ಸಾಹಿತಿ ನರಸಿಂಗರಾವ್​ ಹೇಮನೂರ ಸಾರಥ್ಯ

ಕಲಬುರಗಿ ಕಸಾಪ ಆಯೋಜಿಸಿರುವ ಕವಿ ಸಮ್ಮೇಳನದ ಸ್ವಾಗತ ಸಮಿತಿಗೆ ನೇಮಕಗೊಂಡ ಸುರೇಶ ಜೋಗೂರು, ಶಿವಾನಂದ ಹೊನಗುಂಟಿಯವರನ್ನು ಬುಧವಾರ ಸತ್ಕರಿಸಲಾಯಿತು. ವಿಜಯಕುಮಾರ ಪಾಟೀಲ್​, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಶಿವರಾಜ ಅಂಡಗಿ, ಶರಣರಾಜ ಛಪಬಂದಿ, ಸಿದ್ಧಲಿಂಗ ಬಾಳಿ, ಪ್ರಭುಲಿಂಗ ಮೂಲಗೆ, ಶ್ವೇತಾ ಪಾಟೀಲ್​ ಇತರರಿದ್ದರು.
ಕಲಬುರಗಿ ಕಸಾಪ ಆಯೋಜಿಸಿರುವ ಕವಿ ಸಮ್ಮೇಳನದ ಸ್ವಾಗತ ಸಮಿತಿಗೆ ನೇಮಕಗೊಂಡ ಸುರೇಶ ಜೋಗೂರು, ಶಿವಾನಂದ ಹೊನಗುಂಟಿಯವರನ್ನು ಬುಧವಾರ ಸತ್ಕರಿಸಲಾಯಿತು. ವಿಜಯಕುಮಾರ ಪಾಟೀಲ್​, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಶಿವರಾಜ ಅಂಡಗಿ, ಶರಣರಾಜ ಛಪಬಂದಿ, ಸಿದ್ಧಲಿಂಗ ಬಾಳಿ, ಪ್ರಭುಲಿಂಗ ಮೂಲಗೆ, ಶ್ವೇತಾ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಸಾಂತ್ಯಕ್ಕೆ ಕಸಾಪ ಕವಿ ಸಮ್ಮೇಳನ
  • ಸ್ವಾಗತ ಸಮಿತಿಗೆ ಜೋಗೂರ, ಹೊನಗುಂಟಿ, ಸಾಹು ಆಯ್ಕೆ
ಕಲಬುರಗಿ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಮಾಸಾಂತ್ಯಕ್ಕೆ ಹಮ್ಮಿಕೊಂಡಿರುವ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸುರೇಶ ಪಾಟೀಲ ಜೋಗೂರ, ಶಿವಾನಂದ ಹೊನಗುಂಟಿ, ರಾಜೇಶ್ವರಿ ಸಾಹು ಅವರನ್ನು ಕನ್ನಡ ಭವನದಲ್ಲಿ ಬುಧವಾರ ಸತ್ಕರಿಸಿ, ಸಮ್ಮೇಳನದ ಜವಾಬ್ದಾರಿ ವಹಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ ಮಾತನಾಡಿ, ಹೊಸ ಪೀಳಿಗೆಯಲ್ಲಿ ಸಾಹಿತ್ಯ ಆಸಕ್ತಿ ಹೆಚ್ಚಾಗಲು ಮತ್ತು ಇನ್ನಷ್ಟು ಬೆಳೆಯಲು ಈ ಸಮ್ಮೇಳನ ಪೂರಕವಾಗಲಿದೆ. ಆ ಮೂಲಕ ಕನ್ನಡ ಸಾಹಿತ್ಯ ಪರಂಪರೆ ಗಟ್ಟಿಗೊಳ್ಳುತ್ತದೆ. ಸಮಾಜದಲ್ಲಿನ ಪ್ರಚಲಿತ ಘಟನೆಗಳ ಬಗ್ಗೆ ಕಾವ್ಯ ಕಟ್ಟಿಕೊಡುವ ಮೂಲಕ ಈ ಸಮಾಜವನ್ನು ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಇಂದಿನ ಬರಹಗಾರರ ಪಾತ್ರ ಬಹು ದೊಡ್ಡದಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಸ್ವಾಗತ ಸಮಿತಿಯ ಸುರೇಶ ಪಾಟೀಲ ಜೋಗೂರ, ಶಿವಾನಂದ ಹೊನಗುಂಟಿ ಹಾಗೂ ರಾಜೇಶ್ವರಿ ಸಾಹು ಅವರು, ಕಲಬುರಗಿ ನೆಲ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ. ಕನ್ನಡ ಭಾಷೆಗೆ ವಚನ ಸಾಹಿತ್ಯ ಪುನರ್ಜನ್ಮ ನೀಡಿದೆ. ಅಂತಹ ಶ್ರೇಷ್ಠ ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಉತ್ತಮ ಕೆಲಸ ಮಾಡಿದೆ. ಕವಿ ಸಮ್ಮೇಳನಕ್ಕೆ ಸಹಕರಿಸುವುದಾಗಿ ಹೇಳಿದರು.
ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಶರಣರಾಜ ಛಪಬಂದಿ, ಸಿದ್ಧಲಿಂಗ ಬಾಳಿ, ಪ್ರಭುಲಿಂಗ ಮೂಲಗೆ, ಸೋಮಶೇಖರಯ್ಯಾ ಹೊಸಮಠ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಬಸಯ್ಯಾ ಸ್ವಾಮಿ, ಶ್ವೇತಾ ಪಾಟೀಲ ಚಿತ್ತಾಪೂರ, ಧರ್ಮರಾಜ ಜವಳಿ, ಪರಮಾನಂದ ಸರಸಂಬಿ, ಗಣೇಶ ಚಿನ್ನಾಕಾರ, ನವಾಬ್​ ಖಾನ್​, ಬಾಬುರಾವ ಪಾಟೀಲ್​, ಚಂದ್ರಕಲಾ ಪಾಟೀಲ್​, ಗೌಡೇಶ ಬಿರಾದಾರ, ಅಂಬರೀಶ ನೂಲಾ, ಗುರುರಾಜ ಕೋರವಾರ, ರಾಜಕುಮಾರ, ರೇವಣಸಿದ್ದ ಹೊಟ್ಟಿ ಇತರರಿದ್ದರು.

ಕವಿ ಸಮ್ಮೇಳನ ಅನೇಕ ಉದಯೋನ್ಮುಖ ಕವಿಗಳಲ್ಲಿ ಹೊಸ ಸಂಚಲನ ಮೂಡಿಸುವ ಭರವಸೆ ಹೊಂದಲಾಗಿದೆ. ರಾಜ್ಯಮಟ್ಟದ ಪ್ರತಿಭೆ ಹೊಂದಿರುವ ಜಿಲ್ಲೆಯ ಬರಹಗಾರರಿಗೆ ಈ ಸಮ್ಮೇಳನದಲ್ಲಿ ಅವಕಾಶ ನೀಡಲಾಗುತ್ತಿದೆ.

— ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ, ಅಧ್ಯಕ್ಷ, ಕಸಾಪ ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net