ಪತ್ರಕರ್ತರ ನಿಸ್ವಾರ್ಥ ಸೇವೆ ಶ್ಲಾಘನೀಯ

ರಾಮದುರ್ಗ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಪ್ರಕಾಶ ಗಾಯಕವಾಡ ಉದ್ಘಾಟಿಸಿದರು. ಮಲ್ಲಿಕಾರ್ಜುನ ಸಿದ್ದಣ್ಣವರ, ಡಾ.ಬಸು ಬೇವಿನಗಿಡದ ಇತರರಿದ್ದರು.
ರಾಮದುರ್ಗ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಪ್ರಕಾಶ ಗಾಯಕವಾಡ ಉದ್ಘಾಟಿಸಿದರು. ಮಲ್ಲಿಕಾರ್ಜುನ ಸಿದ್ದಣ್ಣವರ, ಡಾ.ಬಸು ಬೇವಿನಗಿಡದ ಇತರರಿದ್ದರು.
Published on
ರಾಮದುರ್ಗ: ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿದು, ಸಾರ್ವಜನಿಕರ ಧ್ವನಿಯಾಗಿ ಬಸವಾದಿ ಶರಣರ ಚಳವಳಿಯ ಮುಂದುವರಿದ ಭಾಗವಾಗಿ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.
ಸಿ.ಎಸ್​.ಬೆಂಬಳಗಿ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರೆಸ್​ಕ್ಲಬ್​ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಹಸೀಲ್ದಾರ್​ ಪ್ರಕಾಶ ಗಾಯಕವಾಡ ಮಾತನಾಡಿ, ಸಮಾಜದಲ್ಲಿ ನಡೆಯುವ ಕೆಟ್ಟ ಸುದ್ದಿಗಳನ್ನಷ್ಟೇ ವೈಭವೀಕರಣ ಮಾಡದೇ, ಸಮಾಜಮುಖಿ ಚಿಂತನೆಯುಳ್ಳ ಒಳ್ಳೆಯ ಸುದ್ದಿ ಪ್ರಚಾರ ಮಾಡಬೇಕು ಎಂದರು.
ಆಕಾಶವಾಣಿ ವಿಶ್ರಾಂತ ನಿರ್ದೇಶಕ ಡಾ.ಬಸು ಬೇವಿನಗಿಡದ, ಡಿವೈಎಸ್​ಪಿ ಚಿದಂಬರ ಮಡಿವಾಳರ, ಪ್ರೆಸ್​ಕ್ಲಬ್​ ಅಧ್ಯ ರವಿ ಸದಾಶಿವನವರ, ವಿದ್ಯಾ ಪ್ರಸಾರಕ ಸಮಿತಿ ಅಧ್ಯ ಪ್ರೊ.ಎಸ್​.ಎಸ್​.ಸುಲ್ತಾನಪುರ ಮಾತನಾಡಿದರು. ಪತ್ರಕರ್ತರಾದ ಚನ್ನಪ್ಪ ಮಾದರ, ಗೋವಿಂದ ಮೋಡಕ, ಗುರುಲಿಂಗ ಮನವಳ್ಳಿ, ಶಿವರಡ್ಡಿ ಜಗಾಪುರ, ಡಾ.ರೇವಣಸಿದ್ಧಪ್ಪ ಕುಳ್ಳೂರ, ರಾಮಚಂದ್ರ ಯಾದವಾಡ, ಮುತ್ತು ಕಮ್ಮಾರ, ಶಿವಾನಂದ ಸಾಲಾಪುರ, ಈರಣ್ಣ ಬುಡ್ಡಾಗೋಳ, ಮಲ್ಲಿಕಾರ್ಜುನರಡ್ಡಿ ಗೊಂದಿ, ಗೌಡಪ್ಪಗೌಡ ಪಾಟೀಲ, ಐ.ಆರ್​.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net