* 25 ಸಾವಿರ ಸಸಿಗಳ ನೆಟ್ಟ ಶ್ರೀಕೃಷ್ಣ ಹಳ್ಳಿಕಾರ್ ಮಹಾಸಂಸ್ಥಾನ ಟ್ರಸ್ಟ್
ಬೆಂಗಳೂರು:ಕೆಂಪೇಗೌಡರ ದೂರದೃಷ್ಟಿಯ ಹಸಿರು ಬೆಂಗಳೂರನ್ನು ಸುಂದರ ಸ್ವಚ್ಛ, ಜಲಮೂಲಗಳ ನಾಡನ್ನಾಗಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೀಲಿದೆ ಎಂದು ಶ್ರೀಕೃಷ್ಣ ಹಳ್ಳಿಕಾರ್ ಮಹಾಸಂಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ. ನಾಗರಾಜ್ ಹೇಳಿದ್ದಾರೆ.
ಬೆಟ್ಟನಪಾಳ್ಯ ಬಳಿಯ ಶ್ರೀಕೃಷ್ಣ ದೇವಸ್ಥಾನದ ನಾಲ್ಕು ಎಕರೆ ಪ್ರದೇಶದಲ್ಲಿ 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಂಪೇಗೌಡರ ಕೆಂಪೇಗೌಡರ ಜೀವನಾದರ್ಶಗಳು ಅನುಕರಣೀಯವಾಗಿವೆ. ಜಾತಿ- ಧರ್ಮ ಮೀರಿ ಸರ್ವ ಜನಾಂಗದ ಏಳಿಗೆ, ಅಭಿವೃದ್ಧಿಗೆ ಅವರು ಶ್ರಮಿಸಿದವರು. ಎಲ್ಲರಿಗೂ ಅನ್ನ, ಉದ್ಯೋಗ ನೀಡಿದ್ದು ಮಾತ್ರವಲ್ಲದೆ ಸಾಂಸ್ಕೃತಿಕ, ಧಾರ್ಮಿಕ ಎಲ್ಲ ವಲಯಕ್ಕೂ ಆದ್ಯತೆ ನೀಡಿದ್ದರು. ಅವರ ಕಾಲದ ವೈಭವ ಮತ್ತೆ ಮರುಕಳಿಸುವಂತೆ ನಾವೆಲ್ಲರೂ ಶ್ರಮಿಸೋಣ ಎಂದರು.
ಮೊಬೈಲ್ ಗೀಳಿಗೆ ಒಳಗಾಗುತ್ತಿರುವ ಯುವಜನರು ಅದರಿಂದ ಹೊರಬಂದು, ಪರಿಸರ ಜಲಮೂಲ, ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು- ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಟ್ರಸ್ಟ್‌ನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಖಜಾಂಚಿ ಎಂ. ಮಾರುತಿ, ಪಾಲಿಕೆ ಮಾಜಿ ಸದಸ್ಯ ಸಿ. ದಾಸೇಗೌಡ, ಧರ್ಮದರ್ಶಿಗಳಾದ ಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ಜಿ.ಕೆ. ವೆಂಕಟೇಶ್, ರವಿಕುಮಾರ್, ಸೋಮಶೇಖರ್, ರಾಜಣ್ಣ ನರಸಿಂಹಮೂರ್ತಿ, ಜಿ. ನಾಗರಾಜ್, ಹುಚ್ಚಣ್ಣ ಇತರರಿದ್ದರು.