ಪತ್ರಕರ್ತರಿಂದ ಸಮಾಜದ ಕಣ್ತೆರೆಸುವ ಕಾರ್ಯ

 ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಕಾರ್ಯಕ್ರಮವನ್ನು ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​ ಉದ್ಘಾಟಿಸಿದರು. ಮಲ್ಲಿನಾಥ ರಾವೂರ, ಪರಶುರಾಮ ವನಂಜಕರ್​, ಬಾಬುರಾವ ಯಡ್ರಾಮಿ, ರಾಜಕುಮಾರ ಉದನೂರ, ಕೆ.ರಮೇಶ ಭಟ್ಟ. ಡಾ.ಫಾರೂಕ್​ ಮಣ್ಣೂರ ಇತರರಿದ್ದರು.
ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಕಾರ್ಯಕ್ರಮವನ್ನು ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​ ಉದ್ಘಾಟಿಸಿದರು. ಮಲ್ಲಿನಾಥ ರಾವೂರ, ಪರಶುರಾಮ ವನಂಜಕರ್​, ಬಾಬುರಾವ ಯಡ್ರಾಮಿ, ರಾಜಕುಮಾರ ಉದನೂರ, ಕೆ.ರಮೇಶ ಭಟ್ಟ. ಡಾ.ಫಾರೂಕ್​ ಮಣ್ಣೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ ಮತ್ತಿಮಡು ಬಣ್ಣನೆ
  • ಶಹಾಬಾದ್​ನಲ್ಲಿ ಪತ್ರಿಕಾ ದಿನಾಚರಣೆ
ಶಹಾಬಾದ್​: ಎಲ್ಲ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಬರೆಯುವ ಮೂಲಕ ಸಮಾಜದ ಕಣ್ಣು ತೆರೆಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಪಾರ್ವತಿ ಸಭಾಗೃಹದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಛಾಯಾಚಿತ್ರ ಪ್ರದರ್ಶನ ಹಾಗೂ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಶಹಾಬಾದ್​ ಪತ್ರಕರ್ತರು ರಾಜಕೀಯ ರಹಿತ ವರದಿ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಪತ್ರಕರ್ತರು ಸ್ಥಳವನ್ನು ಗುರುತಿಸಿದರೆ, ಪತ್ರಿಕಾ ಭವನಕ್ಕೆ ಅನುದಾನ ನೀಡುವುದಾಗಿ ಈಗಾಗಲೇ ಹೇಳಿದ್ದು, ಈ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದರು.
ಪಿಐ ಪರಶುರಾಮ ವನಂಜಕರ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಐ ಮೂಲಕ ಸುದ್ದಿಗಳನ್ನು ತಿರುಚುವ, ಸಮಾಜದ ಸ್ವಾಸ್ಥ್ಯಾ ಕೆಡಿಸುವ ಕೆಲಸ ಹೆಚ್ಚು ನಡೆಯುತ್ತಿವೆ. ಜನರು ಅಂತಹ ಸುದ್ದಿಗಳ ಬಗ್ಗೆ ಎಚ್ಚರವಹಿಸಬೇಕು. ಆದರೆ ಪತ್ರಿಕಾ ಮಾಧ್ಯಮಗಳು ಯಾವುದೇ ವಿಷಯವಿರಲಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ಮಾಡುತ್ತಾರೆ. ಹೀಗಾಗಿ ಮುದ್ರಣ ಮಾಧ್ಯಮ ತನ್ನ ಮಹತ್ವ ಕಾಪಾಡಿಕೊಂಡಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಸಾಮಾಜಿಕ, ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಇಂದಿಗೂ ಪತ್ರಿಕೆಗಳು ಜನರ ಭರವಸೆ ಉಳಿಸಿಕೊಂಡಿವೆ. ಇಂದು ಅನಧಿಕೃತ ಪತ್ರಕರ್ತರು ಹೆಚ್ಚಿದ್ದು, ಅಂತವರ ವಿರುದ್ಧ ಕ್ರಮಕ್ಕೆ ರಾಜ್ಯ ಸಮಿತಿಗೆ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.
ಸಮಾಜ ಸೇವಕ ಡಾ.ಫಾರೂಕ್​ ಮಣ್ಣೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ ಮಾತನಾಡಿದರು.
