ಇದು ಬರೀ ಪಾರ್ಸೆಲ್ ಅಲ್ಲ ಪ್ರೀತಿಯ ಹೊರೆ; ​ರ‍್ಯಾಪಿಡೋ ಚಾಲಕನಿಗೆ ಡೆಲಿವರಿ ಮಾಡಲು ಸಿಕ್ಕ ಪುಟ್ಟ ಅತಿಥಿಯ ವಿಡಿಯೋ ವೈರಲ್​..Dog Parcel

Rapido dog delivery video
Rapido dog delivery video
Published on

ಪ್ರಮುಖ ಮುಖ್ಯಾಂಶಗಳು

  • ನಾಯಿಯನ್ನು ಡೆಲಿವರಿ ಮಾಡಿದ ರ‍್ಯಾಪಿಡೋ ಚಾಲಕ
  • ಶಾಂತ ಮೂರ್ತಿಯಂತೆ ಪ್ರಯಾಣ ಅನುಭವಿಸಿದ ನಾಯಿಕಂಡು ನೆಟ್ಟಿಗರು ಫಿದಾ
  • ನಾಯಿಯನ್ನು ಪಾರ್ಸೆಲ್​ ಮಾಡುವುದು ಎಷ್ಟು ಸರಿ ಎಂದು ಕೆಲವರಿಂದ ಸಾಕಷ್ಟು ಆಕ್ರೋಶ
Rapido dog delivery: ಈ ಹಿಂದೆ ಅಂಚೆ ಮುಖೇನ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ಪಾರ್ಸೆಲ್​ ಮಾಡಲಾಗುತ್ತಿತ್ತು. ಕಾಲಾನಂತರದಲ್ಲಿ ಸ್ಪೀಡ್​ ಪೋಸ್ಟ್​ ಕೊರಿಯರ್​​ ಸಹ ಬಂತು. ಆದರೆ. ಆನ್​ಲೈನ್​ ಡೆಲಿವರಿ ಆ್ಯಪ್‌ಗಳು ಬಂದಂತೆ ಬೆಂಗಳೂರಿನಲ್ಲೇ ಇರುವವರಿಗೆ ಪಾರ್ಸೆಲ್​ ಕಳುಹಿಸಲು ರ‍್ಯಾಪಿಡೋ, ಉಬರ್ ಸೇರಿದಂತೆ ಬಹಳಷ್ಟು ಆ್ಯಪ್‌ಗಳನ್ನು ಬಳಕೆ ಮಾಡುತ್ತಿದ್ದೇವೆ. ವಿಷಯ ಅದಲ್ಲ.
ಸಾಮಾನ್ಯವಾಗಿ ಏನಾದರೂ ಪಾರ್ಸೆಲ್ ಮಾಡುವಾಗ ಮನೆಯಲ್ಲೇ ಮರೆತ ಚಾರ್ಚರ್​ ಅನ್ನೋ, ಲ್ಯಾಪ್ಟಾಪ್, ಆಹಾರ, ಗಿಫ್ಟ್​ ಹೀಗೆ ಕೆಲವೊಂದು ವಸ್ತುಗಳನ್ನು ಪಾರ್ಸೆಲ್ ಡೆಲಿವರಿ ಆ್ಯಪ್‌ ಬಳಕೆ ಮಾಡಿಕೊಳ್ಳುತ್ತೇವೆ. ಆದರೆ, ವಿಚಿತ್ರ ಎಂದರೆ, ಇಲ್ಲೊಬ್ಬ ಗಿಗ್​ ಕಾರ್ಮಿಕ ನಾಯಿಯನ್ನು ತನ್ನ ಗ್ರಾಹಕರಿಕರಿಗೆ ತಲುಪಿಸಿದ ಬಗ್ಗೆ ಮಾತನಾಡಿದ್ದಾರೆ.
ಹುಸೇನ್​ ಅನ್ಸಾರಿಯವರು ಲ್ಯಾಬ್ರಡಾರ್ ನಾಯಿಯನ್ನು ಡೆಲಿವರಿ ಮಾಡಿದ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೂರು ಲಕ್ಷದ ನಲವತ್ತೇಳು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು, ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಯುವಕ ತನ್ನ ಮುಂದೆ ನಾಯಿಯನ್ನು ಕುಳ್ಳಿರಿಸಿ ಕೊಂಡಿದ್ದಾನೆ. ಶಾಂತಮೂರ್ತಿಯಂತೆ ಕೂತು ಲ್ಯಾಬ್ರಡಾರ್ ನಾಯಿ ಅವರೊಂದಿಗೆ ಪ್ರಯಾಣಿಸಿದೆ. ತಾಜಾ ಗಾಳಿ ಸುತ್ತಮುತ್ತಲಿನ ಪ್ರದೇಶ ನೋಡುತ್ತಾ, ಬೊಗಳದೆ ಸಲೀಸಾಗಿ ಪ್ರಯಾಣ ಮಾಡಿದೆ. ಇಂತಹ ಪ್ರಯಾಣ ಎಲ್ಲವೂ ದೇಹದಲ್ಲಿ ಒಳ್ಳೆಯ, ಪಾಸಿಟಿವ್​ ಹಾರ್ಮೋನ್​ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ನನಗೆ ನಿಜಕ್ಕೂ ಸಂತೋಷವಾಯ್ತು ಎಂದು ಅವರು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರು ಏನಂದ್ರು?

ಇದು ಸರಿಯಾದ ನಡೆ ಅಲ್ಲ. ಪಾರ್ಸೆಲ್​ ಅಂದ ಕೂಡಲೇ ಏನನ್ನು ಬೇಕಾದರೂ ಕಳುಹಿಸಬಹುದಾ? ನಾಯಿಯನ್ನು ಡೆಲಿವರಿ ಮಾಡುವ ಈ ಪಾರ್ಸೆಲ್ ಅನ್ನು ಏನನ್ನುತ್ತಾರೆ. ಇದೇನೋ ಕಚ್ಚದೆ ಸುಮ್ಮನಿದೆ. ಅಕಸ್ಮಾತ್​ ಆತನಿಗೆ ಸಮಸ್ಯೆ ಮಾಡಿದ್ದರೆ ಏನು ಗತಿ ಎಂದು ಒಬ್ಬರು ಕಿಡಿಕಾರಿದ್ದಾರೆ. ಇನ್ನು ಕೆಲವರು ಇದೊಂದು ಕ್ಯೂಟ್​ ಪ್ರಸಂಗ್​ ಎಂದು ಪ್ರೀತಿಯ ಸಂಕೇತ ಹಾರ್ಟ್​ ಅನ್ನು ಕೊಟ್ಟಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net