ಈ ಕುರಿತು ಸೋಮವಾರ ಮಾಹಿತಿ ನೀಡಿದ ಅವರು, ಮಂಗಳವಾರ ರಾತ್ರಿ ಪಟ್ಟಣಕ್ಕೆ ಆಗಮಿಸುವ ಶ್ರೀಗಳನ್ನು ಪೂರ್ಣ ಕುಂಭ, ವೇದ ಘೋಷದೊಂದಿಗೆ ಸ್ವಾಗತಿಸಲಾಗುವುದು. ಬುಧವಾರ ಶ್ರೀಗಳ 31ನೇ ಪೀಠಾರೋಹಣ ಮಹೋತ್ಸವದ ನಿಮಿತ್ತ ಶ್ರೀ ಸತ್ಯನಾರಾಯಣ, ಸುಮಧ್ವ ಮಾರುತಿ ಹಾಗೂ ಯತಿ ಚತುಷ್ಠಯರಿಗೆ ಶ್ರೀಗಳು ವಿಶೇಷ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಿದ್ದಾರೆ. ನಂತರ ಹಲವು ಸಮುದ್ರಗಳಿಂದ ಮತ್ತು ನದಿಗಳಿಂದ ಸಂಗ್ರಹಿಸಿ ತಂದಿರುವ 31 ತೀರ್ಥಗಳ ಪವಿತ್ರ ಜಲದಿಂದ ಹಲವು ಪಂಡಿತರು ಶ್ರೀಗಳಿಗೆ ಅಭಿಷೇಕ ಮಾಡಲಿದ್ದಾರೆ. 9ಕ್ಕೆ ತಪ್ತ ಮುದ್ರಾಧಾರಣೆ, ಮೂಲರಾಮ ದಿಗ್ವಿಜಯ ರಾಮದೇವರ ಸಂಸ್ಥಾನ ಪೂಜೆ, ಫಲಮಂತ್ರಾಕ್ಷತೆ ಸೇರಿ ಹಲವು ಕಾರ್ಯಕ್ರಮ ಜರುಗಲಿವೆ.