ಯಾದಗಿರಿ: ಸೈಕಲ್ಗಳು ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯಕ್ಕೆ ರೆಕ್ಕೆಗಳಾಗಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರ್ಡಿಯಾ ಆಶಯ ವ್ಯಕ್ತಪಡಿಸಿದರು.
ನಗರದಲ್ಲಿ ಇತ್ತೀಚೆಗೆ ಜಿಪಂ, ಎಸ್ಬಿಐ, ಲೀಡ್ ಬ್ಯಾಂಕ್ ಸಹಯೋಗದಡಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ 8 ಮತ್ತು 9ನೇ ತರಗತಿಯ 50 ಅರ್ಹ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಿಸಿದ ಅವರು, ಪ್ರತಿದಿನ ಗಂಟೆಗಟ್ಟಲೇ ನಡೆದುಕೊಂಡುವ ಹೋಗುವ ಸಮಯವನ್ನು ಓದಿಗೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ಕಾನೂನು ಪ್ರೆ, ಸುರಕ್ಷತೆ ಹಾಗೂ ಉನ್ನತ ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ವಿಶೇಷ ಪ್ರಮಾಣವಚನ ಬೋಧಿಸಿದರು.
ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ್ ಪ್ರಾಸ್ತಾವಿಕ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸ್ವಾವಲಂಬನೆಗೆ ಈ ಯೋಜನೆ ಹೇಗೆ ಪೂರಕವಾಗಿದೆ ಎಂಬುದನ್ನು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಮಾತನಾಡಿದರು. ಎಸ್ಬಿಐ ಮುಖ್ಯಸ್ಥೆ ಶಾಂತಿ ಭಾರತಿ ಮಾತನಾಡಿ, ಹೆಣ್ಣುಮಕ್ಕಳ ಪ್ರಗತಿಗಾಗಿ ನಮ್ಮ ತಂಡ ಸದಾ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸುನಿಲ್, ಸತ್ಯನಾರಾಯಣ ಇತರರಿದ್ದರು.
ಮದ್ಯ ಮಾರಾಟಕ್ಕೆ ನಿಷೇಧ ಇಂದು
ಯಾದಗಿರಿ: ಮೊಹರಂ ಹಬ್ಬದ ನಿಮಿತ್ತ ಗುರುವಾರ ಬೆಳಗ್ಗೆ 6ರಿಂದ ಶುಕ್ರವಾರ ಬೆಳಗ್ಗೆ 6ರವರೆಗೆ ಜಿಲ್ಲೆಯ ಎಲ್ಲ ವೈನ್ಶಾಪ್, ಬಾರ್ ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ರಾಹುಲ್ ಪಾಂಡ್ವೆ ಆದೇಶಿಸಿದ್ದಾರೆ.