ಮಾನವ ಕುಲ ವಿನಾಶದ ಹಂತಕ್ಕೆ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀವಿಜಯನ ವಿವೇಕ ನಮಗೆ ಅಗತ್ಯವಾಗಿದೆ. ಯಾವುದೇ ಒಂದು ರಾಜ್ಯ ನಾಡಾಗಲು ಕವಿಗಳು ಮತ್ತು ರಾಜರು ಸೇರಬೇಕು ಕಲೆಗಳೂ ಇರಬೇಕು. ಶ್ರೀವಿಜಯ ತನ್ನ ಕಾಲದ ಜನ ಸಾಮಾನ್ಯರ ಅಭಿರುಚಿ ಬಗ್ಗೆ ಹೇಳುತ್ತಾ, ನನ್ನ ಕನ್ನಡ ನಾಡಿನ ಜನ ಓದಲು ಬರೆಯಲು ಬಾರದಿದ್ದರೂ ಒಂದು ಕಾವ್ಯವನ್ನು ಕೇಳಿ ಅದು ಉತ್ತಮವೋ, ಅಲ್ಲವೋ ಎಂದು ನಿರ್ಧರಿಸಬಲ್ಲ ವಿವೇಕಶಾಲಿಗಳು. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತರು‘ ಅಂತಹ ತಾಕತ್ತು ಕನ್ನಡ ಜನರಿಗೆ ಇತ್ತೆಂದು ತಿಳಿಸಿದ್ದಾನೆ ಎಂದು ವಿವರಿಸಿದರು.