ಕಸಾಪಸಂಸ್ಥಾಪನಾ ದಿನ ಆಚರಣೆ

ಶಹಾಪುರದಲ್ಲಿ ಬುಧವಾರ ಹಮ್ಮಿಕೊಂಡ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ, ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಸಿದ್ದರಾಮ ಹೊನಕಲ್​, ಶಿವಣ್ಣ ಇಜೇರಿ, ಪ್ರಕಾಶ ದೊರೆ ಇತರರಿದ್ದರು.
ಶಹಾಪುರದಲ್ಲಿ ಬುಧವಾರ ಹಮ್ಮಿಕೊಂಡ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ, ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಸಿದ್ದರಾಮ ಹೊನಕಲ್​, ಶಿವಣ್ಣ ಇಜೇರಿ, ಪ್ರಕಾಶ ದೊರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಕಟಪೂರ್ವ ಅಧ್ಯಕ್ಷ ಆನೆಗುಂದಿ ಹೇಳಿಕೆ
  • ಶಹಾಪುರದಲ್ಲಿ ಕಸಾಪಸಂಸ್ಥಾಪನಾ ದಿನ ಆಚರಣೆ
ಶಹಾಪುರ:ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿಗಳು ಕನ್ನಡ ಭಾಷೆ ಉಳಿವಿಗೆ ಕೈಗೊಂಡ ದಿಟ್ಟತನದ ಕಾರ್ಯಗಳು ಹಾಗೂ ವಿವಿಧ ಸಾಂಸತಿಕ ಚಟುವಟಿಕೆಗಳ ಮೂಲಕ ಕಸಾಪ ಕನ್ನಡದ ವೈಭವವನ್ನು ಹರಡುತ್ತಿದೆ ಎಂದು ತಾಲೂಕು ಕಸಾಪ ನಿಕಟಪೂರ್ವ ಅಧ್ಯ ಸಿದ್ದಲಿಂಗಣ್ಣ ಆನೆಗುಂದಿ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್​ನ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಜಾಗತೀಕರಣದ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಯುವ ಜನತೆಗೆ ಕನ್ನಡದ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಕಸಾಪ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಸಂತಸದ ವಿಷಯ. ಬಹುತೇಕ ಕನ್ನಡ ಅಭಿಮಾನಿಗಳು, ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಶಾಲೆಗಳಿಗೆ ಕಳುಹಿಸದೇ ಇಂಗ್ಲಿಷ್​ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾದರೆ ಕನ್ನಡ ಉಳಿಯಲು ಹೇಗೆ ಸಾಧ್ಯ. ಆದ್ದರಿಂದ ಮೊದಲು ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಲು ಮುಂದಾಗೋಣ. ಅಂದಾಗ ಮಾತ್ರ ಕನ್ನಡ ಭಾಷೆ, ಶಾಲೆಗಳು ಉಳಿಯಲು ಸಾಧ್ಯ ಎಂದರು.
ಕಸಾಪ ಅಧ್ಯ ಡಾ.ರವೀಂದ್ರನಾಥ ಹೊಸಮನಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ನ ಉಗಮ, ಬೆಳವಣಿಗೆ ಮತ್ತು ಇದರ ಪ್ರಮುಖರನ್ನು ನೆನಪಿಸಿದರು. ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನಕಲ್​, ಶಿವಣ್ಣ ಇಜೇರಿ, ಸಣ್ಣನಿಂಗಣ್ಣ ನಾಯ್ಕೊಡಿ, ದೇವೆಂದ್ರಪ್ಪ ವಿಶ್ವಕರ್ಮ, ರಂಗನಾಥ ದೊರೆ, ಶಂಕರ ಹುಲಕಲ್​, ನಿಂಗಣ್ಣ ತಿಪ್ಪನಟಗಿ ಹಾಗೂ ಪತ್ರಕರ್ತ ಪ್ರಕಾಶ ದೊರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net