ಹುಮನಾಬಾದ್ ತಾಲೂಕಿನ ಉಡಬಾಳ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತ ಅಸ್ಪಶ್ಯತಾ ನಿವಾರಣೆ ಅರಿವು ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ನಿಂಗರಾಜ ಅರಸ್ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯೆ ಅನುಸೂಯಾ, ಗ್ರಾಪಂ ಕಾರ್ಯದರ್ಶಿ ಶಂಕರ, ಮುಖ್ಯಗುರು ತನುಜಾ ಆಣದೂರ, ವಾಮನರಾವ ಖಪಾಲೆ, ವೀರಯ್ಯ ಸ್ವಾಮಿ, ಶಿವಕುಮಾರ ಇತರರಿದ್ದರು.
ಹುಮನಾಬಾದ್: ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪನೆಗಾಗಿ ಕಾನೂನುಗಳ ಾನ ಬಹಳ ಮುಖ್ಯವಾಗಿದ್ದು, ಹಕ್ಕುಗಳ ರಣೆಗಾಗಿ ಜನರು ಧೈರ್ಯದಿಂದ ಮುಂದಾಗಬೇಕು ಎಂದು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ನಿಂಗರಾಜ ಅರಸ್ ಹೇಳಿದರು.
ಉಡಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ತುಕ್ಕಮ್ಮ ಮಹಿಳಾ ಮಂಡಳಿ ಹುಡಗಿ ಸಗಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತ ಅಸ್ಪಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯ ಕುರಿತು ಪ್ರತಿಯೊಬ್ಬರೂ ಅರಿವು ಹೊಂದುವುದು ಅಗತ್ಯ ಎಂದರು.
ಪೊಲೀಸ್ ಅಧಿಕಾರಿಗಳು ಹಾಗೂ ಕಲಾ ತಂಡದ ಸದಸ್ಯರು ಕಾನೂನು ಅರಿವು, ಮಹಿಳಾ ಹಕ್ಕುಗಳು ಹಾಗೂ ಸಾಮಾಜಿಕ ಜಾಗೃತಿ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಮಾಜಿ ಅಧ್ಯೆ ಅನುಸೂಯಾ, ಗ್ರಾಪಂ ಕಾರ್ಯದರ್ಶಿ ಶಂಕರ, ಮುಖ್ಯಗುರು ತನುಜಾ ಆಣದೂರ, ವಾಮನರಾವ ಖಪಾಲೆ, ವೀರಯ್ಯ ಸ್ವಾಮಿ, ಶಿವಕುಮಾರ, ಖಾನ್ ಇತರರಿದ್ದರು.