ಸಂಕೋಚ ಸ್ವಭಾವದಿಂದ ಹೆಣ್ಮಕ್ಕಳು ಹೊರಬರಲಿ

ಯಾದಗಿರಿಯಲ್ಲಿ ಭಾನುವಾರ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂ ಆಯೋಜಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಶಹಾಪುರ ಮೋ ಬುದ್ಧಿಮಾಂದ್ಯ ಶಾಲೆ ವಿದ್ಯಾರ್ಥಿಗಳಿಗೆ ಸಮವಸ ವಿತರಿಸಲಾಯಿತು. ದಾಸಬಾಳ ಶ್ರೀ, ಭೀಮಾವತಿ ಪಾಟೀಲ್​, ಚಂದ್ರಕಲಾ ಗೂಗಲ್​, ಜ್ಯೋತಿಲತಾ, ಡಾ.ನೀಲಮ್ಮರೆಡ್ಡಿ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂ ಆಯೋಜಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಶಹಾಪುರ ಮೋ ಬುದ್ಧಿಮಾಂದ್ಯ ಶಾಲೆ ವಿದ್ಯಾರ್ಥಿಗಳಿಗೆ ಸಮವಸ ವಿತರಿಸಲಾಯಿತು. ದಾಸಬಾಳ ಶ್ರೀ, ಭೀಮಾವತಿ ಪಾಟೀಲ್​, ಚಂದ್ರಕಲಾ ಗೂಗಲ್​, ಜ್ಯೋತಿಲತಾ, ಡಾ.ನೀಲಮ್ಮರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಾಸಬಾಳದ ವೀರೇಶ್ವರ ಶ್ರೀ ಸಲಹೆ
  • ಮಹಿಳಾ ಸರ್ಕಾರಿ ನೌಕರರ ಸಂದಿಂದ ಕಾರ್ಯಕ್ರಮ
ಯಾದಗಿರಿ: ಮಹಿಳೆಯರು ಸಂಕೋಚ ಸ್ವಭಾವದಿಂದ ಹೊರಬಂದು ಧೈರ್ಯದಿಂದ ಸಾಧನೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ದಾಸಬಾಳ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ಹೇಳಿದರು.
ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂದ ಜಿಲ್ಲಾ ಟಕ, ರಾಜ್ಯ ಸರ್ಕಾರಿ ನೌಕರರ ಸಂದ ಸಹಯೋಗದಡಿ ಡಿಸಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ, ಸಾಧಕರಿಗೆ ಸನ್ಮಾನ, ತಾಲೂಕು ಟಕಗಳ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಿಳೆ ತನ್ನ ಜೀವನದಲ್ಲಿ ತಾಯಿ, ಅಜ್ಜಿ, ಅಕ್ಕ, ತಂಗಿ, ಹೆಂಡತಿ ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸುವುದರ ಜತೆ ಸಮಾಜಮುಖಿಯಾಗಿ ಕೆಲಸ ಮಾಡಿ ಎಲ್ಲದರಲ್ಲೂ ಸೈ ಎನಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಸಮಾನವಾಗಿ ಶ್ರಮಿಸುತ್ತಾಳೆ. ಜಿಲ್ಲಾ ಟಕ ಚಂದ್ರಕಲಾ ಗೂಗಲ್​ ಅಧ್ಯತೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭೀಮಾವತಿ ಚನ್ನಾರೆಡ್ಡಿ ಪಾಟೀಲ್​ ತುನ್ನೂರ ಕಾರ್ಯಕ್ರಮ ಉದ್ಘಾಟಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯ ರಾಯಪ್ಪಗೌಡ ಹುಡೇದ ಮಾತನಾಡಿ, ಜಿಲ್ಲೆಯ ಕಾರ್ಯಾಂಗ ವ್ಯವಸ್ಥೆಯಲ್ಲಿ ಮಹಿಳಾ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನೌಕರರ ಬೇಡಿಕೆ ಈಡೇರಿಸಲು ಮತ್ತು ಸಮಸ್ಯೆಗಳು ಎದುರಾದಾಗ ಒಗ್ಗಟ್ಟಾಗಿ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಸಂದ ಜಿಲ್ಲಾಧ್ಯೆ ಚಂದ್ರಕಲಾ ಗೂಗಲ್​ ಮಾತನಾಡಿ, ಜಿಲ್ಲೆಯಲ್ಲಿ ಹೊಸದಾಗಿ ಸಂ ರಚಿಸಿ ಅನೇಕ ಕೆಲಸಗಳನ್ನು ಮಾಡಲಾಗುತ್ತಿದೆ. ನಾವು ಯಾವುದೇ ಸಂದಲ್ಲಿದ್ದರೂ ಮಹಿಳಾ ನೌಕಕರಿಗೆ ಇದು ಮಹತ್ವದ ಸಂ. ಎಲ್ಲರೂ ಸೇರಿ ಸಂ ಬೆಳೆಸೋಣ ಎಂದು ಕರೆ ನೀಡಿದರು.
