ಶಿಕ್ಷಣದ ಜತೆ ಸಂವಿಧಾನದ ಜ್ಞಾನ ಅವಶ್ಯಕ

ಬಸವಕಲ್ಯಾಣದ ಐಡಿಯಲ್​ ಗ್ಲೋಬಲ್​ ಸಿಬಿಎಸ್​ಇ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ನಾಯಕರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್​ಸಿ ವಿಜಯಸಿಂಗ್​ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಮುಜಾಹಿದ್​ ಪಾಶಾ ಖುರೇಶಿ, ಹುಲಸೂರು ತಹಸೀಲ್ದಾರ್​ ಶಿವಾನಂದ ಮೇತ್ರೆ, ತಹಸಿನ್​ ಅಲಿ ಜಮಾದಾರ, ಆಕಾಶ ಖಂಡಾಳೆ ಇತರರಿದ್ದರು.
ಬಸವಕಲ್ಯಾಣದ ಐಡಿಯಲ್​ ಗ್ಲೋಬಲ್​ ಸಿಬಿಎಸ್​ಇ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ನಾಯಕರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್​ಸಿ ವಿಜಯಸಿಂಗ್​ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಮುಜಾಹಿದ್​ ಪಾಶಾ ಖುರೇಶಿ, ಹುಲಸೂರು ತಹಸೀಲ್ದಾರ್​ ಶಿವಾನಂದ ಮೇತ್ರೆ, ತಹಸಿನ್​ ಅಲಿ ಜಮಾದಾರ, ಆಕಾಶ ಖಂಡಾಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಎಂಎಲ್​ಸಿ ವಿಜಯಸಿಂಗ್​ ಅಭಿಮತ
  • ಕಲ್ಯಾಣದಲ್ಲಿ ಪದಗ್ರಹಣ ಕಾರ್ಯಕ್ರಮ
ಬಸವಕಲ್ಯಾಣ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂವಿಧಾನದ ಜ್ಞಾನ, ತಿಳುವಳಿಕೆ ಇಟ್ಟುಕೊಂಡು ಸಾಗಿದರೆ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯವಾಗುತ್ತದೆ ಎಂದು ಮಾಜಿ ಎಂಎಲ್​ಸಿ ವಿಜಯಸಿಂಗ್​ ಹೇಳಿದರು.
ನಗರದ ಐಡಿಯಲ್​ ಗ್ಲೋಬಲ್​ ಸಿಬಿಎಸ್​ಇ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ನಾಯಕರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಹೇಳಿದಂತೆ ಸತ್ಯ ಮತ್ತು ಶಿಕ್ಷಣದಿಂದಲೇ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಅಭಿಪ್ರಾಯಪಟ್ಟರು.
ನೀಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬಹಳ ವಿದ್ಯಾರ್ಥಿಗಳೂ ನಿರಾಶೆಗೊಂಡಿದ್ದಾರೆ. ಕೊನೆಗೆ ವ್ಯವಸ್ಥೆ ವಿರುದ್ಧವೇ ಒಂದುಗೂಡಿ ಹೋರಾಟ ಮಾಡಿ ವ್ಯವಸ್ಥೆ ಸರಿಪಡಿಸುವಲ್ಲಿ ಯಶಸ್ವಿಯಾದರು. ಇದು ನಮ್ಮ ದೇಶದ ವಿದ್ಯಾರ್ಥಿಗಳ ಶಕ್ತಿಯಿಂದಲೇ ಸಾಧ್ಯವಾಯಿತು ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ನಿವೃತ್ತ ಕ್ಯಾಪ್ಟನ್​ ಪ್ರಕಾಶ ಸೋನಾರೆ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇರಲು ಸಾಕಷ್ಟು ಅವಕಾಶಗಳಿವೆ. 10ನೇ, ಪಿಯುಸಿ, ಪದವಿಯಲ್ಲಿ ಪಾಸಾದ ಮೇಲೆ ನಿಮ್ಮ ವಿದ್ಯಾರ್ಹತೆ, ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಹಾಗೂ ವಿವಿಧ ಸ್ಪಧಾತ್ಮಕ ಪರೀಕ್ಷೆಗಳ ಮೂಲಕ ಸೇವೆಯಲ್ಲಿ ಸೇರಿ ದೇಶದ ಸೇವೆಯಲ್ಲಿ ತಾವು ಭಾಗಿಯಾಗಬೇಕು. ಒಳ್ಳೆಯ ಗುರಿ, ಪ್ರಯತ್ನ, ಆರೋಗ್ಯದಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಮುಜಾಹಿದ್​ ಪಾಶಾ ಖುರೇಶಿ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆ ಜವಾಬ್ದಾರಿ ಅತ್ಯಂತ ಮಹತ್ವದ್ದು, ಈ ನಿಟ್ಟಿನಲ್ಲಿ ಸಂಸ್ಥೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ. ನಾಯಕತ್ವ ಹುದ್ದೆ ಅಲ್ಲ ಅದು ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಶಾಲೆಯ ನಿಯಮಗಳನ್ನು ಪಾಲಿಸಬೇಕು ಶಿಸ್ತು, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ಹುಲಸೂರು ತಹಸೀಲ್ದಾರ ಶಿವಾನಂದ ಮೇತ್ರೆ, ಜೆಡಿಎಸ್​ ತಾಲೂಕು ಘಟಕದ ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯೆ ಶಾಹೀದಾಬಾನು, ಡಾ.ಪ್ರಿಯಾಂಕಾ ಮಂಠಾಳೆ, ಡಾ.ಎಂ.ಎ ಕರೀಮಸಾಬ್​, ಶಾಂತಲಿಂಗ ಮಠಪತಿ, ಸಂಸ್ಥೆ ನಿರ್ದೇಶಕ ಮುಜತಾಹಿದ್​ಉಮರ್​ ಖುರೇಶಿ, ಮುಕ್ತಾದಿ ಉಮರ ಖುರೇಶಿ, ಪ್ರಾಚಾರ್ಯ ಬಾಸಿಲುದ್ದಿನ್​ ಆಜಾದ್​, ಕರೀಮ ಹುಣಜಿ, ಶಿವಕುಮಾರ, ಸತೀಶ, ರಹೀಮ್​ ಕಾರಿಗಾರ ಇತರರಿದ್ದರು. ಆಯ್ಕೆಯಾದ ವಿದ್ಯಾರ್ಥಿ ನಾಯಕ, ಉಪನಾಯಕ, ಹಾಗೂ ವಿವಿಧ ವಿಭಾಗಗಳ ಪ್ರತಿನಿಧಿಗಳಿಗೆ ಬ್ಯಾಚ್​ಗಳನ್ನು ಧರಿಸಿ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಶುಭ ಹಾರೈಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net