ಬೆಲಹೊಂಗಲ ಸಮೀಪದ ಇನಾಮದಾರ ಶುಗರ್ಸ್ ಕಾರ್ಖಾನೆ ವತಿಯಿಂದ ಸಹಕಾರ ಧುರೀಣ ಅಮಿತ ಕೋರೆ ಜನ್ಮದಿನ ನಿಮಿತ್ತ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ರವೀಂದ್ರ ಪಟ್ಟಣಶೆಟ್ಟಿ, ವಿ.ಸುಬ್ಬುರತಿನಂ, ವೀರಯ್ಯ ವಿರಕ್ತಮಠ, ರಮೇಶ ಜಾಧವ ಇತರರಿದ್ದರು.
ಬೈಲಹೊಂಗಲ: ಸಹಕಾರ ೇತ್ರದ ಅಭಿವದ್ಧಿಗೆ ಅಮಿತ ಕೋರೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಇನಾಮದಾರ ಶುಗರ್ಸ್ ಮುಖ್ಯ ಆಡಳಿತಾಧಿಕಾರಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಸಮೀಪದ ಇನಾಮದಾರ ಶುಗರ್ಸ್ ಕಾರ್ಖಾನೆಯಲ್ಲಿ ರಾಷ್ಟ್ರೀಯ ಸಕ್ಕರೆ ಮಹಾಮಂಡಳಿ ನಿರ್ದೇಶಕ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಮಿತ ಕೋರೆ 46ನೇ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ೇತ್ರದ ಅಭಿವದ್ಧಿಯಾದರೆ ದೇಶ, ರೆತರ, ಜನಸಾಮಾನ್ಯರ ಅಭಿವದ್ಧಿಯಾಗುತ್ತದೆ. ಅಮಿತ ಕೋರೆ ಹೊಸ ಯೋಜನೆಗಳ ಮೂಲಕ ಸಕ್ಕರೆ ಉದ್ಯಮ ಬಲಪಡಿಸಲು ಕ್ರಮವಹಿಸಿದ್ದಾರೆ ಎಂದರು.
ಕೋರೆ ಜನ್ಮದಿನದ ಅಂಗವಾಗಿ ಮರಕುಂಬಿ ಪ್ರೌಢಶಾಲೆ ವಿದ್ಯಾರ್ಥಿ&ವಿದ್ಯಾರ್ಥಿನಿಯರಿಗೆ ನೋಟ್ಬುಕ್, ಬೆಲಹೊಂಗಲದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಕಾರ್ಖಾನೆ ಆವರಣದಲ್ಲಿ ಸಸಿ ನೆಡಲಾಯಿತು.
ಕಾರ್ಖಾನೆ ತಾಂತ್ರಿಕ ವಿಭಾಗದ ಮುಖ್ಯಸ್ಥ ವಿ.ಸುಬ್ಬುರತಿನಂ, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ವೀರಯ್ಯ ವಿರಕ್ತಮಠ, ರಮೇಶ ಜಾಧವ, ಸಂತೋಷ ಶಿಂಧೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಕಾರ್ಮಿಕರು, ಸಿಬ್ಬಂದಿ ಉಪಸ್ಥಿರಿದರು.