ಬೈಲಹೊಂಗಲ: ನ್ಯಾಯಕ್ಕಾಗಿ ನ್ಯಾಯಾಲಯದ ಬಾಗಿಲುತಟ್ಟುವ ಜನರಿಗೆ ನ್ಯಾಯ ಒದಗಿಸುವ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು.
ನಗರದ ನ್ಯಾಯಾಲಯದಲ್ಲಿ ವಕೀಲರ ಸಂ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಹಿಂದುಳಿದ, ಬಡವರು ಮತ್ತು ಹಕ್ಕುಚ್ಯುತಿಗೊಂಡವರಿಗೆ ನ್ಯಾಯ ಸಿಗುವ ಸೇತುವೆಯಾಗಿ ನಿಲ್ಲಬೇಕು ಎಂದರು.
ಪ್ರಧಾನ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು. ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ಸಂಕ್ಕೆ ನೂತನವಾಗಿ ಸೇರ್ಪಡೆಯಾದ ಸದಸ್ಯರನ್ನು ಸ್ವಾಗತಿಸಲಾಯಿತು. ಹಿರಿಯ ವಕೀಲ ಝಡ್.ಎ.ಗೋಕಾಕ ಉಪನ್ಯಾಸ ನೀಡಿದರು.
ಸಂದ ಅಧ್ಯ ಎಂ.ಆರ್.ಮೆಳವಂಕಿ ಅಧ್ಯತೆ ವಹಿಸಿದ್ದರು. ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ, ಹಿರಿಯ ವಕೀಲರಾದ ಬಿ.ಎಸ್.ಕಿವಡಸಣ್ಣವರ ಹಾಗೂ ಎಂ.ವೈ.ಸೋಮನ್ನವರ, ಎ.ಎಂ.ಸಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ.ಜಿ.ಕಟದಾಳ ಇತರರಿದ್ದರು. ವಕೀಲೆ ಲಕ್ಷಿ$್ಮ ಬಾವಿಹಾಳ ನಿರ್ವಹಿಸಿದರು.