ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯಲಿ

ಯಡ್ರಾಮಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ರಾಮಪ್ಪಗೌಡ ಮಾಲಿಪಾಟೀಲ್​, ಬಸಲಿಂಗಪ್ಪ ಸಾಹು ಅಂಕಲಕೋಟಿ, ಪ್ರಕಾಶ ಸಾಹು ಬೆಲ್ಲದ, ಅಣ್ಣಯ್ಯ ಹಿರೇಮಠ, ನಾಗೇಂದ್ರ ಪಾಟೀಲ್​ ಇದ್ದರು.
ಯಡ್ರಾಮಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ರಾಮಪ್ಪಗೌಡ ಮಾಲಿಪಾಟೀಲ್​, ಬಸಲಿಂಗಪ್ಪ ಸಾಹು ಅಂಕಲಕೋಟಿ, ಪ್ರಕಾಶ ಸಾಹು ಬೆಲ್ಲದ, ಅಣ್ಣಯ್ಯ ಹಿರೇಮಠ, ನಾಗೇಂದ್ರ ಪಾಟೀಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶಯ
  • ಯಡ್ರಾಮಿಯಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ
ಯಡ್ರಾಮಿ: ಲಿಂ.ಶ್ರೀ ಸಿದ್ಧರಾಮ ಸ್ವಾಮಿಗಳ ಆಶಯದಂತೆ ಶ್ರೀಮಠದಡಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು ಶ್ಲಾನೀಯ. ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳ ಜತೆಗೆ ಸಂಸ್ಕಾರಯುತ ಶಿಕ್ಷಣ ದೊರೆಯಲಿ ಎಂದು ಸೊನ್ನ ದಾಸೋಹ ಮಠದ ಶ್ರೀ ಡಾ.ಶಿವಾನಂದ ಸ್ವಾಮಿಗಳು ಆಶಯ ವ್ಯಕ್ತಪಡಿಸಿದರು.
ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜ್ಞಾನಸುಧಾ ವಿದ್ಯಾಪಿಠ ಪೂರ್ವಪ್ರಾಥಮಿಕ ಶಾಲೆ ಉದ್ಘಾಟನೆ ಹಾಗೂ ಮಕ್ಕಳ ಅಕ್ಷರಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಮೇಲೆ ಅಪಾರ ಗೌರವವನ್ನು ಹೊಂದಿದ್ದ ಲಿಂ.ಸಿದ್ಧರಾಮ ಸ್ವಾಮಿಗಳು 1976ರಲ್ಲಿಯೇ ಸಂಸತ ಪಾಠಶಾಲೆ ಪ್ರಾರಂಭಿಸಿದ್ದರು. ಇದರ ಜತೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಶ್ರೀಮಠದಲ್ಲಿ ಉಚಿತ ವಸತಿನಿಲಯ ಪ್ರಾರಂಭಿಸಿದ್ದರು. ಇದರ ಫಲವಾಗಿ ಶ್ರೀಮಠದಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ಬಳಿಕ ವಿದ್ಯಾ ಸಂಸ್ಥೆ ಸ್ಥಗಿತವಾಗಿತ್ತು. ಆದೀಗ ಗುರುಗಳ ಆಶಯದಂತೆ ಶ್ರೀ ಸಿದ್ಧಲಿಂಗ ಸ್ವಾಮಿಗಳು ಶಿಕ್ಷಣ ಸಂಸ್ಥೆ ಮರು ಪ್ರಾರಂಭಿಸಿದ್ದಾರೆ. ಎಲ್ಲರೂ ಸಹಕಾರ ನೀಡಬೇಕು ಎಂದರು.
ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಪ್ರಮುಖರಾದ ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಎನ್​.ಆರ್​.ಪಾಟೀಲ್​, ಸಿದ್ರಾಮಪ್ಪಗೌಡ ಮಾಲಿಪಾಟೀಲ್​, ಚನ್ನವಿರಪ್ಪಗೌಡ ಬಂಡೆಪ್ಪಗೌಡ್ರ, ಬಸ್ಸಯ್ಯಸ್ವಾಮಿ ಹೊರಗಿನಮಠ, ಪ್ರಕಾಶ ಸಾಹು ಬೆಲ್ಲದ, ಬಸಲಿಂಗಪ್ಪ ಸಾಹು ಅಂಕಲಕೋಟಿ, ಡಾ.ವೈ.ಎ.ಛಾಯಾಗೋಳ, ನಾಗಣ್ಣ ಬಿರಾದಾರ, ಲ್ಮಕಾಂತ ಸೋನಾರ, ಇಬ್ರಾಹಿಂಸಾಬ್​ ಉಸ್ತಾದ್​, ನಾಗೇಂದ್ರ ಪಾಟೀಲ್​, ನಿಂಗರಾಜ ಪಟ್ಟಣಶೆಟ್ಟಿ, ಚನ್ನವಿರ ತಾಳಿಕೋಟಿ, ಅಜ್ಮೀರ್​ಪಟೇಲ್​ ಚಿಂಚೋಳಿ ಇತರರಿದ್ದರು.
ಮಕ್ಕಳಿಗೆ ಅಕ್ಷರಬ್ಯಾಸ ಹಾಗೂ ಪರಿಸರ ದಿನ ನಿಮಿತ್ತ ಪಾಲಕರಿಗೆ ಸಸಿ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net