ತಮ್ಮ ಅಧ್ಯತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆ ಆರು ತಾಲೂಕುಗಳ ಕಸಾಪ ಅಧ್ಯರುಗಳು ಭಾಗವಹಿಲಿದ್ದಾರೆ. ಕನ್ನಡ ಮಾಧ್ಯಮದ 27 ಹಾಗೂ ಆಂಗ್ಲ ಮತ್ತು ಉರ್ದು ಮಾಧ್ಯಮದ 186 ಮಕ್ಕಳು ಸೇರಿ ಒಟ್ಟು 213 ವಿದ್ಯಾರ್ಥಿಗಳಿಗೆ ಅಂದು ಕನ್ನಡ ವಿದ್ಯಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂದಿನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೇ ಬಂದು ಗೌರವ ಸ್ವೀಕರಿಸಬೇಕು, ಬೇರೆ, ಬೇರೆ ಕಡೆ ಕಾಲೇಜುಗಳಿಗಾಗಿ ಊರಲ್ಲಿ ಇರದೇ ಇದ್ದರೇ ಅವರ ಪಾಲಕರು ಕಡ್ಡಾಯವಾಗಿ ಬಂದು ಕಸಾಪದ ಈ ಗೌರವ ಸ್ವೀಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಕಸಾಪದ ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳಾದ ಡಾ.ಲಿಂಗೇರಿ, ಡಾ.ಸುಭಾಷಚಂದ್ರ ಕೌಲಗಿ, ಆರ್.ಮಹಾದೇವಪ್ಪ ಅಬ್ಬೆತುಮಕೂರು, ಡಾ.ಎಸ್.ಎಸ್.ನಾಯಕ್, ನೂರಂದಪ್ಪ ಲೇವಡಿ, ಬಸವಂತರಾಯ ಮಾಲಿ ಪಾಟೀಲ್, ನಾಗಪ್ಪ ಸಜ್ಜನ್, ಚನ್ನಪ್ಪ ಠಾಣಾಗುಂದಿ ಇತರರಿದ್ದರು.