್ರಕ್ಕೆ ಜೀವ ತುಂಬಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net