ನ.2ರಂದು ಕೆಸೆಟ್ ಲಿಖಿತ ಪರೀಕ್ಷೆ ನಡೆಸಿ ನ.15ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ನ.29ರಿಂದ ದಾಖಲೆ ಪರಿಶೀಲಿಸಿ, ಪ್ರಮಾಣ ಪತ್ರ ವಿತರಿಸುವ ಕೆಲಸಕ್ಕೂ ಚಾಲನೆ
ತ್ಯಾಜ್ಯ ವಿಲೇವಾರಿ ಘಟಕದ ಬಳಿಯೂ ಸಮಯ ಸಿಕ್ಕಾಗ ಓದುತ್ತಿದ್ದೆ. ಅದು ನನ್ನ ಕೈಹಿಡಿಯಿತು. ಕಷ್ಟಗಳೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಒಟ್ಟಿನಲ್ಲಿ ನನ್ನಾಸೆ ಈಡೇರಿದೆ ಎಂದು ಅರವಿಂದ
ಕೆಇಎ ನಡೆಸಿದ ಪರೀಕ್ಷೆಯಿಂದಲೇ ಕಂಡಕ್ಟರ್ ಉದ್ಯೋಗ ಸಿಕ್ಕಿತು. ಈಗ ಕೆ-ಸೆಟ್ ಆಗಿದೆ. ಮುಂದೊಂದು ದಿನ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಉತ್ತೀರ್ಣರಾಗುವ ವಿಶ್ವಾಸವಿದೆ ಎಂದು ಜಯಮ್ಮ
ಬೆಂಗಳೂರು: ಬಿಎಂಟಿಸಿ ಕಂಡಕ್ಟರ್ ಜಯಮ್ಮ ಹಾಗೂ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾರ್ಷಲ್ ಆಗಿ ಕಾರ್ಯನಿರ್ವಹಿಸುವ ಅರವಿಂದ ಈ ಬಾರಿಯ ಕೆ-ಸೆಟ್ ಅರ್ಹತೆ ಪಡೆದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಕೆಇಎ ಕಚೇರಿಯ ನವೀಕೃತ ಸಭಾಂಗಣದಲ್ಲಿ ಶನಿವಾರ ಅರ್ಹ ಅಭ್ಯರ್ಥಿಗಳಿಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಿದರು.
ಕೆಇಎ ನಡೆಸಿದ ಪರೀಕ್ಷೆಯಿಂದಲೇ ಕಂಡಕ್ಟರ್ ಉದ್ಯೋಗ ಸಿಕ್ಕಿತು. ಈಗ ಕೆ-ಸೆಟ್ ಆಗಿದೆ. ಮುಂದೊಂದು ದಿನ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಉತ್ತೀರ್ಣರಾಗುವ ವಿಶ್ವಾಸವಿದೆ ಎಂದು ಜಯಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ತ್ಯಾಜ್ಯ ವಿಲೇವಾರಿ ಘಟಕದ ಬಳಿಯೂ ಸಮಯ ಸಿಕ್ಕಾಗ ಓದುತ್ತಿದ್ದೆ. ಅದು ನನ್ನ ಕೈಹಿಡಿಯಿತು. ಕಷ್ಟಗಳೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಒಟ್ಟಿನಲ್ಲಿ ನನ್ನಾಸೆ ಈಡೇರಿದೆ ಎಂದು ಅರವಿಂದ ಹರ್ಷ ವ್ಯಕ್ತಪಡಿಸುತ್ತಾರೆ.
ನ.2ರಂದು ಕೆಸೆಟ್ ಲಿಖಿತ ಪರೀಕ್ಷೆ ನಡೆಸಿ ನ.15ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ನ.29ರಿಂದ ದಾಖಲೆ ಪರಿಶೀಲಿಸಿ, ಪ್ರಮಾಣ ಪತ್ರ ವಿತರಿಸುವ ಕೆಲಸಕ್ಕೂ ಚಾಲನೆ ನೀಡಿತು.
ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಕೆ-ಸೆಟ್ ಅಧ್ಯಕ್ಷ ಪ್ರೊ ಬಿ. ತಿಮ್ಮೇಗೌಡ ಅವರೂ ಈ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಕೋರಿದರು.