ಕಸ್ಕೊಟಾ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿ

ಕಸ್ಕೊಟಾ ಕಳೆಯಿಂದ ಹಾಳಾಗುತ್ತಿರುವ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ತೊಗರಿ ಹೊಲಕ್ಕೆ ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ಪಾಟೀಲ್​ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಗೋಪಾಲ ಎಂ.ಪಿ. ಗಾರಂಪಳ್ಳಿ,
ಕಸ್ಕೊಟಾ ಕಳೆಯಿಂದ ಹಾಳಾಗುತ್ತಿರುವ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ತೊಗರಿ ಹೊಲಕ್ಕೆ ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ಪಾಟೀಲ್​ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಗೋಪಾಲ ಎಂ.ಪಿ. ಗಾರಂಪಳ್ಳಿ,
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ಪಾಟೀಲ್​ ಒತ್ತಾಯ
  • ಗಾರಂಪಳ್ಳಿಯಲ್ಲಿ ತೊಗರಿ ಬೆಳೆ ಪರಿಶೀಲನೆ
ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಚಿತ್ತಾಪುರ ಮತೇತ್ರಗಳಲ್ಲಿ ಅರಬ್​ ತಳಿಯಾದ ಕಸ್ಕೊಟಾ ಎಂಬ ಕಳೆ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದ್ದು, ನಿಯಂತ್ರಣಕ್ಕೆ ಔಷಧ ಇಲ್ಲ. ದಿನೇದಿನೆ ದ್ವಿದಳ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕಾಣಿಸಿಕೊಂಡು ಹಾನಿ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ಪಾಟೀಲ್​ ಆತಂಕ ವ್ಯಕ್ತಪಡಿಸಿದರು.
ಕಸ್ಕೊಟಾದಿಂದ ಹಾಳಾಗುತ್ತಿರುವ ಗಾರಂಪಳ್ಳಿ ಗ್ರಾಮದ ತೊಗರಿ ಹೊಲಕ್ಕೆ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ಅವರು, ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರ ಪರಿಗಣಿಸಿ ನಷ್ಟದ ಸಮಿೆ ನಡೆಸಿ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್​ ೂಷಿಸುವುದರ ಜತೆ ಹರಡುವಿಕೆಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯಬೇಕು. ವಿಳಂಬ ಧೋರಣೆ ಅನುಸರಿಸಿದರೆ ಚಿಂಚೋಳಿ ಬಂದ್​ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಶಿವಕುಮಾರ ಅಂಬಲಗಿ, ರೇವಣಸಿದ್ದಪ್ಪ ಪೂಜಾರಿ, ಸಂಗನಬಸಯ್ಯ ಮಠ, ಸಂತೋಷ ರೆಡ್ಡಿ, ಗೋಪಾಲ ರೆಡ್ಡಿ, ಅಮೃತ ಮಡಿವಾಳ, ಸಂತೋಷ ಝರಪುರ, ವೀರಶೆಟ್ಟಿ ಮಗಿ, ಇನಾಯಾತ್​ ಅಲಿ, ಮಹಾದೇವಪ್ಪ, ವೀರಶೆಟ್ಟಿ ಝರಪುರ, ಸತೀಶ ಇಟಗಿ ಇತರರಿದ್ದರು.
"

ಕ್ಷೆತ್ರದ ರೈತರ ಹಿತ ಕಾಪಾಡಲು ಸದನದಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಕಸ್ಕೊಟಾ ಕಳೆ ಕುರಿತು ಧ್ವನಿ ಎತ್ತಿರುವುದಕ್ಕೆ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಸ್ಪಂದಿಸಿದ್ದು ಸ್ವಾಗತಾರ್ಹ. ಆದರೆ ಕಸ್ಕೊಟಾ ಕುರಿತು ಸರ್ಕಾರ ಜಾಗೃತಿಗೆ ಸೀಮಿತವಾಗದೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿ ಸಬೇಕು.

> ಗೌತಮ ಪಾಟೀಲ್​ನಿರ್ದೇಶಕ,

ಡಿಸಿಸಿ ಬ್ಯಾಂಕ್​ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net