ಛಾಯಾಗ್ರಾಹಕ ನಾಯರಾಣ ಜೋಶಿ, ಖಾಜಾ ಪಟೇಲ್​ ಕಲ್ಲಬೇನೂರ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ತಾಪಂ ಇಒ ಮಲ್ಲಿನಾಥ ರಾವೂರ ಚಾಲನೆ ನೀಡಿದರು. ಕಾಡಾ ಅಧ್ಯಕ್ಷ ಡಾ.ಎಂ.ರಶೀದ್​ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಕೆ.ರಮೇಶ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ರಾಜಕುಮಾರ ಉದನೂರ, ಜಿಲ್ಲಾ ಕಾರ್ಯದರ್ಶಿ ವಾಸುದೇವ್​ ಚವ್ಹಾಣ್​, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ಪ್ರಕಾಶ ಜೈನ್​, ಶರಣಗೌಡ ಪೊಲೀಸ್​ ಪಾಟೀಲ್​, ಅಪ್ಪಾರಾವ ಮಾಲಿಪಾಟೀಲ್​, ಮಲ್ಲಣ್ಣ ಅಲ್ಲೂರ, ಮಲ್ಲಿಕಾರ್ಜುನ ಇಟಗಿ, ಈಶ್ವರ ಮುಗುಳನಾಗಾವ್​, ಮೃತ್ಯುಂಜಯ ಸ್ವಾಮಿ, ವಿಶ್ವಾರಾಧ್ಯ ಬಿರಾಳ, ಶರಣಬಸಪ್ಪ ಕೋಬಾಳ, ಬಾಬುರಾವ ಪಂಚಾಳ, ರಾಜೇಶ ಯನಗುಂಟಿಕರ್​, ಶರಣು ಪಗಲಾಪುರ, ನಿಂಗಣ್ಣ ಹುಳಗೋಳ, ಭೀಮರಾವ ಸಾಳೊಂಕೆ, ಕಾಶಣ್ಣ ಚನ್ನೂರ, ಶಿವುಕುಮಾರ ಇಂಗಿನಶೆಟ್ಟಿ, ಡಾ.ಅಹ್ಮದ್​ ಪಟೇಲ್​, ಶೇರ್​ ಅಲಿ, ಚಾಂದ್​ಪಾಶಾ, ಮಹ್ಮದ್​ ಉಬೇದುಲ್ಲಾ, ಶಿವಲಿಂಗಪ್ಪ ಹೆಬ್ಬಾಳಕರ್​, ಮರಲಿಂಗ ಯಾದಗಿರಿ, ಶಂಕರ ಜಾನಾ, ಕೃಷ್ಣಪ್ಪ ಕರಣಿಕ, ಪತ್ರಕರ್ತರಾದ ಮಹ್ಮದ್​ ಮುಸ್ತಾಕ್​, ದಾಮೋಧರ ಭಟ್ಟ, ಸಿದ್ದರಾಜ ಮಲ್ಕಂಡಿ, ಸಾಬಣ್ಣ ಗುಡುಬಾ, ವಿಕ್ರಮ ನಿಂರ್ಬಗಾ, ದಯಾನಂದ ಖಜೂರಿ, ವಿಜಯಕುಮಾರ ನೀಲಗಾರ, ಬಾಬಾ ಖಾನ್​, ಶಶಿಕಾಂತ ಮಡಿವಾಳ ಇತರರಿದ್ದರು.
ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಸಿದ್ದ ಹರವಾಳ, ನಿಂಗಣ್ಣ ಸಂಗಾವಿಕರ, ಭಾಗ್ಯಶ್ರೀ, ರೇವಮ್ಮ ಗುಲಜಾರಕರ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಲೋಹಿತ ಕಟ್ಟಿ ನಿರೂಪಣೆ ಮಾಡಿದರು. ನಿಂಗಣ್ಣ ಜಂಬಗಿ ಸ್ವಾಗತಿಸಿದರು. ಶಿವುಕುಮಾರ ಕುಸಾಳೆ ವಂದಿಸಿದರು.
1 ಲಕ್ಷ ರೂ.ಗಳ ಆರೋಗ್ಯ ವಿಮೆ
ಶಹಾಬಾದ್​ ತಾಲೂಕಿನ ಪತ್ರಕರ್ತರು ವಿಶಿಷ್ಟವಾಗಿದ್ದು, ರಾಜಕೀಯ ರಹಿತ ವರದಿ ಮಾಡುವ ಮೂಲಕ ಅಭಿವೃದ್ಧಿಗಾಗಿ ಕೆಲಸ ಮಾಡತ್ತಿದ್ದಾರೆ. ಸಾಮಾಜಿಕ ಕಳಕಳಿಯ ಪ್ರಬುದ್ಧ ಪತ್ರಕರ್ತರಾಗಿದ್ದಾರೆ. ಹೀಗಾಗಿ ಶಹಾಬಾದ್​ನ ಎಲ್ಲ ಪತ್ರಕರ್ತರಿಗೆ 1 ಲಕ್ಷ ರೂ.ಗಳ ಆರೋಗ್ಯ ವಿಮೆ ಮಾಡಿಸುವೆ ಎಂದು ಸಾಮಾಜಿಕ ಕಾರ್ಯಕರ್ತ, ಮಣ್ಣೂರ ಆಸ್ಪತ್ರೆ ಮುಖ್ಯಸ್ಥ ಡಾ.ಫಾರೂಕ್​ ಮಣ್ಣೂರ ಘೋಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net