ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ ಬೆಳೆಸಿಕೊಳ್ಳಲಿ

ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ, ಲ್ಯಾಬ್​, ಸೆಮಿನಾರ್​ ಹಾಲ್​ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಶಂಕುಸ್ಥಪಾನೆ ಮಾಡಿದರು. ಶಿವಶರಣರೆಡ್ಡಿ ಪಾಟೀಲ್​, ನಾಗೇಶ್ವರರಾವ ಮಾಲಿಪಾಟೀಲ್​, ಬಸವರಾಜ ಪಾಟೀಲ್​, ಡಾ.ಪಂಡಿತ ಬಿ.ಕೆ, ನಾಗೇಶ ಕಾಳಾ ಇದ್ದರು.
ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ, ಲ್ಯಾಬ್​, ಸೆಮಿನಾರ್​ ಹಾಲ್​ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಶಂಕುಸ್ಥಪಾನೆ ಮಾಡಿದರು. ಶಿವಶರಣರೆಡ್ಡಿ ಪಾಟೀಲ್​, ನಾಗೇಶ್ವರರಾವ ಮಾಲಿಪಾಟೀಲ್​, ಬಸವರಾಜ ಪಾಟೀಲ್​, ಡಾ.ಪಂಡಿತ ಬಿ.ಕೆ, ನಾಗೇಶ ಕಾಳಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅನಿಸಿಕೆ
  • ಗ್ರಂಥಾಲಯ, ಲ್ಯಾಬ್​, ಸೆಮಿನಾರ್​ ಹಾಲ್​ ನಿರ್ಮಾಣಕ್ಕೆ ಚಾಲನೆ
ಸೇಡಂ: ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡು ಸದೃಢ ಬದುಕು ಕಟ್ಟಿಕೊಳ್ಳಬೇಕು ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ಕೋಟಿ ರೂ. ವೆಚ್ಚದ ಡಿಜಿಟಲ್​ ಗ್ರಂಥಾಲಯ, 5 ಕೋಟಿ ರೂ. ವೆಚ್ಚದ ಲ್ಯಾಬ್​ ಮತ್ತು ಸೆಮಿನಾರ್​ ಹಾಲ್​ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಲಬುರಗಿಯ ಸರ್ಕಾರಿ ಪದವಿ ಕಾಲೇಜು ಬಿಟ್ಟರೆ ಅತೀ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಕಾಲೇಜು ಇದಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹೀಗಾಗಿ ನಿಮ್ಮ ಅನುಕೂಲಕ್ಕಾಗಿ ಡಿಜಿಟಲ್​ ಗ್ರಂಥಾಲಯ ಸೇರಿ ಹಲವು ಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲಿಪಾಟೀಲ್​, ಪ್ರಾಂಶುಪಾಲ ಡಾ.ಪಂಡಿತ ಬಿ.ಕೆ. ಮಾತನಾಡಿದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್​ ಬೊಮ್ನಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್​, ರೈಟ್ಸ್​ ಲಿಮಿಟೆಡ್​ನ ಸಹಾಯಕ ವ್ಯವಸ್ಥಾಪಕ ಸಚಿನ್​ ಅವಟಿ, ಪ್ರಮುಖರಾದ ಅಬ್ದುಲ್​ ಹಫೀಜ್​, ನಾಗೇಶ ಕಾಳಾ, ರಾಹುಲ್​ ಊಡಗಿ, ಭೀಮಾಶಂಕರ ಕೊಳ್ಳಿ, ಜಗನ್ನಾಥ ಚಿಂತಪಳ್ಳಿ, ಸತೀಶ ಪೂಜಾರಿ, ಡಾ.ಜಗನ್ನಾಥ ಪಟ್ಟಣಕರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net