ಇಂಗ್ಲೆಂಡ್​ ಪ್ರವಾಸಕ್ಕೆ ಕಲ್ಯಾಣ ಪ್ರತಿಭೆಗಳು

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್​ ಶುಭ ಹಾರೈಸಿದರು.
ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್​ ಶುಭ ಹಾರೈಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೀದರ್​ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳ ಆಯ್ಕೆ
  • ಇವರಲ್ಲಿ ಮೂವರು ಎಸ್​ಎಸ್​ಕೆಬಿ ಕಾಲೇಜಿನವರು
ಬಸವಕಲ್ಯಾಣ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿ ನಗರದ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕುರಿತು ತುಲಾನಾತಕ್ಮ ಅಧ್ಯಯನಕ್ಕಾಗಿ ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕರ್ನಾಟಕ ಸರ್ಕಾರ ಮತ್ತು ಯುಕೆ (ಇಂಗ್ಲೆಂಡ್​) ಪ್ರತಿಷ್ಠಿತ ವೆಲ್ಫೋರ್ಟನ್​ ವಿಶ್ವವಿದ್ಯಾಲಯದ ಪ್ರಾಯೋಜಕತ್ವದ ಜಂಟಿ ಸ್ಕೌಟ್​ ಕಾರ್ಯಕ್ರಮದಡಿ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರವಾಸಕ್ಕೆ ಬೀದರ್​ ವಿಶ್ವವಿದ್ಯಾಲಯದಿಂದ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಎಸ್​ಎಸ್​ಕೆಬಿ ಕಾಲೇಜಿನ ಸ್ವಾತಿ ದತ್ತಾತ್ರೇಯ ಬಟಗೇರಾ, ಜಕೀಯಾ ಬೇಗಂ ಅನ್ಸರ್​ ಅಲಿ ಚಿತ್ತಕೊಟ್ಟಾ(ಕೆ) ಮತ್ತು ಶಿವಲಿಂಗಪ್ಪ ಅಂಬಾರಾಯ ಎಕಲೂರ ಸೇರಿದ್ದಾರೆ.
ಶೈಕ್ಷಣಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಕಾಲೇಜಿನ ಮೂವರು ಅಸಾಧಾರಣ ಶೈಕ್ಷಣಿಕ ಸಾಧನೆ, ನಾಯಕತ್ವ ಗುಣ ಹಾಗೂ ನಾನಾ ಸ್ಪರ್ಧೆಗಳಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನ ಪರಿಗಣಿಸಿ ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಜೂ.27ರಂದು ಪ್ರಯಾಣ ಬೆಳಸಲಿದ್ದಾರೆ.
ವಿದೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಬೆಂಗಳೂರಿನಲ್ಲಿ ಸನ್ಮಾನಿಸಿ ಪ್ರವಾಸಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ಕಾಲೇಜು ಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net