ಅಕ್ಷರ ಕಲಿತು ಉತ್ತಮ ಬದುಕು ರೂಪಿಸಿಕೊಳ್ಳಿ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಬಂದಿಗಳಿಗೆ ಸಾಕ್ಷರತಾ ಜಾಗೃತಿ ಅರಿವು ಕಾರ್ಯಾಗಾರಕ್ಕೆ ಹನುಮಂತರಾಯ ಹರನಾಳ ಚಾಲನೆ ನೀಡಿದರು. ಕೆ.ಸುರೇಶ, ಗಿರೀಶ್​ ಜಕಾಪೂರ, ಬಿ.ಸುರೇಶ, ಚನ್ನಪ್ಪ ಯಟಗಲ್​, ಸಾಗರ ಪಾಟೀಲ್​, ಶ್ರೀಮಂತಗೌಡ ಪಾಟೀಲ್​, ಪುಂಡಲೀಕ ಟಿ.ಕೆ., ಭೀಮಾಶಂಕರ ಡಾಂಗೆ, ನಾಗರಾಜ ಮುಲಗೆ ಇದ್ದರು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಬಂದಿಗಳಿಗೆ ಸಾಕ್ಷರತಾ ಜಾಗೃತಿ ಅರಿವು ಕಾರ್ಯಾಗಾರಕ್ಕೆ ಹನುಮಂತರಾಯ ಹರನಾಳ ಚಾಲನೆ ನೀಡಿದರು. ಕೆ.ಸುರೇಶ, ಗಿರೀಶ್​ ಜಕಾಪೂರ, ಬಿ.ಸುರೇಶ, ಚನ್ನಪ್ಪ ಯಟಗಲ್​, ಸಾಗರ ಪಾಟೀಲ್​, ಶ್ರೀಮಂತಗೌಡ ಪಾಟೀಲ್​, ಪುಂಡಲೀಕ ಟಿ.ಕೆ., ಭೀಮಾಶಂಕರ ಡಾಂಗೆ, ನಾಗರಾಜ ಮುಲಗೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಯಸ್ಕರ ಶಿಕ್ಷಣಾಧಿಕಾರಿ ಹರನಾಳ ಸಲಹೆ
  • ಕಾರಾಗೃಹ ಬಂದಿಗಳಿಗೆ ಸಾಕ್ಷರತಾ ಜಾಗೃತಿ
ಕಲಬುರಗಿ: ಕಾರಾಗೃಹದಲ್ಲಿನ ಅನಕ್ಷರಸ್ಥರು ಓದಿನ ಕಡೆಗೆ ಗಮನ ಕೇಂದ್ರೀಕರಿಸಿ ಸರಿ&ತಪ್ಪುಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಮೂಲಕ ಉತ್ತಮ ಬದುಕಿಗೆ ಅಣಿಯಾಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹನುಮಂತರಾಯ ಹರನಾಳ ಹೇಳಿದರು.
ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಯಟ್​, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಬಂದಿಗಳಿಗೆ ಸಾಕ್ಷರತಾ ಜಾಗೃತಿ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಅಕ್ಷರ ಕಲಿತು ಬೇರೊಬ್ಬರ ಬಾಳಿಗೆ ದಾರಿದೀಪವಾಗುವ ನಿಟ್ಟಿನಲ್ಲಿ ನೀವೆಲ್ಲರೂ ಬಾಳಬೇಕು. 20 ಕಲಿಕಾರ್ಥಿಗಳಿಗೆ ಒಬ್ಬ ಬೋಧಕರನ್ನು ನೇಮಕ ಮಾಡಿ ಅಗತ್ಯ ಕಲಿಕಾ ಪರಿಕರ ನೀಡಲಾಗುವುದು ಎಂದರು.
ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಬಿ.ಸುರೇಶ ಮಾತನಾಡಿ, ಗಾಂಧೀಜಿ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅನಕ್ಷರಸ್ಥರಿಗೆ ಓದು&ಬರಹ ಕಲಿಸಿ ನಮ್ಮ ಪರಂಪರೆ, ಸಂಸತಿ ತಿಳಿಹೇಳಿ ಹಾಗೂ ಸಮಾಜದಲ್ಲಿ ಅಪರಾಧಗಳನ್ನು ತಡೆಯುವ ಗುರು ಹೊಂದಿದ್ದರು. ಅಪರಾಧ ಮುಕ್ತ ಗ್ರಾಮ ಪಂಚಾಯಿತಿ, ಕಾರಾಗೃಹ ಇಲ್ಲದ ರಾಜ್ಯ ನಿರ್ಮಾಣವಾದರೆ ಸಂತೋಷಕ್ಕೆ ಪಾರವೇ ಇರುವುದಿಲ್ಲ ಎಂದು ಹೇಳಿದರು.
ಗಿರೀಶ್​ ಜಕಾಪೂರ, ಮುಖ್ಯ ಅಧೀಕ್ಷಕ ಕೆ.ಸುರೇಶ ಮಾತನಾಡಿದರು.
ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್​, ಜೈಲರ್​ಗಳಾದ ಸಾಗರ ಪಾಟೀಲ್​, ಶ್ರೀಮಂತಗೌಡ ಪಾಟೀಲ್​, ಪುಂಡಲೀಕ ಟಿ.ಕೆ. ಇತರರಿದ್ದರು. ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮುಲಗೆ ನಿರೂಪಣೆ ಮಾಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net