ಭಾಷೆ ದೇವರು ನೀಡಿದ ಪ್ರಮುಖ ಕೊಡುಗೆ

ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ ಭಾಷಾಶಾಸ ವಿಭಾಗ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ವಿಕ್ರಮ ವಿಸಾಜಿ, ಪ್ರೊ.ಚಂದನ್​ ಪಾಂಡಾ, ಡಾ.ಕೋಟಾ ಸಾಯಿ ಕೃಷ್ಣ, ಡಾ.ಎನ್​.ರಾಹುಲ್​, ಡಾ.ಅಂಕಿತಾ ಸತ್ಪತಿ, ಡಾ.ಅರ್ಚನಾ ಕುಜೂರ್​ ಇತರರಿದ್ದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ ಭಾಷಾಶಾಸ ವಿಭಾಗ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ವಿಕ್ರಮ ವಿಸಾಜಿ, ಪ್ರೊ.ಚಂದನ್​ ಪಾಂಡಾ, ಡಾ.ಕೋಟಾ ಸಾಯಿ ಕೃಷ್ಣ, ಡಾ.ಎನ್​.ರಾಹುಲ್​, ಡಾ.ಅಂಕಿತಾ ಸತ್ಪತಿ, ಡಾ.ಅರ್ಚನಾ ಕುಜೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಸಚಿವ ಪ್ರೊ.ಬಿರಾದಾರ್​ ಹೇಳಿಕೆ
  • ಸಿಯುಕೆನಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ
ಕಲಬುರಗಿ: ದೇವರು ಮಾನವನಿಗೆ ನೀಡಿದ ಭಾಷೆ ಅತ್ಯಂತ ಪ್ರಮುಖ ಕೊಡುಗೆ ಎಂದು ಸಿಯುಕೆಯ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಹೇಳಿದರು.
ಕರ್ನಾಟಕ ಕೇಂದ್ರೀಯ ವಿವಿ ಭಾಷಾಶಾಸ ವಿಭಾಗ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಭಾಷೆ ಜನರನ್ನು ಸಂಪರ್ಕಿಸುವ ಸೇತುವೆ. ಭಾರತ ಭಾಷೆಗಳ ನಾಡು. ಭಾರತೀಯರು 19,500 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. ಅವುಗಳಲ್ಲಿ 121 ಪ್ರಮುಖ ಭಾಷೆಗಳಿವೆ ಎಂದರು.
ಇಂಗ್ಲಿಷ ಪ್ರಾಧ್ಯಾಪಕ ಪ್ರೊ.ಚಂದನ್​ ಪಾಂಡಾ ಬಹುಭಾಷಾ ಶಿಕ್ಷಣದ ಕುರಿತು ಯುವ ಧ್ವನಿಗಳು ಎಂಬ ವಿಷಯದ ಕುರಿತು ಮಾತನಾಡಿ, ಭಾಷೆ ಮಾನವ ನಾಗರಿಕತೆಯ ಆತ್ಮ ಎಂದು ನಮ್ಮ ಯುವಕರು ತಿಳಿದುಕೊಳ್ಳಬೇಕು. ನಾವು ನಮ್ಮ ಮಾತೃಭಾಷೆಯಲ್ಲಿ ಯೋಚಿಸುತ್ತೇವೆ. ಪ್ರತಿಯೊಂದು ಆಲೋಚನೆಯೂ ಭಾಷೆಯಾಗಿದೆ. ನಮ್ಮ ಮೊದಲ ಮೌಖಿಕ ಅಭಿವ್ಯಕ್ತಿ ಮಾತೃಭಾಷೆಯಲ್ಲಿರುತ್ತದೆ. ಭಾಷೆಯೇ ನಮ್ಮ ಸಂಸತಿ, ನಮ್ಮ ಸಂಪ್ರದಾಯ, ನಮ್ಮ ಗುರುತಿನ ಸಂಕೇತ. ಭಾಷೆ ಜೀವನಕ್ಕೆ ಅರ್ಥ ನೀಡುತ್ತದೆ. ವಸಾಹತುಶಾಹಿ ಮತ್ತು ಇಂಗ್ಲಿಷನ ಪ್ರಾಬಲ್ಯವು ಭಾಷಾ ವೈವಿಧ್ಯತೆಯ ನಷ್ಟಕ್ಕೆ ಕಾರಣ. ಇಂಗ್ಲಿಷ ಅವಕಾಶಗಳ, ಗೌರವ, ನತೆ ಮತ್ತು ಪರಂಪರೆಯ ಭಾಷೆಯಾಗಿದೆ. ನಮ್ಮ ಯುವಕರು ಡಿಜಿಟಲ್​ ಮಾಧ್ಯಮದಲ್ಲಿದ್ದಾರೆ. ಇಂಗ್ಲಿಷ ಡಿಜಿಟಲ್​ ಮಾಧ್ಯಮದ ಭಾಷೆಯಾಗಿದೆ. ನಾವು ಡಿಜಿಟಲ್​ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮಾತೃಭಾಷೆ ಬಳಸಬೇಕು. ಡಿಜಿಟಲ್​ ಮಾಧ್ಯಮದಲ್ಲಿ ಭಾಷಾ ವೈವಿಧ್ಯತೆ ಸೃಷ್ಟಿಸಬೇಕು ಎಂದರು.
ಭಾಷಾಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೋಟಾ ಸಾಯಿ ಕೃಷ್ಣ ಮಾತನಾಡಿ, ಮಾತೃಭಾಷೆ ನಮ್ಮ ಗುರುತು. ತಾಯಿ ಎಂದರೆ ಮಾತೃಭೂಮಿ ಮತ್ತು ಮಾತೃಭಾಷೆ. ಭಾಷೆ ನಮ್ಮ ವಿಚಾರಗಳು ಮತ್ತು ದೈವತ್ವದ ಶಿಲ್ಪಿ. ನಮ್ಮ ಉಪದೇಶ, ಭಜನೆ, ವಚನಗಳು, ಪ್ರಾರ್ಥನೆಗಳು ನಮ್ಮ ಮಾತೃಭಾಷೆಯಲ್ಲಿವೆ. ಅವು ದೈವತ್ವ ತರುತ್ತವೆ. ಭಾರತದ ಭಾಷೆಗಳು ಕಾಲಾನುಕ್ರಮದಲ್ಲಿ ಒಂದೇ ಮೂಲದಿಂದ ವಿಕಸನಗೊಂಡಿವೆ. ಅವುಗಳ ನಡುವೆ ಸಂಪರ್ಕವಿದೆ ಎಂದು ಹೇಳಿದರು.
ಭಾಷಾಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎನ್​.ರಾಹುಲ್​ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್​ ಪ್ರೊ.ವಿಕ್ರಮ ವಿಸಾಜಿ ಮಾತನಾಡಿದರು. ಕಾವ್ಯ ವಾಚನ ನಡೆಯಿತು.
ಡಾ. ರಾಜಣ್ಣ ಟಿ.ಡಿ, ಪ್ರೊ.ಭೀಮರಾವ್​ ಭೋಸಲೆ, ಡಾ.ಎಂ.ಜೋಹೈರ್​, ಡಾ.ರೇಷ್ಮಾ ನದಾಫ್​, ಡಾ.ಅರ್ಚನಾ ಕುಜೂರ್​, ಡಾ. ಅಲೋಕ್​ ಗೌರವ್​, ಡಾ.ಶಿವಾನಂದ್​ ಬಂಟನೂರ್​, ಪ್ರೊ.ಮನೋಹರ್​ ಭಂಡಾರೆ, ಡಾ.ಮಂಜುಲ, ಡಾ.ಶ್ರೀಲತಾ ಕವಿತೆ ವಾಚಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿನ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮ ಸಂಯೋಜಕಿ ಡಾ.ಅಂಕಿತಾ ಸತ್ಪತಿ ಸ್ವಾಗತಿಸಿದರು. ಸಂಕಲ್ಪ ಮಿಶ್ರಾ ಮತ್ತು ಶಿಮ್ರಾನ್​ ಪರ್ವೀನ್​ ನಿರೂಪಿಸಿದರು. ಡಾ.ಜಿ.ಆಂಜನೇಯಲು ವಂದಿಸಿದರು.
"

ನಾವು ಭಾಷೆ ಮತ್ತು ಸಂಸತಿಯ ವಿಷಯದಲ್ಲಿ ತುಂಬಾ ಶ್ರೀಮಂತರಾಗಿದ್ದೇವೆ. ನಮ್ಮಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಯುನೆಸ್ಕೋ ಪ್ರಕಾರ ಕಳೆದ 50 ವರ್ಷಗಳಲ್ಲಿ 109 ಭಾಷೆಗಳು ಕಣ್ಮರೆಯಾಗಿದ್ದರೆ, 600 ಅಳಿವಿನಂಚಿನಲ್ಲಿವೆ. ನಮ್ಮ ಭಾಷೆ ರಸುವುದು ನಮ್ಮ ಜವಾಬ್ದಾರಿ.

ಪ್ರೊ.ಆರ್​.ಆರ್​.ಬಿರಾದಾರ್​,

ಕುಲಸಚಿವ, ಸಿಯುಕೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net