ಡಾ.ವಂದನಾ ಗಾಳಿ ಮಾತನಾಡಿದರು. ಸಂದ ಉಪಾಧ್ಯೆ ಜ್ಯೋತಿಲತಾ ತಡಿಬಿಡಿಮಠ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಸ್ಥಾನಿಕ ವೈದ್ಯಾಧಿಕಾರಿ ಡಾ.ನೀಲಮ್ಮ ಎಸ್​.ರೆಡ್ಡಿ ಎಲ್ಹೇರಿ, ಸಂದ ಪದಾಧಿಕಾರಿಗಳಾದ ಜಯಶ್ರೀ ಬಿರಾದಾರ, ಶೋಭಾ ನಾಯಕ, ಉಮಾ ಅರಳಿಕಟ್ಟಿ, ಬಸ್ಸಮ್ಮ ಕಾಂಬಳೆ, ಪದ್ಮಾವತಿ ನಾಯಕ, ದುರ್ಗಶ್ರೀ ಮಕಾಶಿ, ಬಬಿತಾ, ವಿಜಯಲಕ್ಷಿ$್ಮ ಶಾಬಾದಿ, ಶರಣಮ್ಮ ಸಜ್ಜನ್​, ಭಾರತಿ ಸಜ್ಜನ್​, ಗೀತಮ್ಮ ಪತ್ತಾರ, ಕುಮದಾವತಿ, ಪುಷ್ಪಾ ಪಾಟೀಲ್​, ನಾಗರತ್ನ, ಸುನೀತಾ, ರೂಪಾ ಯಾದವ್​, ಪ್ರತಿಭಾ, ಅಂಬಿಕಾ, ವಿದ್ಯಾ ಮೇಟಿ, ತಹಸೀಲ್ದಾರ್​ ಅನಿತಾ ಸಜ್ಜನ್​, ಇಂದಿರಾ ಎಸ್​., ಗೀತಾಂಜಲಿ ಮುಗಳಿ, ಮಹೇಶ ವಾರದ ಇತರರಿದ್ದರು.
ಶಿವಲೀಲಾ ಮುರಾಳ ಪ್ರಾರ್ಥಿಸಿದರು. ಭಾಗ್ಯ ದೊರೆ ಸ್ವಾಗತಿಸಿದರು. ಗಾಯತ್ರಿ ನಾಯ್ಕಿನ್​ ವಂದಿಸಿದರು. ಜ್ಯೋತಿ ನಿರೂಪಣೆ ಮಾಡಿದರು.
ಬಾಲ್ಯವಿವಾಹ ಮಾಡಿ ನರಕಕ್ಕೆ ನೂಕಬೇಡಿ
ಮಹಿಳೆಯರು ಮುಖ್ಯವಾಗಿ ತಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಬೇಕು. ಯೋಗ, ಧ್ಯಾನ, ದೇವರ ಸ್ಮರಣೆ ನಿತ್ಯ ಮಾಡುವ ಮೂಲಕ ದೇಹ ಮತ್ತು ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ನಿವೃತ್ತ ಸ್ಥಾನಿಕ ವೈದ್ಯಾಧಿಕಾರಿ ಡಾ.ನೀಲಮ್ಮ ಎಸ್​.ರೆಡ್ಡಿ ಎಲ್ಹೇರಿ ಸಲಹೆ ನೀಡಿದರು. ಕಡ್ಡಾಯವಾಗಿ ಶಿಣ ಪಡೆಯಬೇಕು. ಯಾವ ಕಾರಣಕ್ಕೂ ಪಾಲಕರು ಮಕ್ಕಳನ್ನು ಬಾಲ್ಯವಿವಾಹದ ಕೂಪಕ್ಕೆ ತಳ್ಳಿ ಜೀವನ ನರಕ ಮಾಡಬೇಡಿ. ಈಗ ಕಠಿಣ ಕಾನೂನು ಬಂದಿದೆ. ಆದರೂ ಹಳ್ಳಿಗಳಲ್ಲಿನ ಅನೇಕರಿಗೆ ಅರಿವು ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬುದ್ಧಿಮಾಂದ್ಯ ಮಕ್ಕಳಿಗೆ ಸಮವಸ ವಿತರಣೆ
ಶಹಾಪುರದ ಮಹೇಶ ವಾರದ ನಡೆಸುವ ಮೋ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸುಮಾರು 32 ವಿದ್ಯಾರ್ಥಿಗಳಿಗೆ ಸಮವಸ ವಿತರಿಸಲಾಯಿತು. ನಾಲ್ವರು ಯುಪಿಎಸ್​ಸಿ ಸಾಧಕರ ಪಾಲಕರನ್ನು ಗೌರವಿಸುವುದರ ಜತೆ ವಿವಿಧ ೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಪ್ರದರ್ಶನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net