ಹೊಸ ವಾಹನಗಳ ನೋಂದಣಿಗೂ ಕೆವೈಸಿ ಅಗತ್ಯ

ಕಂದಾಯ ಸಚಿವ ಕೃಷ್ಣಬೈರೇಗೌಡ
ಕಂದಾಯ ಸಚಿವ ಕೃಷ್ಣಬೈರೇಗೌಡ
Published on
ಬೆಂಗಳೂರು: ಹೊಸ ವಾಹನಗಳ ನೋಂದಣಿಗೆ ಆಧಾರ್ ಕೆವೈಸಿ ಕಡ್ಡಾಯ ಮಾಡುವುದು ಸೂಕ್ತ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ಸಕಾಲ ಸೇವೆಗಳಿಗೆ ಮತ್ತಷ್ಟು ವೇಗ ನೀಡುವ ಸಂಬಂಧ ಅಧಿಕಾರ ಸಭೆ ನಡೆಸಿದರು. ಚಾಲನಾ ಪರವಾನಗಿ ಪಡೆಯಲು ಆಧಾರ್ ಕಡ್ಡಾಯ ಮಾದರಿಯಲ್ಲಿ ವಾಹನಗಳ ನೋಂದಣಿಗೆ ಇ-ಕೆವೈಸಿ ಏಕೆ ಕಡ್ಡಾಯ ಮಾಡಬಾರದು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಸಕಾಲ ಸೇವೆಯನ್ನು ನಿಗದಿತ ಸಮಯಕ್ಕೆ ನೀಡಬೇಕು. ಈ ನಿಟ್ಟಿನಲ್ಲಿ ಸಕಾಲಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಯ ಸೇವೆ ಬಗೆಗಿನ ದತ್ತಾಂಶ ಬೆರಳ ತುದಿಯಲ್ಲಿ ಇರಬೇಕು.
ಅದಕ್ಕಾಗಿಯೇ ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ಸಕಾಲ ಕುಟುಂಬ ಡೇಟಾಬೇಸ್ ಅಪ್‌ಡೇಟ್ ಮಾಡಲಾಗುತ್ತಿದೆ. ಕೆಲವು ಸೇವೆಗಳನ್ನು ಆಟೋಮೇಷನ್ ಮಾಡುವ ಅಗತ್ಯವಿದೆ. ಸೇವೆಗಳ ಆಟೋಮೇಷನ್ ಮಾಡಿದರೆ ಜನರಿಗೆ ಸೇವೆ ಶೀಘ್ರವಾಗಿ ಸಿಗಲಿದೆ. ಲಂಚ, ವಿಳಂಬ, ಶೋಷಣೆಯಿಂದ ಜನರಿಗೆ ಮುಕ್ತಿ ಸಿಗಲಿದೆ.
ಸಕಾಲದಲ್ಲಿ ಹತ್ತಾರು ಇಲಾಖೆಗಳಿದ್ದು ಹಲವು ಸೇವೆಗಳನ್ನು ಹೊರಗುತ್ತಿಗೆ ನೀಡಲಾಗಿದ್ದು, ಅವರ ಸಂಬಳವನ್ನು ಕುಟುಂಬ ಆ್ಯಪ್ ಮೂಲಕ ನೀಡುವಂತಾಗಬೇಕು. ವೃತ್ತಿ ತೆರಿಗೆ ಸಹ ಕುಟುಂಬ ಆ್ಯಪ್ ವ್ಯಾಪ್ತಿಗೆ ತರಬೇಕು. ವೃತ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕವೇ ಸಂಗ್ರಹಿಸುತ್ತಿರುವುದರಿಂದ ಇಂಟಿಗ್ರೇಟ್ ಮಾಡುವುದು ಕಷ್ಟವೇನಲ್ಲ. ಜಿಎಸ್‌ಟಿಯನ್ನೂ ಇಂಟಿಗ್ರೇಟ್ ಮಾಡಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net