ಕಾಡಹಂದಿಗೆ ಹಾಕಿದ್ದ ಉರುಳಿಗೆ ಸಿಲುಕಿದ ಚಿರತೆ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಚಿರತೆ
ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಚಿರತೆ
Published on
ಚಿಕ್ಕಬಳ್ಳಾಪುರ: ಇಲ್ಲಿನ ಕೇತೇನಹಳ್ಳಿ ಅರಣ್ಯ ಪ್ರದೇಶದಲ್ಲಿನ ಉರುಳಿಗೆ ಹೆಣ್ಣು ಚಿರತೆ ಸಿಲುಕಿ ಮೃತಪಟ್ಟಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ವಿವೇಕಾನಂದ ಫಾಲ್ಸ್‌, ಸುತ್ತಲು ಅರಣ್ಯ ಪ್ರದೇಶವನ್ನು ಹೊಂದಿರುವ ಕೇತೇನಹಳ್ಳಿ ಭಾಗದಲ್ಲಿ ಆಗಾಗ ಚಿರತೆ, ಕರಡಿಗಳು, ಜಿಂಕೆಗಳು ಸೇರಿದಂತೆ ಕಾಡು ಮೃಗಗಳು ಸಮೀಪದ ಗ್ರಾಮಗಳಿಗೆ ಬಂದು ಹೋಗುತ್ತಿರುತ್ತವೆ. ಅದರಲ್ಲೂ ಕಾಡಹಂದಿಗಳ ಕಾಟ ಹೆಚ್ಚು. ಇದಕ್ಕೆ ಅರಣ್ಯ ತಪ್ಪಲಿನ ಪ್ರದೇಶದಲ್ಲಿನ ಬೆಳೆಗಳು ನಾಶವಾಗುವುದನ್ನು ತಪ್ಪಿಸಲು ಕೆಲ ರೈತರು ಅಲ್ಲಲ್ಲಿ ಉರುಳು ಹಾಕಿದ್ದಾರೆ. ಇದಕ್ಕೆ ಕೇತೇನಹಳ್ಳಿ ಸಮೀಪದ ಉರುಳೊಂದಕ್ಕೆ ೩ ವರ್ಷದ ಹೆಣ್ಣು ಚಿರತೆಯು ಸಿಲುಕಿಕೊಂಡಿದೆ. ಹಲವು ತಾಸು ಒದ್ದಾಡಿ, ನಿತ್ರಾಣಗೊಂಡಿದೆ. ಇದರ ನಡುವೆ ಅರಣ್ಯ ಸಿಬ್ಬಂದಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಕಂಡು ಬಂದಿದೆ. ಸುರಕ್ಷತಾ ಕ್ರಮಗಳೊಂದಿಗೆ ಆಸ್ಪತ್ರೆಗೆ ಎತ್ತಿಕೊಂಡು ಬಂದಿದ್ದಾರೆ. ತಕ್ಷಣ ಬನ್ನೇರುಘಟ್ಟ ಉದ್ಯಾನದ ವೈದ್ಯರು ಹಾಗೂ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಸ್ವಸ್ಥಗೊಂಡಿದ್ದ ಚಿರತೆಯು ಮೃತಪಟ್ಟಿದೆ. ಇದಕ್ಕೆ ಅರಣ್ಯ ಪ್ರದೇಶದಲ್ಲಿ ನಿಯಮಾನುಸಾರ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net