ಪ್ರತಿಯೊಬ್ಬರೂ ಸಾಂವಿಧಾನಿಕ ಮೌಲ್ಯ ಅರಿತುಕೊಳ್ಳಲಿ

ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಮಾತನಾಡಿದರು. ರವಿ ರಂಗಸುಭೆ, ಪರಶುರಾಮ ಗಸ್ತೆ, ಡಿವೈಎಸ್​ಪಿ ರವಿ ನಾಯಿಕ, ಸುರೇಶ ಬಾಬು ಇತರರಿದ್ದರು.
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಮಾತನಾಡಿದರು. ರವಿ ರಂಗಸುಭೆ, ಪರಶುರಾಮ ಗಸ್ತೆ, ಡಿವೈಎಸ್​ಪಿ ರವಿ ನಾಯಿಕ, ಸುರೇಶ ಬಾಬು ಇತರರಿದ್ದರು.
Published on
ಗೋಕಾಕ: ಭಾರತೀಯ ಸಂಪ್ರದಾಯದಲ್ಲಿ ಸಾಂವಿಧಾನಿಕ ಮೌಲ್ಯ ಹಿರಿಯದಾಗಿದ್ದು, ಅದನ್ನು ಪ್ರತಿಯೊಬ್ಬರೂ ತಿಳಿಯಬೇಕಾಗಿದೆ ಎಂದು ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶ ಗಣರಾಜ್ಯವಾಗುವಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಪಾತ್ರ ದೊಡ್ಡದಾಗಿದ್ದು, ಭಾರತೀಯರಾದ ನಾವು ಮೂಲಭೂತ ಹಕ್ಕು ಪರಿಪಾಲನೆ ಮಾಡಬೇಕು ಎಂದರು. ಪೌರಾಯುಕ್ತ ರವಿ ರಂಗಸುಭೆ, ತಾಪಂ ಅಧಿಕಾರಿ ಪರಶುರಾಮ ಗಸ್ತೆ, ಡಿವೈಎಸ್​ಪಿ ರವಿ ನಾಯಿಕ, ಸಿಪಿಐ ಸುರೇಶ ಬಾಬು , ಎಂ.ಎಂ.ನದಾಫ್​, ಎಂ.ಎಚ್​.ಗಜಾಕೋಶ, ಡಾ.ಎಂ.ಎಸ್​.ಕೊಪ್ಪದ, ಎಂ.ಎಲ್​.ಜನ್ಮಟ್ಟಿ, ವಕೀಲ ಬಿ.ಆರ್​.ಕೊಪ್ಪ, ಪಿಎಸ್​ಐ ಕಿರಣ ಮೋಹಿತೆ, ಕೆ.ವಾಲಿಕರ, ಎಸ್​.ಪಿ.ವರಾಳೆ, ಪ್ರಮೀಳಾ ಬಿದರಿ, ಅಶೋಕ ಪೂಜಾರಿ, ಪ್ರಕಾಶ ಮುರಾರಿ, ಸೋಮಶೇಖರ ಮಗದುಮ್ಮ, ಕಿರಣ ಢಮಾಮಗರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net