ಹೆಂಡ್ತಿ ಸೀರೆ ಉಡ್ತಿಲ್ಲ, ನೈಟಿ ಹಾಕ್ತಿದ್ದಾಳೆ ಎಂದು ಬೆಂಕಿ ಹಚ್ಚಿದ ಸೈಕೋ ಗಂಡ; ಜೀವನ್ಮರಣ ಹೋರಾಟದಲ್ಲಿರುವ ಮಹಿಳೆ..Belagavi
Belagavi Man Burns Wife
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಳಗಾವಿಯಲ್ಲಿ ನೈಟಿ ಹಾಕಿದ್ದಕ್ಕೆ ಹೆಂಡತಿಗೆ ಬೆಂಕಿ ಇಟ್ಟ ಭೂಪ!
ಬೆಳಗಾವಿ ಜಿಲ್ಲೆಯ ಖಾನಾಪೂರ ನಂದಗಡದಲ್ಲಿ ಘಟನೆ
ಕೃಷ್ಣಾಜಿ ಪಾಟೀಲ ಎಂಬಾತನೇ ಪತ್ನಿ ಮಂಜುಳಾ ಪಾಟೀಲಗೆ ಬೆಂಕಿ ಹಚ್ಚಿದ ಭೂಪ
ನಂದಗಡ: ಮನೆಯಲ್ಲಿದ್ದಾಗ ನೈಟ್ ಡ್ರೆಸ್ ಹಾಕಿಕೊಳ್ಳುತ್ತಿದ್ದಳು ಎಂದು ಆಕ್ಷೇಪ ವ್ಯಕ್ತಪಡಿಸಿ, ನಿತ್ಯವೂ ನಡೆಯುತ್ತಿದ್ದ ಜಗಳವು ದಾರುಣ ಅಂತ್ಯಕಂಡಿದೆ. ಹೌದು ಬೆಳಗಾವಿಯ(Belagavi) ಖಾನಪುರ ತಾಲೂಕಿನ ನಂದಗಡ ಗ್ರಾಮದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಸುಟ್ಟು ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯನ್ನು 34 ಬರ್ಷದ ಕೃಷ್ಣಾಜಿ ಪಾಟೀಲ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ 32 ವರ್ಷದ ಮಂಜುಳ ಪಾಟೀಲ್ ಎನ್ನಲಾಗಿದೆ. ಈ ಘಟನೆಯು ಮಂಗಳವಾರ ತಡರಾತ್ರಿ ನಡೆದಿದ್ದು, ಪೊಲೀಸರ ಗಮನಕ್ಕೆ ತಡವಾಗಿ ಬೆಳಕಿಗೆ ಬಂದಿದೆ.
ನೈಟಿ ಧರಿಸುವುದಕ್ಕೆ ಆಕ್ಷೇಪ
ಸಾಮಾನ್ಯವಾಗಿ ಪತಿ -ಪತ್ನಿ ನಡುವೆ ಅಕ್ರಮ ಸಂಬಂಧ, ಹಣದ ವಿಚಾರ, ಮಕ್ಕಳ ವಿಚಾರಕ್ಕೆ ಕಿತ್ತಾಟ ಇರುತ್ತದೆ. ಆದರೆ, ಈ ಕಿರಾತಕ ಮಾತ್ರ ತನ್ನ ಪತ್ನಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದದ್ದು ಮಾತ್ರ ನೈಟ್ ಡ್ರೆಸ್ ಧರಿಸುತ್ತಿದ್ದದ್ದಕ್ಕೆ.
ಮಂಜುಳ ಮತ್ತು ಕೃಷ್ಣ ಎಂಟು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಕೆ ನಿತ್ಯ ಸೀರೆ ಉಡದೆ ನೈಟಿ ಅಥವಾ ಗೌನ್ ಧರಿಸುತ್ತಿದ್ದಳು ಎನ್ನುವ ವಿಚಾರಕ್ಕೆ ಸೈಕೋ ಗಂಡ ಕಿತ್ತಾಡುತ್ತಿದ್ದ. ಇದೇ ವಿಚಾರವಾಗಿ ಮಂಗಳವಾರ ರಾತ್ರಿಯೂ ಕಿತ್ತಾಟ ಶುರುವಾಗಿದೆ.
ಶೇ.80ರಷ್ಟು ಸುಟ್ಟ ಗಾಯ
ಮಂಜುಳ ಮತ್ತು ಕೃಷ್ಣ ನಡುವೆ ವಾದ ವಿವಾದಕ್ಕೆ ತಿರುಗಿ ಬೆಂಕಿ ಹಚ್ಚಿಕೊಂದಿದ್ದಾನೆ ಎಂದು ಹೇಳಲಾಗಿದೆ. ಘಟನೆಯಿಂದ ಮಂಜುಳಾಗೆ ಶೇ.80ರಷ್ಟು ಗಾಯಗಳಾಗಿದ್ದವು. ವಿಷಯ ತಿಳಿದ ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗಗೆ ದಾಖಲಿಸಿದ್ದರು. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ನಂದಗಡ ಪೊಲೀಸ್ ಠಾಣೆಯ ಪೊಲೀಸರಿಗೆ ಸ್ಥಳೀಯರು ಗಲಾಟೆ ನಡೆಯುತ್ತಿದ್ದ ಬಗ್ಗೆ ದೂರು ಕೊಟ್ಟಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯ ಕುಟುಂಬಸ್ಥರು ಗೋವಾಕ್ಕೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ.
ವೆಸ್ಟರ್ನ್ ಸ್ಟೈಲ್ನಲ್ಲಿ ಪ್ರಪೋಸ್ ಆಮಿಷವೊಡ್ಡಿ ಕೊಲೆ
ಬೆಂಗಳೂರಿನಲ್ಲಿ ಪ್ರಿಯತಮೆಯೊಬ್ಬಳು ತನ್ನ ಪ್ರೇಮಿಗೆ ವಿದೇಶಿ ಮಾದರಿ ಪ್ರೇಮವನ್ನು ನಿವೇದಿಸುತ್ತೇನೆ ಎಂದು ಕರೆದೊಯ್ದು ಆತನನ್ನು ಸುಟ್ಟು ಕೊಂದ ಘಟನೆ ಬೆಳಕಿಗೆ ಬಂದಿತ್ತು. ಮೃತ ಕಿರಣ್ ಅನ್ನು ಕೊಂದ ಆರೋಪಿ ಪ್ರೇರಣಾರನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ. ಫಾರಿನ್ ಸ್ಟೈಲ್ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಮಂಚಕ್ಕೆ ಆತನನ್ನು ಕಟ್ಟಿಹಾಕಿ ನಂಬಿಸಿ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ, (ಏಜೆನ್ಸೀಸ್).