ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳ ಭವಿಷ್ಯ ಬರೆಯಲಿ

ವಾಡಿಯ ಶ್ರೀ ಬಸವ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಸವ ಮಹೋತ್ಸವದಲ್ಲಿ ವಿವಿಧ ೇತ್ರದ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಸೋಮಶೇಖರ ಶಿವಾಚಾರ್ಯ, ಭೀಮಣ್ಣ ಸಾಲಿ, ವಿಜಯ ರಾಠೋಡ್​, ಜಗದೀಶ ಪಾಟೀಲ್​ ಇತರರಿದ್ದರು.
ವಾಡಿಯ ಶ್ರೀ ಬಸವ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಸವ ಮಹೋತ್ಸವದಲ್ಲಿ ವಿವಿಧ ೇತ್ರದ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಸೋಮಶೇಖರ ಶಿವಾಚಾರ್ಯ, ಭೀಮಣ್ಣ ಸಾಲಿ, ವಿಜಯ ರಾಠೋಡ್​, ಜಗದೀಶ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿ
  • ಬಸವ ಮಹೋತ್ಸವ, ಬಸವಶ್ರೀ ಪ್ರಶಸ್ತಿ ಪ್ರದಾನ
ವಾಡಿ: ಎಲ್ಲೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ನೆಲಗೊಳ್ಳುತ್ತಿದ್ದು, ಈ ಸಂಸ್ಥೆಗಳು ಕೇವಲ ಹಣಗಳಿಸುವತ್ತ ಯೋಚಿಸದೆ, ಕಡಿಮೆ ಶುಲ್ಕ ಪಡೆದು ಬಡ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು. ಶ್ರೀ ಬಸವ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಮಹೋತ್ಸವ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಂಕ ಗಳಿಕೆ ಶಿಕ್ಷಣ ಪ್ರೋತ್ಸಾಹಿಸುವ ಪರೀೆಗಳು ಎಷ್ಟು ಮುಖ್ಯವೊ, ಮಕ್ಕಳಲ್ಲಿ ಆತ್ಮಸ್ಥೆರ್ಯ ತುಂಬಿ, ಸಂಸ್ಕಾರ ಕಲಿಸುವುದು ಅಗತ್ಯವಾಗಿದೆ. ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಟದಾಯಕವಾಗಿದ್ದು, ಶಿಕ್ಷಣ ಸಂಸ್ಥೆಗಳು ಪ್ರತಿಭಾವಂತ ಮಕ್ಕಳ ಸವೋರ್ತೊಮುಖ ಅಭಿವೃದ್ಧಿಗೆ ಸಂಕಲ್ಪ ತೊಡಬೇಕು ಎಂದರು. ಬಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಭೀಮಣ್ಣ ಸಾಲಿ, ಉದ್ಯಮಿ ವಿಜಯ ರಾಠೋಡ್​ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಜಗದೀಶ ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರವಿಂದ್ರ ತೆಗನೂರ, ಶರಣಪ್ಪ ಮದ್ದಿನ್​, ನಾಗರೆಡ್ಡಿ ಗೋಪಸೇನ್​, ಸಿದ್ದಯ್ಯ ಶಾಸಿ ನಂದೂರಮಠ, ಶರಣಗೌಡ ಪಾಟೀಲ್​ ಇತರರಿದ್ದರು. ವಿವಿಧ ೇತ್ರದಲ್ಲಿ ಸಾಧನೆಗೈದ ಡಾ.ಜ್ಯೋತಿ ತೆಗನೂರ, ಅರ್ಚನಾ ಹಿರೇಮಠ, ಚಂದ್ರಕಲಾ ಜೈನ್​, ಮಡಿವಾಳಪ್ಪ ಹೇರೂರ, ಸಿದ್ದಣ್ಣ ಮುಗುಟಿ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಜನಿ ಪಾಟೀಲ್​ ಸ್ವಾಗತಿಸಿ ವಾರ್ಷಿಕ ವರದಿ ಓದಿದರು. ಜಗದೀಶ ನಗನೂರ ನಿರೂಪಣೆ ಮಾಡಿದರು. ಕವಿತಾ ಪಾಟೀಲ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net