ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸಲಹೆ
ಕಲಬುರಗಿಯಲ್ಲಿ ಸತ್ಕಾರ ಸಮಾರಂಭ
ಕಲಬುರಗಿ: ಜಿಲ್ಲೆಯ ಶಿಕ್ಷಕರ ಸಂಘಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸಲಹೆ ನೀಡಿದರು.
ನಗರದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂ ಕಲಬುರಗಿ ಉತ್ತರ ವಲಯ ಭಾನುವಾರ ಏರ್ಪಡಿಸಿದ್ದ ಗೃಹ ನಿರ್ಮಾಣ ಮಂಡಳಿ ಹಾಗೂ ಶಿಕ್ಷಕರ ಸಂದ ಪದಾಧಿಕಾರಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಬಿಇಒ ಭರತರಾಜ ಸಾವಳಗಿ ಮಾತನಾಡಿ, ಶಿಕ್ಷಕರ ಕಲ್ಯಾಣವೇ ಸಂಘ-ಸಂಸ್ಥೆಗಳ ಪ್ರಮುಖ ಉದ್ದೇಶವಾಗಿರಬೇಕು. ಶಿಕ್ಷಕರ ಸಂಘಟನೆಗಳು ಪರಸ್ಪರ ಸಹಕಾರದಿಂದ ಶಿಕ್ಷಕರ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗೃಹ ನಿರ್ಮಾಣ ಮಂಡಳಿ ಉಪಾಧ್ಯಕ್ಷ ಆನಂದತೀರ್ಥ ಜೋಶಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗು, ಕಮಲಾಪುರ ತಾಲೂಕು ಅಧ್ಯಕ್ಷ ಪರಮೇಶ್ವರ ಓಕಳಿ, ಉತ್ತರ ವಲಯ ಅಧ್ಯಕ್ಷ ಅಶೋಕ ಸೊನ್ನ ಹಾಗೂ ದಕ್ಷಿಣ ವಲಯ ಅಧ್ಯಕ್ಷ ಸಂಗಣ್ಣ ಜಾಬಾ ಅನಿಸಿಕೆ ಹಂಚಿಕೊಂಡರು.
ಶಿವಾನಂದ ಪಾಸೋಡಿ ಅಧ್ಯಕ್ಷತೆ ವಹಿಸಿದ್ದರು. ಮಂಡಳಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಕಾರ್ಯದರ್ಶಿ ಮರಿಯಪ್ಪ ಹೊಸಮನಿ, ಅನುದಾನಿತ ರಾಜ್ಯ ಸಮಿತಿ ಸದಸ್ಯ ಪ್ರೇಮಸಿಂಗ್ ರಾಠೋಡ್, ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದಯ್ಯ ವೈದ್ಯ ಇತರರಿದ್ದರು.
ಅಂಬಾದಾಸ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಪ್ಪ ನಾಯಕ ಜಹಾಗೀರದಾರ್ ಸ್ವಾಗತಿಸಿದರು. ಪ್ರಭುಲಿಂಗ ಮೂಲಗೆ ನಿರೂಪಣೆ ಮಾಡಿದರು. ಜೀವನಕುಮಾರ ರಾಠೋಡ್ ವಂದಿಸಿದರು.
"
ಸಂಘಟನೆಗಳು ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಗೃಹ ನಿರ್ಮಾಣ ಮಂಡಳಿ ಸದಸ್ಯತ್ವವನ್ನು ಅನುದಾನಿತ ಶಿಕ್ಷಕರಿಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು.
— > ಆನಂದತೀರ್ಥ ಜೋಶಿ ಉಪಾಧ್ಯಕ್ಷ, ಗೃಹ ನಿರ್ಮಾಣ ಮಂಡಳಿ ಕಲಬುರಗಿ