ಪ್ರತಿಯೊಬ್ಬರೂ ಮೂಲಭೂತ ಹಕ್ಕುಗಳನ್ನು ಗೌರವಿಸಲಿ

ಕಂಕಣವಾಡಿ ಗ್ರಾಮದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶ ಮಂಜುನಾಥ ಬಣಕಾರ ಉದ್ಘಾಟಿಸಿದರು. ಎ.ಎ.ಮುದಕವಿ, ಡಿ.ಎಂ.ನದ್​ಾ, ಐ.ಎಂ.ಮುಲ್ಲಾ, ಸವಿತಾ ಮುನ್ಯಾಳ ಇತರರಿದ್ದರು.
ಕಂಕಣವಾಡಿ ಗ್ರಾಮದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶ ಮಂಜುನಾಥ ಬಣಕಾರ ಉದ್ಘಾಟಿಸಿದರು. ಎ.ಎ.ಮುದಕವಿ, ಡಿ.ಎಂ.ನದ್​ಾ, ಐ.ಎಂ.ಮುಲ್ಲಾ, ಸವಿತಾ ಮುನ್ಯಾಳ ಇತರರಿದ್ದರು.
Published on
ರಾಮದುರ್ಗ: ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕು ಹೊಂದಿದ್ದು, ಸ್ವತಂತ್ರವಾಗಿ ತಮಗೆ ಬೇಕಾದ ಹಾಗೇ ವಾಸಿಸುವ ಹಕ್ಕನ್ನು ಹೊಂದಿದ್ದಾರೆ. ಪ್ರತಿಯೊಬ್ಬರ ಮೂಲಭೂತ ಹಕ್ಕುಗಳನ್ನು ನಾವೆಲ್ಲರೂ ಗೌರವಿಸಬೇಕೆಂದು ಸ್ಥಳಿಯ ದಿವಾಣಿ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದರು.
ತಾಲೂಕಿನ ಕಂಕಣವಾಡಿ ಗ್ರಾಮದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಷನಲ್​ ಹ್ಯೂಮನ್​ ರೈಟ್ಸ್​ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರೂ ಅರಿತು ನಡೆಯಬೇಕು ಎಂದರು.
ನ್ಯಾಷನಲ್​ ಹ್ಯೂಮನ್​ ರೈಟ್ಸ್​ ರಾಜ್ಯಾಧ್ಯ ಬಿ.ಯು.ಬೈರಕದಾರ ಮಾತನಾಡಿದರು. ವಕೀಲ ಸಂದ ಅಧ್ಯ ಎ.ಎ.ಮುದಕವಿ, ಸರ್ಕಾರಿ ಸಹಾಯಕ ಅಭಿಯೋಜಕ ಡಿ.ಎಂ.ನದ್​ಾ, ಪ್ರಾಚಾರ್ಯ ಐ.ಎಂ. ಮುಲ್ಲಾ, ಪಿಎಸ್​ಐ ಸವಿತಾ ಮುನ್ಯಾಳ, ಡಿ.ಎ್​.ಹಾಜಿ, ವೆಂಕಟೇಶ ಹಿರೇರಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net