ಅಂಗಾಂಗ ದಾನಕ್ಕೆ ಅರಿವಿನ ಕೊರತೆ

ಕಲಬುರಗಿ ಶರಣಬಸವ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನಿಗಳ ದಿನ ಕಾರ್ಯಕ್ರಮದಲ್ಲಿ ಪ್ರೊ.ಅನಿಲಕುಮಾರ ಬಿಡವೆ, ಪ್ರೊ.ವಿ.ಡಿ.ಮೈತ್ರಿ, ಶಕೀಲ್​ ಅಂಗಡಿ, ಡಾ.ಲಕ್ಷಿ$್ಮ ಪಾಟೀಲ್​ ಮಾಕಾ, ಡಾ.ಎಸ್​.ಎಚ್​.ಹೊನ್ನಳ್ಳಿ, ಡಾ.ಸುಜಾತಾ ಮಲ್ಲಾಪುರ, ಡಾ.ಶರಣಪ್ಪ ಕ್ಯಾತನಾಳ ಇತರರಿದ್ದರು.
ಕಲಬುರಗಿ ಶರಣಬಸವ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನಿಗಳ ದಿನ ಕಾರ್ಯಕ್ರಮದಲ್ಲಿ ಪ್ರೊ.ಅನಿಲಕುಮಾರ ಬಿಡವೆ, ಪ್ರೊ.ವಿ.ಡಿ.ಮೈತ್ರಿ, ಶಕೀಲ್​ ಅಂಗಡಿ, ಡಾ.ಲಕ್ಷಿ$್ಮ ಪಾಟೀಲ್​ ಮಾಕಾ, ಡಾ.ಎಸ್​.ಎಚ್​.ಹೊನ್ನಳ್ಳಿ, ಡಾ.ಸುಜಾತಾ ಮಲ್ಲಾಪುರ, ಡಾ.ಶರಣಪ್ಪ ಕ್ಯಾತನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂತ್ರಪಿಂಡ ತಜ್ಞ ಡಾ.ಮಂಜುನಾಥ ದೋಶೆಟ್ಟಿ ಕಳವಳ
  • ಶರಣಬಸವ ವಿವಿಯಲ್ಲಿ ಕಾರ್ಯಕ್ರಮ
ಕಲಬುರಗಿ: ಅಂಗಾಂಗ ದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿಂದಾಗಿ ಹೃದಯ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಚರ್ಮ ಸೇರಿ ಜೀವ ಉಳಿಸುವ ಅಂಗಾಂಗಗಳ ತುರ್ತು ಅಗತ್ಯವಿರುವ ಅನೇಕ ರೋಗಿಗಳು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಖ್ಯಾತ ಮೂತ್ರಪಿಂಡ ತಜ್ಞ ಡಾ.ಮಂಜುನಾಥ ದೋಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಜೀವನ ಆಧಾರ ಫೌಂಡೇಷನ್​, ಚಿರಾಯು ಆಸ್ಪತ್ರೆ ಸಹಯೋಗದಡಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನಿಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಯಶಸ್ವಿಯಾಗಿ ಅನೇಕ ಮೂತ್ರಪಿಂಡ ಕಸಿ ಶಸಚಿಕಿತ್ಸೆ ನಡೆಸಲಾಗಿದೆ. ಪ್ರತಿವರ್ಷ ಜೀವ ಉಳಿಸುವ ಅಂಗಾಂಗಗಳ ಕಸಿ ಅಗತ್ಯವಿರುವ ಸಾವಿರಾರು ಗಂಭೀರ ಸ್ಥಿತಿಯ ರೋಗಿಗಳು ಸೂಕ್ತ ಅಂಗಾಂಗಗಳು ಲಭ್ಯವಾಗದ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ ಎಂದರು.
ಮಿದುಳು ನಿಷ್ಕ್ರಿಯಗೊಂಡ (ಬ್ರೇನ್​ ಡೆಡ್​)ವರ ಅಂಗಾಂಗ ದಾನ ಮಾಡುವ ಮೂಲಕ ಹೃದಯ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಶ್ವಾಸಕೋಶ ಸೇರಿ ತುರ್ತು ಕಸಿ ಅಗತ್ಯವಿರುವ ರೋಗಿಗಳ ಜೀವ ಉಳಿಸಬಹುದು ಎಂಬ ಅರಿವು ಅನೇಕರಲ್ಲಿಲ್ಲ. ಮಿದುಳು ನಿಷ್ಕ್ರಿಯಗೊಂಡ ತಮ್ಮ ಆತ್ಮೀಯರ ಅಂಗಾಂಗ ದಾನ ಮಾಡುವುದರಿಂದ, ಅವರ ಪ್ರೀತಿಪಾತ್ರರು ಸಾವಿನ ನಂತರವೂ ಮತ್ತೊಬ್ಬರ ದೇಹದಲ್ಲಿ ಜೀವಂತವಾಗಿರುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಡಾ.