ಬಸವತತ್ವ ಎಲ್ಲೆಡೆ ಪಸರಿಸುವ ಕೆಲಸವಾಗಲಿ

ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯನ್ನು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಉದ್ಘಾಟಿಸಿದರು. ಶಾಸಕ ಬಿ.ಆರ್​.ಪಾಟೀಲ್​, ಪ್ರಮುಖರಾದ ಬಾಬುರಾವ ಪಾಟೀಲ್​, ಸುಭಾಷ ರಾಠೋಡ್​, ಬಸವಣ್ಣಪ್ಪ ಪಾಟೀಲ್​, ಮಲ್ಲಿನಾಥ ಪಾಟೀಲ್​ ಇತರರಿದ್ದರು.
ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯನ್ನು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಉದ್ಘಾಟಿಸಿದರು. ಶಾಸಕ ಬಿ.ಆರ್​.ಪಾಟೀಲ್​, ಪ್ರಮುಖರಾದ ಬಾಬುರಾವ ಪಾಟೀಲ್​, ಸುಭಾಷ ರಾಠೋಡ್​, ಬಸವಣ್ಣಪ್ಪ ಪಾಟೀಲ್​, ಮಲ್ಲಿನಾಥ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಆರ್​.ಪಾಟೀಲ್​ ಆಶಯ
  • ಚಿಂಚೋಳಿಯಲ್ಲಿ ಜಯಂತಿ ಪೂರ್ವಭಾವಿ ಸಭೆ
ಚಿಂಚೋಳಿ : ವಿಶ್ವಗುರು ಬಸವಣ್ಣ ಅವರನ್ನು ಪೂಜಿಸಿದರೆ ಸಾಲದು, ಬಸವ ತತ್ವವನ್ನು ಎಲ್ಲೆಡೆ ಪಸರಿಸುವ ಕೆಲಸ ಆಗಬೇಕಿದೆ. ಅಲ್ಲದೆ ಲಿಂಗಾಯತರು ಸಂಟಿತರಾಗಬೇಕು ಎಂದು ಬಸವ ಜಯಂತಿ ಉತ್ಸವ ಸಮಿತಿ ಜಿಲ್ಲಾಧ್ಯರೂ ಆದ ಶಾಸಕ ಬಿ.ಆರ್​.ಪಾಟೀಲ್​ ಹೇಳಿದರು.
ವೀರೇಂದ್ರ ಪಾಟೀಲ್​ ಶಿಣ ಸಂಸ್ಥೆಯ ಸಭಾಂಗಣದಲ್ಲಿ ಬಸವ ಜಯಂತಿ ಉತ್ಸವ ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸೋಮವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಲಿಂಗಾಯತರ ಸಂಖ್ಯೆ ಹಾಗೂ ಸಂಟನೆ ಣಿಸುತ್ತಿದೆ. ಜಾತಿ ವ್ಯವಸ್ಥೆ ವಿರುದ್ಧ ಹೋರಾಡಬೇಕು. ಬಸವಣ್ಣನವರ ವೈಚಾರಿಕ ಚಿಂತನೆ ಸಾರಬೇಕು. ಕಾಯಕವೇ ಕೈಲಾಸ ಎಂಬ ಸಂದೇಶಗಳನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಕರೆ ನೀಡಿದರು.
ಬಸವ ಜಯಂತಿ ಉತ್ಸವ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷರೂ ಆದ ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್​ ಮಾತನಾಡಿದರು.
ಪ್ರಮುಖರಾದ ಬಾಬುರಾವ ಪಾಟೀಲ್​, ಸುಭಾಷ ರಾಠೋಡ್​, ಬಸವಣಪ್ಪ ಪಾಟೀಲ್​, ಮಲ್ಲಿನಾಥ ಪಾಟೀಲ್​, ಆರ್​.ವಿ. ಶೆಟಗಾರ, ರವೀಂದ್ರ ಶಾಬಾದಿ, ಚಿತ್ರಶೇಖರ ಪಾಟೀಲ್​, ದೀಪಕನಾಗ ಪುಣಶೆಟ್ಟಿ, ಶರಣಪ್ಪ ಪಾಟೀಲ್​, ವೀರೇಶ ಯಂಪಳ್ಳಿ, ಶರಣು ಮೋದಿ, ಶಂಕರ ಶಿವಪೂರಿ, ಬಸವರಾಜ ಉಳಗೊಂಡ, ಮಲ್ಲಿಕಾರ್ಜುನ ಪಾಲಾಮೂರ, ರಾಜಶೇಖರ ಹಿತ್ತಲ್​, ನಂದಿಕುಮಾರ ಪಾಟೀಲ್​, ನೀಲಕಂಠ ಸೀಳಿನ್​, ಶರಣು ಟೆಂಗಳಿ, ಸಿದ್ದುಗೌಡ, ಮಲ್ಲಿಕಾರ್ಜುನ ಬುಶೆಟ್ಟಿ, ವೀರಶೆಟ್ಟಿ ಪಾಟೀಲ್​, ವಿಜಯಕುಮಾರ ಗೌನಳ್ಳಿ, ಶಿವುಕುಮಾರ ಸ್ವಾಮಿ ಇತರರಿದ್ದರು.

ಜಿಲ್ಲಾ ಮಟ್ಟದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಬಸವ ಜಯಂತಿ ಆಯೋಜಿಸಲಾಗುತ್ತಿದೆ. ಏ.19 ಹಾಗೂ 20ರಂದು ಕಲಬುರಗಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಚಿಂಚೋಳಿ ೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸಬೇಕು. ಬಸವ ತತ್ವ ಜಿಲ್ಲಾದ್ಯಂತ ಪಸರಿಸಬೇಕು, ಸಮಾಜ ಸಂಟನೆಗೆ ಆದ್ಯತೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net