ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅವಶ್ಯಕ

ಬಸವಕಲ್ಯಾಣದ ಮಾರುತಿ ಇಂಟರ್​ನ್ಯಾಷನಲ್​ ಸ್ಕೂಲ್​ನಲ್ಲಿ ವಿದ್ಯಾರ್ಥಿ ಪರಿಷತ್​ ಚುನಾವಣೆ ನಿಮಿತ್ತ ಶನಿವಾರ ಆಯೋಜಿಸಿದ್ದ  ವಿಶೇಷ ಕಾರ್ಯಕ್ರಮವನ್ನು  ಎಇಇ ರಮೇಶ ಪಾಟೀಲ್​ ಉದ್ಘಾಟಿಸಿದರು. ಸ್ಕೂಲ್​ ವ್ಯವಸ್ಥಾಪಕಿ ಗೀತಾ, ಆಕಾಶ, ಪ್ರಾಚಾರ್ಯ ಮಹೇಶ ಬಾಂಗರ, ಆಡಳಿತ ಅಧಿಕಾರಿ ಶೋಭಾದೇವಿ ಇದ್ದರು.

Published on
ಬಸವಕಲ್ಯಾಣ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಆದರ್ಶ ಮೌಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದು ಅವಶ್ಯಕ ಎಂದು ಲೋಕೋಪಯೋಗಿ ಇಲಾಖೆಯ ಎಇಇ ರಮೇಶ ಪಾಟೀಲ್​ ಹೇಳಿದರು. ಖಾನಾಪುರ ವಾಡಿ ಕ್ರಾಸ್​ ಸಮೀಪ ನೂತನವಾಗಿ ಅರಂಭವಾಗಿರುವ ಮಾರುತಿ ಇಂಟರ್​ನ್ಯಾಷನಲ್​ ಸ್ಕೂಲ್​ನಲ್ಲಿ ಶನಿವಾರ ವಿದ್ಯಾರ್ಥಿ ಪರಿಷತ್​ ಚುನಾವಣೆಗಳ ನಿಮಿತ್ತ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಅಧ್ಯಕ್ಷ ದತ್ತಾತ್ರೇಯ ಪರಶುರಾಮ ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಈ ಶಾಲೆ ಆರಂಭಿಸಿದ್ದಾರೆ. ಶಿಕ್ಷಣಕ್ಕೆ ಪೂರಕವಾದ ಪರಿಸರ ಇಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಕೂಲ್​ ವ್ಯವಸ್ಥಾಪಕಿ ಗೀತಾ, ಆಕಾಶ, ಪ್ರಾಚಾರ್ಯ ಮಹೇಶ ಬಾಂಗರ, ಆಡಳಿತ ಅಧಿಕಾರಿ ಶೋಭಾದೇವಿ ಇದ್ದರು. ಚುನಾವಣೆಯಲ್ಲಿ ಹುಗೈದ, ಸಿದ್ದಾರ್ಥ, ನೇಹಾ, ಆರಾಧ್ಯ ಮತ್ತು ಸ್ನೇಹಾ ಅಭ್ಯರ್ಥಿಗಳಾಗಿದ್ದು, 21ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net