ಕಲಬುರಗಿ ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಚೆಸ್ ತಂಡಕ್ಕೆ ಆಯ್ಕೆಯಾದ ಖುಷಿ.ಕೆ ಅವರನ್ನು ಮಂಗಳವಾರ ಸತ್ಕರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾಯೆರ್ ಡಾ.ಸೀಮಾ ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ರಾಜಲಕ್ಷಿ$್ಮ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
ಕಲಬುರಗಿ: ನಗರದ ಗೋದುತಾಯಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಖುಷಿ.ಕೆ ಅವರು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ನಡೆಸುವ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯ ಆಯ್ಕೆಯಲ್ಲಿ ಕಲಬುರಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಖುಷಿ.ಕೆ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಹುಬ್ಬಳಿಯ ಎಸ್ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ನಡೆದ ಎರಡು ದಿನ ಪಂದ್ಯದಲ್ಲಿ ವಿದ್ಯಾರ್ಥಿನಿ ಸಾಧನೆ ಮಾಡಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಿಣಿ ಎಸ್.ಅಪ್ಪ, 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಹರ್ಷ ವ್ಯಕ್ತಪಡಿಸಿ, ಆಶೀರ್ವದಿಸಿದ್ದಾರೆ.
ಮಹಾವಿದ್ಯಾಲಯದ ಪ್ರಾಚಾಯೆರ್ ಡಾ.ಸೀಮಾ ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ರಾಜಲಕ್ಷಿ$್ಮ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸತ್ಕರಿಸಿ ಅಭಿನಂದಿಸಿದ್ದಾರೆ.