ಮಾದರಿ ಶಾಲೆ ನಿರ್ಮಾಣಕ್ಕೆ ಖೋಡಳ್ಳಿ ಶ್ರಮ

ಕಾಳಗಿ ತಾಲೂಕಿನ ಸುಂಠಾಣ ಬಡಾ ತಾಂಡಾದಲ್ಲಿ ವರ್ಗಾವಣೆಗೊಂಡ ಪ್ರಭಾರಿ ಮುಖ್ಯಶಿಕ್ಷಕ ಹಣಮಂತ ಖೋಡಳ್ಳಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗೀತಾ ಪ್ರೇಮಕುಮಾರ, ಅನೀಲಕುಮಾರ ಗುತ್ತೇದಾರ್​, ಸಂತೋಷ ಕಲಮೂಡ, ಬಸಂತರಾಯ ಪೆದ್ದಿ, ಜಗನ್ನಾಥ ಬಂಡಿ, ಅಶೋಕ ಹೊಸಮನಿ, ಹಣಮಂತ ಮಂತೆಟ್ಟಿ ಇತರರಿದ್ದರು.
ಕಾಳಗಿ ತಾಲೂಕಿನ ಸುಂಠಾಣ ಬಡಾ ತಾಂಡಾದಲ್ಲಿ ವರ್ಗಾವಣೆಗೊಂಡ ಪ್ರಭಾರಿ ಮುಖ್ಯಶಿಕ್ಷಕ ಹಣಮಂತ ಖೋಡಳ್ಳಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗೀತಾ ಪ್ರೇಮಕುಮಾರ, ಅನೀಲಕುಮಾರ ಗುತ್ತೇದಾರ್​, ಸಂತೋಷ ಕಲಮೂಡ, ಬಸಂತರಾಯ ಪೆದ್ದಿ, ಜಗನ್ನಾಥ ಬಂಡಿ, ಅಶೋಕ ಹೊಸಮನಿ, ಹಣಮಂತ ಮಂತೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ಅಧ್ಯಕ್ಷೆ ಗೀತಾ ಬಣ್ಣನೆ
  • ಸುಂಠಾಣ ಬಡಾ ತಾಂಡಾದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ
ಕಾಳಗಿ: ಶಿಕ್ಷಕ ಹಣಮಂತ ಖೋಡಳ್ಳಿ ಅವರು ಬೋಧನೆ ಜತೆಗೆ ತಾಂಡಾದ ಜನತೆಯ ಸಹಕಾರದೊಂದಿಗೆ ಮಾದರಿ ಶಾಲೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಬಣ್ಣಿಸಿದರು.
ಸುಂಠಾಣ ಬಡಾ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 14 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಪ್ರಭಾರಿ ಮುಖ್ಯಶಿಕ್ಷಕ ಹಣಮಂತ ಖೋಡಳ್ಳಿ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಬೆಳೆಸುವುದರ ಜತೆಗೆ ಉತ್ತಮ ಸಂಸ್ಕಾರ ನೀಡಿದ್ದಾರೆ. ಉತ್ತಮ ಶಿಕ್ಷಕರನ್ನ ಬೇರೆಡೆ ಕಳಿಸಲು ಮನಸ್ಸಿಲ್ಲ, ಆದರೆ ಆದರೆ ಸರ್ಕಾರಿ ಆದೇಶವಾಗಿರುವುದರಿಂದ ಇತರೆ ಶಾಲೆ ಮಕ್ಕಳಿಗೂ ಅವರ ಸೇವೆ ಲಭಿಸಲಿ ಎಂದರು.
ವರ್ಗಗೊಂಡ ಪ್ರಭಾರಿ ಮುಖ್ಯಶಿಕ್ಷಕ ಹಣಮಂತ ಖೋಡಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಂಡಾದ ಜನರು ಮತ್ತು ಹಳೇ ವಿದ್ಯಾರ್ಥಿಗಳು ನನ್ನ ಸೇವೆ ಗುರುತಿಸಿ ಸನ್ಮಾನಿಸಿ ಪ್ರೀತಿ ತೋರಿಸುತ್ತಿರುವುದು ನನ್ನ ಪಾಲಿನ ಶ್ರೇಷ್ಠ ಪ್ರಶಸ್ತಿಯಾಗಿದೆ. ಎಲ್ಲರ ಸಹಕಾರದಿಂದಲೇ ಶಾಲೆ ಅಭಿವೃದ್ಧಿ ಹೊಂದಿದ್ದು, ಮುಂಬರುವ ಶಿಕ್ಷಕರಿಗೂ ನಿಮ್ಮ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯ ಅನೀಲಕುಮಾರ ಗುತ್ತೇದಾರ್​, ಪ್ರಾಥಮಿಕ ಶಾಲಾ ಶಿಕರ ಸಂದ ತಾಲೂಕು ಅಧ್ಯ ಸಂತೋಷ ಕಲಮೂಡ, ಪ್ರಧಾನ ಕಾರ್ಯದರ್ಶಿ ಬಸಂತರಾಯ ಪೆದ್ದಿ, ರಾಜ್ಯ ಸರ್ಕಾರಿ ನೌಕರರ ಸಂದ ಕೋಶಾಧ್ಯ ಜಗನ್ನಾಥ ಬಂಡಿ, ಮುಖ್ಯಗುರು ಅಶೋಕ ಹೊಸಮನಿ, ಹಣಮಂತ ಮಂತೆಟ್ಟಿ, ಪ್ರಮುಖರಾದ ಪಿತಾಂಬರ ಮಡಿವಾಳ, ರಾಮಕೃಷ್ಣ ಮುಚ್ಚಟ್ಟಿ, ರಾಮದಾಸ ರಾಠೋಡ್​, ಹಣಮಂತ ಸಿನ್ನೂರ, ಲ್ಮ ಸಂತೋಷ, ಮಲ್ಲಪ್ಪ ಚಿಂತಕೊಟಿ, ಪ್ರೇಮ ಯಲಮಡಗಿ, ಸಂಜುಕುಮಾರ ಕೋಡ್ಲಿ, ರಮೇಶ ನಲಾವಡೆ, ಗಂಗಾಧರ ಯೋಗಿ, ಶಾಂತಕುಮಾರ ಎಕಮಾಯಿ, ಧರ್ಮಣ್ಣ ನಾವದಗಿ, ಸಂಜುಕುಮಾರ ರಾಠೋಡ್​, ಪಾಂಡು ನಾಯಕ, ತಾರಚಂದ ಕಾರಬಾರಿ, ಗೋಪಾಲ ದೇವ, ಸಂಜುಕುಮಾರ ಇತರರಿದ್ದರು.
ಶಿಕ ನಾಗರಾಜ ಮಡಿವಾಳ ಗೋಟೂರ ನಿರೂಪಣೆ ಮಾಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net