ದೋಶೆಟ್ಟಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಮಾತನಾಡಿ, ಮರಣದ ನಂತರವೂ ನೇತ್ರ ದಾನ ಮಾಡಬಹುದು. ಪ್ರತಿಯೊಬ್ಬರೂ ಅಂಗಾಂಗ ದಾನಿಗಳಾಗಿ ನೋಂದಾಯಿಸಿಕೊಳ್ಳಬೇಕು. ಆಗ ನಮ್ಮ ಮರಣದ ನಂತರವೂ ಮತ್ತೊಬ್ಬರ ಮೂಲಕ ಈ ಸುಂದರ ಜಗತ್ತಿನ ಬಣ್ಣಗಳನ್ನು ಅಕ್ಷರಶ@ ಕಾಣಬಹುದು ಎಂದು ಭಾವುಕರಾಗಿ ಹೇಳಿದರು.
ಕುಲಸಚಿವೆ ಡಾ.ಲಕ್ಷಿ$್ಮ ಪಾಟೀಲ್​ ಮಾಕಾ, ನಿರ್ದೇಶಕ ಪ್ರೊ.ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ.ಎಸ್​.ಎಚ್​. ಹೊನ್ನಳ್ಳಿ, ಸಂಶೋಧನಾ ಡೀನ್​ ಡಾ.ಸುಜಾತಾ ಮಲ್ಲಾಪುರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಪ್ಪ ಕ್ಯಾತನಾಳ, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ರಾಕೇಶ್​ ಕಾಂಬಳೆ, ಬಸಂತಿ ಗುತ್ತೇದಾರ್​ ಇತರರಿದ್ದರು. ಡೀನ್​ ಡಾ.ಶಿವಕುಮಾರ ಜವಳಿಗಿ ಸ್ವಾಗತಿಸಿದರು. ಪ್ರೊ.ನಿರುಪಮಾ ವಂದಿಸಿದರು. ಪ್ರೊ.ಶ್ರುತಿ ಹಂಚನಾಳ ನಿರೂಪಣೆ ಮಾಡಿದರು.
ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಸಂಗ್ರಹಿಸಿದ ಮೂತ್ರಪಿಂಡವನ್ನು ವಿಜಯಪುರದಿಂದ ಕಲಬುರಗಿಗೆ ತಂದು ಜೀವನ್ಮರಣದ ಹೋರಾಟದಲ್ಲಿದ್ದ ಮಹಿಳೆಗೆ ಯಶಸ್ವಿಯಾಗಿ ಕಸಿ ಮಾಡಲು ಗ್ರೀನ್​ ಕಾರಿಡಾರ್​ ಮೂಲಕ ಸಂಚಾರಕ್ಕೆ ಅಡಚಣೆಯಾಗದಂತೆ ಮಾರ್ಗ ಕಲ್ಪಿಸಲು ಶ್ರಮಿಸಿದ ಕಲಬುರಗಿ ಸಂಚಾರ ಪೊಲೀಸ್​ ಠಾಣೆ ಸರ್ಕಲ್​ ಇನ್​ಸ್ಪೆಕ್ಟರ್​ ಶಕೀಲ್​ ಅಂಗಡಿ, ಸಿಎಆರ್​ನ ರಿಸರ್ವ್​ ಪೊಲೀಸ್​ ಇನ್​ಸ್ಪೆಕ್ಟರ್​ ಮಹಾದೇವ ಪಾಟೀಲ್​ ಇತರ ಮೂವರು ಪೊಲೀಸ್​ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ರೋಗಿ ಜೀವ ಉಳಿಸಲು ಗ್ರೀನ್​ ಕಾರಿಡಾರ್​ ಮೂಲಕ ವ್ಯವಸ್ಥೆ ಕಲ್ಪಿಸಿಸ ಪೊಲೀಸರ ಸೇವೆ ಗುರುತಿಸಿ ಮುಖ್ಯಮಂತ್ರಿಗಳಿಂದ ನೀಡಲಾದ ಪ್ರಶಂಸನಾ ಪತ್ರ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
"

ಅಂಗಾಂಗ ದಾನ ಒಂದು ಜನಾಂದೋಲನವಾಗಿ ರೂಪಿಸಬೇಕು. ಯುವಕರು ತಮ್ಮ ಪಾಲಕರ ಹೆಸರನ್ನೂ ಅಂಗಾಂಗ ದಾನಕ್ಕೆ ನೋಂದಾಯಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಬೇಕು.

— > ಪ್ರೊ.ಅನಿಲಕುಮಾರ ಬಿಡವೆ ಉಪಕುಲಪತಿ, ಶರಣಬಸವ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net