ಸಂವಿಧಾನದಿಂದ ಸರ್ವರಿಗೂ ನ್ಯಾಯ

ರಾಮದುರ್ಗ ನಗರದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಚಿತ್ರನಟ ಚೇತನ ಅಹಿಂಸಾ ಅವರನ್ನು ಸನ್ಮಾನಿಸಲಾಯಿತು. ಮಲ್ಲಣ್ಣ ಯಾದವಾಡ, ಸುಭಾಷ ಗೋಡಕೆ,  ಜಹೂರ್​ ಹಾಜಿ ಇತರರು ಇದ್ದರು.
ರಾಮದುರ್ಗ ನಗರದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಚಿತ್ರನಟ ಚೇತನ ಅಹಿಂಸಾ ಅವರನ್ನು ಸನ್ಮಾನಿಸಲಾಯಿತು. ಮಲ್ಲಣ್ಣ ಯಾದವಾಡ, ಸುಭಾಷ ಗೋಡಕೆ, ಜಹೂರ್​ ಹಾಜಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ಇಡೀ ವಿಶ್ವ ಮೆಚ್ಚುವಂತೆ ಚಾರಿತ್ರಿಕ ಸಂವಿಧಾನ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಅಂಬೇಡ್ಕರ್​ ನಮೂದಿಸಿದ ಸಂವಿಧಾನಿಕ ಅಂಶಗಳು ಸರ್ವ ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟಿವೆ ಎಂದು ಡಿಸಿಸಿ ಬ್ಯಾಂಕ್​ ನಿರ್ದೇಶಕ ಮಲ್ಲಣ್ಣ ಯಾದವಾಡ ಹೇಳಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ ಸಿಗುವಲ್ಲಿ ಗಾಂಧೀಜಿ ಪಾತ್ರದಂತೆ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್​ ಅವರ ಪಾತ್ರ ಸ್ಮರಣೀಯ ಎಂದರು.
ಚಿತ್ರನಟ ಚೇತನ ಅಹಿಂಸಾ ಮಾತನಾಡಿ, ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಿ, ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್​ ಅವಿರತ ಹೋರಾಟ ಮಾಡಿದ್ದಾರೆ. ನಮಗಾಗಿರುವ ಅನ್ಯಾಯ ತಡೆದು, ನಮ್ಮ ಭವಿಷ್ಯದ ಪೀಳಿಗೆಗೆ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಂಟಿತರಾಗಿ, ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಿದೆ ಎಂದರು.
ಜನಪರ ಟ್ರಸ್ಟ್​ ಅಧ್ಯ ಸುಭಾಸ ಗೋಡಕೆ ಅಧ್ಯತೆ ವಹಿಸಿದ್ದರು. ಉತ್ತಮ ಶಿಕರನ್ನು ಗೌರವಿಸಿ, ಬಡ ಮಕ್ಕಳಿಗೆ ಉಚಿತ ಬುಕ್​, ಪೆನ್​ ವಿತರಿಸಲಾಯಿತು.
ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್​ನಿಂದ ಹೊರಟ ವಿವಿಧ ದಲಿತ ಸಂಟನೆ ಸೇರಿದಂತೆ ಹಿಂದುಗಳಿದ ವರ್ಗಗಳ ಮುಖಂಡರು ಹಾಗೂ ಕಾರ್ಯಕರ್ತರ ಬೆಕ್​ ರ್ಯಾಲಿ ಮುಖ್ಯ ವೇದಿಕೆಗೆ ಆಗಮಿಸಿ, ಸಮಾವೇಶಗೊಂಡಿತು.
ಜಿಪಂ ಮಾಜಿ ಸದಸ್ಯ ಜಹೂರ್​ ಹಾಜಿ, ಆನಂದ ಕುಲಕರ್ಣಿ, ಕೆಎಂಯು ಅಧ್ಯ ಮೊಮ್ಮದ್​ಶಫಿ ಬೆಣ್ಣಿ, ಗಂಗಾಧರ ಭೋಸಲೆ, ಚಿದಾನಂದ ದೊಡಮನಿ, ಅಲ್ತಾಫ್​ ಜಹಾಗೀರದಾರ, ವಿಜಯಕುಮಾರ ರಾಠೋಡ, ಅಭಿಜಿತ ಮುನವಳ್ಳಿ ಇತರರಿದ್ದರು.
ಗೆಬು ಜೈನೇಖಾನ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಮಾದರ ಸ್ವಾಗತಿಸಿದರು. ಪವನ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net