ಕೋಲಾರದಲ್ಲಿ ೮೦೦ ರ ಗಡಿ ದಾಟಿದ ಟೊಮೆಟೋ ಬೆಲೆ

ಚಿತ್ರ ೧೮ ಕೆ.ಎಲ್.ಆರ್. ೦೨ : ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ವ್ಯಾಪಾರಸ್ಥರು ಭಾಗಿಯಾಗಿರುವುದು.
ಚಿತ್ರ ೧೮ ಕೆ.ಎಲ್.ಆರ್. ೦೨ : ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ವ್ಯಾಪಾರಸ್ಥರು ಭಾಗಿಯಾಗಿರುವುದು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಗುರುವಾರ ೧೫ ಕೆ.ಜಿ. ಬಾಕ್ಸ್ ೮೨೦ ರೂ.ಗಳಿಗೆ ಮಾರಾಟವಾಗುವ ಮೂಲಕ ಫಸಲು ಕಡಿಮೆಯಿದ್ದರು ಸಹ ವರ್ಷದ ಕೊನೆಯಲ್ಲಿ ಇರುವ ಫಸಲು ರೈತನ ಕೈ ಹಿಡಿಯುವಂತಾಗಿದೆ.
ಸಾಮಾನ್ಯವಾಗಿ ಏಫ್ರಿಲ್ ತಿಂಗಳಿAದ ಜುಲೈ ತಿಂಗಳ ತನಕ ಟೊಮೆಟೋ ಸುಗ್ಗಿ ಕಾಲ. ಆಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುತ್ತದೆ ಎಂದು ರೈತರು ಹೆಚ್ಚಾಗಿ ಟೊಮೆಟೋವನ್ನು ಬೆಳೆಯುತ್ತಾರೆ. ಆದರೆ ಈ ವರ್ಷ ಸುಗ್ಗಿಯಲ್ಲಿ ಬೆಲೆ ರೈತನ ಕೈಹಿಡಿಯಲಿಲ್ಲ. ಉತ್ತಮ ಬೆಲೆ ಬರುತ್ತದೆಂಬ ನಿರೀಕ್ಷೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ರೈತನಿಗೆ ಸುಗ್ಗಿ ಕಾಲ ಕೈಹಿಡಿಯದೇ ಇದ್ದ ಕಾರಣ ರೈತ ಸಾಲದ ಸಂಕಷ್ಟಕ್ಕೆ ಸಿಲುಕುವಂತಾಯಿತು.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಟೊಮೆಟೋಗೆ ಹೆಚ್ಚು ಬೆಲೆ ಬರುತ್ತಿಲಿಲ್ಲ. ಈ ವರ್ಷ ಸಮುದ್ರ ತೀರ ಪ್ರದೇಶಗಳಲ್ಲಿ ಮಳೆ ಹೆಚ್ಚಾದ ಕಾರಣ ಫಸಲಿಗೆ ಧಕ್ಕೆ ಉಂಟಾಗಿದ್ದು, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮಬಂಗಾಳ, ಒರಿಸ್ಸಾ ಭಾಗಗಳಲ್ಲಿ ಟೊಮೆಟೋಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಕೋಲಾರ ಟೊಮೆಟೋ ಮಾರುಕಟ್ಟೆ ಕಡೆ ವ್ಯಾಪಾರಸ್ಥರು ಮುಖ ಮಾಡಿರುವ ಕಾರಣ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಬೆಲೆ ಇನ್ನು ಹೆಚ್ಚಾಗಬಹುದು ಅಥವಾ ಇದೇ ಬೆಲೆ ಕೆಲವು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಮಂಡಿ ಮಾಲೀಕರು ಹೇಳುತ್ತಿದ್ದಾರೆ.
ಬಾಕ್ಸ್
ಟೊಮೆಟೋ ಬೆಲೆ ಏರಿಕೆಯಾಗದ ಸಮಯದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಾರಸ್ಥರು ಮತ್ತು ಮಂಡಿ ಮಾಲೀಕರು ಒಂದಾಗಿ ಪಾಟಿ ಸವಾಲ್‌ಗೆ ಬಿಡದೆ ಬೆಲೆಯನ್ನು ಮುಟುಕುಗೊಳಿಸುತ್ತಿದ್ದಾರೆ ಎಂಬ ವರದಿ ವಿಜಯವಾಣಿಯಲ್ಲಿ ವರದಿಯಾದ ನಂತರ ಎಪಿಎಂಸಿಯವರು ಎಚ್ಚೆತ್ತುಕೊಂಡು ಮಂಡಿ ಮಾಲೀಕರಿಗೆ ನೋಟಿಸ್ ನೀಡಿದ್ದರು. ಇತ್ತೀಚೆಗೆ ಮಂಡಿ ಮಾಲೀಕರು ಹರಾಜು ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತವಾಗಿ ಮುಂದುವರೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಪ್ರಚಾರಗೊಳ್ಳುತ್ತಿರುವುದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಕೋಟ್
ಹತ್ತಾರು ವರ್ಷಗಳಿಂದ ಕೋಲಾರ ಮಾರುಕಟ್ಟೆಯಲ್ಲಿ ಟಮೋಟ ವಹಿವಾಟು ಮಾಡುತ್ತಿದ್ದು, ನಮ್ಮನ್ನು ಉಳಿಸಿ ಬೆಳೆಸುತ್ತಿರುವ ರೈತರಿಗೆ ಯಾವುದೇ ರೀತಿಯಲ್ಲೂ ನಷ್ಟವಾಗುವಂತಹ ಕೆಲಸ ಮಾಡುವುದಿಲ್ಲ. ನಮಗೆ ರೈತರು ಮುಖ್ಯ. ರೈತರು ನಮಗೆ ಟಮೋಟ ಹಾಕಿದರೆ ಮಾತ್ರ ವ್ಯಾಪಾರಸ್ಥರು ನಮ್ಮಲ್ಲಿ ಖರೀದಿಸಲು ಬರುತ್ತಾರೆ. ಇತ್ತೀಚೆಗೆ ಟಮೋಟ ಬೆಲೆ ಏರಿಕೆಯಾಗಿರುವ ರೈತರಿಗೆ ಸ್ವಲ್ಪ ಲಾಭ ಸಿಗುತ್ತಿದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಟಮೋಟ ಬೆಲೆ ಏರಿಕೆ ಕಂಡಿದೆ.
-ಚAದ್ರಪ್ಪ, ಮಂಡಿ ಮಾಲೀಕ.
ಕೋಟ್
ಮಂಡಿ ಮಾಲೀಕರು ಮತ್ತು ವ್ಯಾಪಾರಸ್ಥರು ಒಂದಾಗಿ ಟೊಮೆಟೋ ಹರಾಜು ಪ್ರಕ್ರಿಯೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದ ನಂತರ ಎಲ್ಲಾ ಮಂಡಿ ಮಾಲೀಕರಿಗೂ ನೋಟಿಸ್ ನೀಡಲಾಗಿತ್ತು. ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ಸಹಿಸುವುದಿಲ್ಲ. ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದ್ದು, ಈಗ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೆಲೆ ಏರಿಕೆಯಾಗಿದೆ. ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಗಮನಿಸುತ್ತಿದ್ದಾರೆ.
-ಕಿರಣ್, ಎಪಿಎಂಸಿ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net